ಶಿಮ್ಲಾ/ಹಿಮಾಚಲಪ್ರದೇಶ : ಬಾಲಿವುಡ್ ಡಿಂಪಲ್ ಗರ್ಲ್ ಎಂದೇ ಜನಪ್ರಿಯವಾಗಿರುವ ಪ್ರೀತಿ ಜಿಂಟಾ ಅವರ ಮನೆ ಸುತ್ತಲೂ ಸೇಬು ಮರಗಳಿಂದ ಆವೃತವಾಗಿದೆ. ಇದು ಆ್ಯಪಲ್ ಸೀಸನ್ ಆಗಿರುವುದರಿಂದ ಸೇಬು ಮರಗಳಿಂದಾಗಿ ಅವರ ಮನೆ ವಾತಾವರಣ ಬಹಳ ಸುಂದರವಾಗಿ ಕಾಣುತ್ತಿದೆ. ಪ್ರೀತಿ ಜಿಂಟಾ ಸೇಬಿನ ತೋಟಗಳ ನಡುವೆ ಅಲೆದಾಡುತ್ತಾ ಅಲ್ಲಿನ ಆಕರ್ಷಕ ವಾತಾವರಣವನ್ನು ಆನಂದಿಸುತ್ತಿದ್ದಾರೆ.
ಈ ಬಗ್ಗೆ ವಿಡಿಯೋವೊಂದನ್ನು ಹಂಚಿಕೊಂಡಿರುವ ಬಾಲಿವುಡ್ನ ಈ ಖ್ಯಾತ ನಟಿ, ವಿಡಿಯೋದಲ್ಲಿ ಅವರು ತಮ್ಮ ಮನೆಯ ಸಮೀಪದ ಸೇಬು ಹಣ್ಣಿನ ತೋಟದಲ್ಲಿ ತಿರುಗಾಡಿದ್ದು, ಹಿಮಾಚಲ ಪ್ರದೇಶದ ಸೇಬನ್ನು ವಿಶ್ವದ ಅತ್ಯುತ್ತಮ ಆ್ಯಪಲ್ ಗಳು ಎಂದು ವಿವರಿಸಿದ್ದಾರೆ.
ಬಹಳ ದಿನಗಳ ನಂತರ ಹುಟ್ಟೂರಿನ ಮನೆಗೆ ಬಂದಿದ್ದು, ಬಹಳ ಸಂತಸವಾಗಿದೆ ಎಂದಿದ್ದಾರೆ. ಸೇಬು ತೋಟಗಳನ್ನು ನೋಡಿ ನನ್ನ ಬಾಲ್ಯದ ದಿನಗಳು ನೆನಪಾಗುತ್ತಿವೆ ಎಂದಿದ್ದಾರೆ. ಕೊನೆಗೂ ನಾನು ಕೃಷಿಕಳಾದೆ ಎಂದು ಖುಷಿ ಹಂಚಿಕೊಂಡಿದ್ದಾರೆ.
ಆಗಸ್ಟ್ 20ರಂದು ಪ್ರೀತಿ ಜಿಂಟಾ ಶಿಮ್ಲಾಕ್ಕೆ ಬಂದಿದ್ದಾರೆ. ಶಿಮ್ಲಾದಲ್ಲಿ ತಮ್ಮ ಪೂರ್ವಿಕರ ಮನೆಯಲ್ಲಿದ್ದಾರೆ. ಮೊದಲಿನಿಂದಲೂ ಪರಿಸರದ ಬಗ್ಗೆ ಅತಿ ಹೆಚ್ಚು ಕಾಳಜಿ ವ್ಯಕ್ತಪಡಿಸುತ್ತಾ ಬಂದಿರುವ ಪ್ರೀತಿ, ತೋಟವು ನಮ್ಮೆಲ್ಲರ ನೈತಿಕ ಹೊಣೆಗಾರಿಕೆಯಾಗಿದೆ ಎಂದು ಬರೆದಿದ್ದಾರೆ.
ಇದರಿಂದ ಮುಂಬರುವ ಪೀಳಿಗೆಯು ಪರ್ವತಗಳ ಸೌಂದರ್ಯ ಮತ್ತು ಶುದ್ಧ ಗಾಳಿಯನ್ನು ಆನಂದಿಸಬಹುದು. ಇಂದು ಪ್ರಪಂಚವು ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನದ ಸಮಸ್ಯೆ ಎದುರಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಗಿಡಗಳನ್ನು ನೆಡುವ ಮೂಲಕ ಪರಿಸರ ಸ್ವಚ್ಛಗೊಳಿಸುವುದು ಬಹಳ ಮುಖ್ಯ ಎಂದಿದ್ದಾರೆ.
ಇದನ್ನೂ ಓದಿ:ಏರ್ಪೋರ್ಟ್ನಲ್ಲಿ ಸಲ್ಮಾನ್ ಖಾನ್ ತಡೆದು ದಾಖಲೆ ಪರಿಶೀಲನೆ, ಅಧಿಕಾರಿಗೆ ಸಂಕಷ್ಟ!