ETV Bharat / bharat

ಅತ್ತಿಗೆಯೊಂದಿಗೆ ಕಲಹ: ಇಬ್ಬರು ಹೆಣ್ಣು ಮಕ್ಕಳೊಂದಿಗೆ ಆತ್ಯಹತ್ಯೆ

ತೆಲಂಗಾಣದ ಆದಿಲಾಬಾದ್ ಜಿಲ್ಲೆಯ ಇಚೋಡಾದಲ್ಲಿ ಮಹಿಳೆಯೊಬ್ಬಳು ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಯಹತ್ಯೆಗೆ ಯತ್ನ. ಇಚೋಡಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ತನಿಖೆ.

Vedashree and Pragya Vennela are daughters
ವೇದಶ್ರೀ ಹಾಗೂ ಪ್ರಜ್ಞಾ ವೆನ್ನೆಲಾ ಹೆಣ್ಣುಮಕ್ಕಳು
author img

By

Published : Dec 30, 2022, 12:56 PM IST

Updated : Dec 30, 2022, 1:07 PM IST

ಇಚೋಡಾ( ತೆಲಂಗಾಣ): ಮಹಿಳೆಯೊಬ್ಬಳು ತನ್ನ ಹೆಣ್ಣು ಮಕ್ಕಳೊಂದಿಗೆ ಬೆಂಕಿ ಹಚ್ಚಿಕೊಂಡು ಆತ್ಯಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಆದಿಲಾಬಾದ್ ಜಿಲ್ಲೆಯ ಇಚೋಡಾದಲ್ಲಿ ಗುರುವಾರ ನಡೆದಿದೆ. ಬಜರಹತ್ನೂರು ಮಂಡಲದ ಪಿಪ್ಪಿರಿ ಗ್ರಾಮದ ವೇದಶ್ರೀ (23) ಹೆಣ್ಣು ಮಕ್ಕಳಾದ ಪ್ರಜ್ಞಾ (5) ಮತ್ತು ವೆನ್ನೆಲಾ (3) ಮೃತರು.

ಬಜರಹತ್ನೂರು ಮಂಡಲದ ಪಿಪ್ಪಿರಿ ಗ್ರಾಮದ ವೇದಶ್ರೀ (23) ಅವರು 2015 ರಲ್ಲಿ ಐಚೋಡ ಮಂಡಲ ಕೇಂದ್ರದ ಪ್ರಶಾಂತ್ ಅವರನ್ನು ವಿವಾಹವಾಗಿದ್ದರು. ಮದುವೆಯಾಗಿ ಈಗ ಏಳು ವರ್ಷ ಕಳೆದು ಹೋಗಿವೆ. ಎರಡು ಹೆಣ್ಣು ಮಕ್ಕಳು ಇವೆ. ಅಂದು ಗುರುವಾರ ಪತಿ ಕೆಲಸಕ್ಕೆ ಹೋಗಿದ್ದರು. ಅತ್ತಿಗೆಯ ಜತೆ ಸಣ್ಣಪುಟ್ಟ ಕಲಹದಿಂದ ಬೇಸತ್ತಿದ್ದ ಮಹಿಳೆ ಕ್ಷಣದಲ್ಲಿ ಸಾಯಲು ನಿರ್ಧರಿಸಿದ್ದಾರೆ. ಮನೆಯಲ್ಲಿದ್ದ ವೇದಶ್ರೀ ತನ್ನ ಹೆಣ್ಣು ಮಕ್ಕಳನ್ನು ಕರೆದುಕೊಂಡು ಅಡುಗೆ ಕೋಣೆಗೆ ಹೋಗಿ, ಸಿಟ್ಟಿನ ಭರದಲ್ಲಿ ಮಹಿಳೆ ತನ್ನ ಎರಡು ಮಕ್ಕಳಿಗೂ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಮೃತಪಟ್ಟಿದ್ದಾರೆ.

ಪೊಲೀಸರಿಂದ ಮಾಹಿತಿ:ಪೊಲೀಸರ ಪ್ರಕಾರ, ಬಜರಹತ್ನೂರು ಮಂಡಲದ ಪಿಪ್ಪಿರಿ ಗ್ರಾಮದ ವೇದಶ್ರೀ (23) 2015 ರಲ್ಲಿ ಐಚೋಡ ಮಂಡಲ ಕೇಂದ್ರದ ಪ್ರಶಾಂತ್ ಅವರನ್ನು ವಿವಾಹವಾಗಿದ್ದರು. ಪ್ರಶಾಂತ್ ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ದಂಪತಿಗೆ ಪ್ರಜ್ಞಾ (5) ಮತ್ತು ವೆನ್ನೆಲಾ (3) ಎಂಬ ಹೆಣ್ಣು ಮಕ್ಕಳಿದ್ದರು.

ಇಚೋಡಾದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಗುರುವಾರ ಪತಿ ಕೆಲಸಕ್ಕೆ ಹೋಗಿದ್ದ ವೇಳೆ ಮನೆಯಲ್ಲಿದ್ದ ವೇದಶ್ರೀ ತನ್ನ ಹೆಣ್ಣು ಮಕ್ಕಳನ್ನು ಕರೆದುಕೊಂಡು ಅಡುಗೆ ಕೋಣೆಗೆ ಹೋಗಿ, ಮಕ್ಕಳೊಂದಿಗೆ ತನ್ನ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮೂರು ಜೀವಿ ಸಜೀವದಹನ: ಮನೆಯೊಳಗೆ ಹೊಗೆ ಬರುತ್ತಿರುವುದನ್ನು ಗಮನಿಸಿದ ತಕ್ಷಣ ಸ್ಥಳೀಯರು ಕುಟುಂಬ ಸದಸ್ಯರಿಗೆ ಮಾಹಿತಿ ರವಾನಿಸಿದ್ದಾರೆ. ಅವರು ಬಂದು ಬಾಗಿಲು ತೆಗೆಯಲು ಯತ್ನಿಸಿದ್ದಾರೆ, ಅದು ಬರಲಿಲ್ಲ, ಕೊನೆಗೆ ಬಾಗಿಲು ಮುರಿದು ತೆಗೆದು ಮಹಿಳೆ ಹಾಗೂ ಮಕ್ಕಳಿಗೆ ತಗುಲಿದ್ದ ಬೆಂಕಿ ನಂದಿಸಿದ್ದಾರೆ.

ಆದರೆ, ತೀವ್ರವಾಗಿ ಸುಟ್ಟಿದ್ದ ವೇದಶ್ರೀ ಸ್ಥಳದಲ್ಲೇ ಮೃತಪಟ್ಟಿದ್ದರು. ಆದರೆ, ಗಾಯಗೊಂಡಿದ್ದ ಎರಡು ಹೆಣ್ಣು ಮಕ್ಕಳನ್ನು ಉಳಿಸಲು ಸ್ಥಳೀಯ ರಿಮ್ಸ್ ಗೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಪಡೆಯುತ್ತಿದ್ದ ಪುತ್ರಿಯರಾದ ಪ್ರಜ್ಞಾ ಹಾಗೂ ವೆನ್ನೆಲಾ ಎರಡು ಗಂಟೆಯ ನಂತರ ಮೃತರಾಗಿದ್ದಾರೆ. ವೇದಶ್ರೀ ಹಾಗೂ ಅತ್ತಿಗೆ ನಡುವೆ ಇರುವ ಕಲಹದಿಂದ ಮೂರು ಜೀವಿಗಳು ಸಜೀವದಹನವಾದರು. ಈ ಪ್ರಕರಣ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂಓದಿ:ಆಸ್ತಿ ವಿಚಾರಕ್ಕೆ ಗಲಾಟೆ: ಬಂದೂಕಿನಿಂದ ಗುಂಡು ಹಾರಿಸಿ ಕೊಲೆ ಯತ್ನ

Last Updated : Dec 30, 2022, 1:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.