ETV Bharat / bharat

Adani Groups.. ಅದಾನಿ ಗ್ರೂಪ್​ಗೆ ಬಿಗ್​ ಶಾಕ್​: 3 ವಿದೇಶಿ ನಿಧಿಗಳ ಖಾತೆ ಸೀಜ್​

ನ್ಯಾಷನಲ್ ಸೆಕ್ಯುರಿಟೀಸ್ ಡಿಪಾಸಿಟರಿ ಲಿಮಿಟೆಡ್ (ಎನ್ಎಸ್‌ಡಿಎಲ್) ಮೂರು ವಿದೇಶಿ ನಿಧಿಗಳ ಖಾತೆಗಳನ್ನು ಸೀಜ್​ ಮಾಡಿದೆ. ಈ ವಿದೇಶಿ ನಿಧಿಗಳು ಅದಾನಿ ಗ್ರೂಪ್‌ನ 4 ಸಂಸ್ಥೆಗಳಲ್ಲಿ ಸುಮಾರು 43,500 ಕೋಟಿ ರೂ. ಪಾಲುದಾರಿಕೆಯನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಇಂದು ಮುಂಜಾನೆಯಿಂದ ಅದಾನಿ ಗ್ರೂಪ್‌ನ ಕೆಲ ಷೇರುಗಳು ತೀವ್ರ ಹಿನ್ನಡೆ ಅನುಭವಿಸಿದೆ

ಗೌತಮ್​ ಅದಾನಿ ಆಸ್ತಿ
ಗೌತಮ್​ ಅದಾನಿ ಆಸ್ತಿ
author img

By

Published : Jun 14, 2021, 4:58 PM IST

ನವದೆಹಲಿ: ಇಂದು ಮುಂಜಾನೆಯಿಂದ ಅದಾನಿ ಗ್ರೂಪ್‌ನ ಕೆಲ ಷೇರುಗಳು ತೀವ್ರ ಹಿನ್ನಡೆ ಅನುಭವಿಸಿದೆ. ಅದಾನಿ ಗ್ರೂಪ್‌ನಲ್ಲಿ ಹೂಡಿಕೆ ಮಾಡಿರುವ ಮೂರು ವಿದೇಶಿ ನಿಧಿಗಳ ಖಾತೆಗಳು ಮುಟ್ಟುಗೋಲು ಆಗಿರುವುದು ಇದಕ್ಕೆ ಕಾರಣ ಎನ್ನಲಾಗುತ್ತಿದೆ.

ನ್ಯಾಷನಲ್ ಸೆಕ್ಯುರಿಟೀಸ್ ಡಿಪಾಸಿಟರಿ ಲಿಮಿಟೆಡ್ (ಎನ್ಎಸ್‌ಡಿಎಲ್) ಮೂರು ವಿದೇಶಿ ನಿಧಿಗಳ ಖಾತೆಗಳನ್ನು ಸೀಜ್​ ಮಾಡಿದೆ. ಈ ವಿದೇಶಿ ನಿಧಿಗಳು ಅದಾನಿ ಗ್ರೂಪ್‌ನ 4 ಸಂಸ್ಥೆಗಳಲ್ಲಿ ಸುಮಾರು 43,500 ಕೋಟಿ ರೂ. ಪಾಲುದಾರಿಕೆ ಹೊಂದಿದೆ ಎಂದು ತಿಳಿದು ಬಂದಿದೆ.

ಇನ್ನು ಈ ಮೂರು ವಿದೇಶಿ ನಿಧಿಗಳಲ್ಲಿ ಶೇರ್‌ ಹೊಂದಿರುವ ಹಿನ್ನೆಲೆಯಲ್ಲಿ ಅದಾನಿ ಗ್ರೂಪ್​ನ ಷೇರಿನಲ್ಲಿ ತೀವ್ರ ಕುಸಿತ ಕಂಡಿದೆ. ಈ ಮಾಹಿತಿ ಠೇವಣಿದಾರರ ವೆಬ್‌ಸೈಟ್‌ನಲ್ಲಿ ಪ್ರಕಟವಾಗಿದ್ದು, ಅಲ್ಬುಲಾ ಇನ್ವೆಸ್ಟ್‌ಮೆಂಟ್ ಫಂಡ್, ಕ್ರೆಸ್ಟಾ ಫಂಡ್ ಮತ್ತು ಎಪಿಎಂಎಸ್ ಇನ್ವೆಸ್ಟ್‌ಮೆಂಟ್ ಫಂಡ್‌ನ ಖಾತೆಗಳನ್ನು ಮೊಟಕುಗುಳಿಸಿರುವ ಬಗ್ಗೆ ತಿಳಿಸಲಾಗಿದೆ.

ಈಗಾಗಲೇ ಅಕೌಂಟ್‌ ಫ್ರೀಜ್‌ ಆಗಿರುವ ಕಾರಣ ನಿಧಿಗಳಿಗೆ ಅಸ್ತಿತ್ವದಲ್ಲಿರುವ ಯಾವುದೇ ಸೆಕ್ಯೂರಿಟಿಗಳನ್ನು ಮಾರಾಟ ಮಾಡಲು ಅಥವಾ ಯಾವುದೇ ಹೊಸ ಸೆಕ್ಯೂರಿಟಿಗಳನ್ನು ಖರೀದಿಸಲು ಸಾಧ್ಯವಾಗುವುದಿಲ್ಲ. ಮನಿ ಲಾಂಡರಿಂಗ್ ತಡೆಗಟ್ಟುವಿಕೆ ಕಾಯ್ದೆ ಪಿಎಂಎಲ್ಎ ಅಡಿ ಲಾಭದಾಯಕ ಮಾಲೀಕತ್ವದ ಬಗ್ಗೆ ಈ ವಿದೇಶಿ ನಿಧಿಗಳು ಮಾಹಿತಿಯನ್ನು ಸಾಕಷ್ಟು ಬಹಿರಂಗಪಡಿಸದ ಕಾರಣ ಮೂರು ಖಾತೆಗಳ ಸ್ಥಗಿತವಾಗಿದೆ ಎಂದು ವಿದೇಶಿ ಹೂಡಿಕೆದಾರರನ್ನು ನಿಭಾಯಿಸುವ ಕಸ್ಟೋಡಿಯನ್ ಬ್ಯಾಂಕುಗಳ ಅಧಿಕಾರಿಗಳು ತಿಳಿಸಿದ್ದಾರೆ.

ಕೊರೊನಾ ಸಂದರ್ಭದಲ್ಲೂ ಸಹ ಗೌತಮ್​ ಅದಾನಿ ಆಸ್ತಿ 3 ಲಕ್ಷ ಕೋಟಿ ರೂ. ಹೆಚ್ಚಳ ಕಂಡಿತ್ತು. ಇನ್ನು ಇದರ ಬಗ್ಗೆ ಅದಾನಿ ಗ್ರೂಪ್ ಯಾವುದೇ ಹೇಳಿಕೆ ಬಿಡುಗಡೆ ಮಾಡಿರಲಿಲ್ಲ. ಇನ್ನು ಈ ಎಲ್ಲಾ ವಿದೇಶಿ ನಿಧಿಗಳು ಮಾರಿಷಸ್ ಮೂಲದಾಗಿದ್ದು, ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾದಲ್ಲಿ (ಸೆಬಿ) ವಿದೇಶಿ ಬಂಡವಾಳ ಹೂಡಿಕೆದಾರರಾಗಿ (ಎಫ್‌ಪಿಐ) ನೋಂದಾಯಿಸಲಾಗಿದೆ. ಮೂರು ಸಂಸ್ಥೆಗಳು ಒಟ್ಟಾಗಿ ಅದಾನಿ ಎಂಟರ್‌ಪ್ರೈಸಸ್‌ನಲ್ಲಿ ಶೇ 6.82, ಪಾಲುದಾರಿಕೆ ಹೊಂದಿದ್ದು, ಅದಾನಿ ಟ್ರಾನ್ಸ್‌ಮಿಷನ್‌ನಲ್ಲಿ ಶೇ 8.03, ಅದಾನಿ ಟೋಟಲ್ ಗ್ಯಾಸ್‌ನಲ್ಲಿ ಶೇ 5.92, ಮತ್ತು ಅದಾನಿ ಗ್ರೀನ್‌ನಲ್ಲಿ ಶೇ 3.58 ರಷ್ಟ ಪಾಲುದಾರಿಕೆ ಹೊಂದಿದೆ.

ಸದ್ಯ ಆರು ಅದಾನಿ ಗ್ರೂಪ್ ಕಂಪನಿಗಳಾದ ಅದಾನಿ ಎಂಟರ್‌ಪ್ರೈಸಸ್, ಅದಾನಿ ಪೋರ್ಟ್ಸ್ ಮತ್ತು ಸ್ಪೆಷಲ್​ ಎಕಾನಮಿಕ್​ ಝೋನ್​, ಅದಾನಿ ಪವರ್, ಅದಾನಿ ಟ್ರಾನ್ಸ್‌ಮಿಷನ್, ಅದಾನಿ ಗ್ರೀನ್ ಎನರ್ಜಿ ಮತ್ತು ಅದಾನಿ ಟೋಟಲ್ ಗ್ಯಾಸ್ ಷೇರುಗಳ ಮೇಲೆ ತೀವ್ರ ಪರಿಣಾಮ ಬೀರಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.