ಮುಂಬೈ: ಮುಂಬೈ ಡ್ರಗ್ಸ್ ಕೇಸ್ನಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ಬಂಧನವಾಗಿದ್ದ ಶಾರುಖ್ ಖಾನ್ ಪುತ್ರನಿಗೆ ಕೊನೆಗೂ ಬೇಲ್ ಸಿಕ್ಕಿದೆ. ಪುತ್ರನಿಗೆ ಜಾಮೀನು ಸಿಗುತ್ತಿದ್ದಂತೆ ನಟ ಶಾರುಖ್ ಖಾನ್ ಕೂಡಲೇ ವಕೀಲರನ್ನ ಭೇಟಿ ಮಾಡಿ, ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಅಕ್ಟೋಬರ್ 2ರಂದು ಎನ್ಸಿಬಿಯಿಂದ ಬಂಧನಕ್ಕೊಳಗಾಗಿದ್ದ ಆರ್ಯನ್ ಖಾನ್ ಪರ ವಾದ ಮಂಡನೆ ಮಾಡಿರುವ ಮುಕುಲ್ ರೋಹಟಿಗಿ ಕೊನೆಗೂ ಆರ್ಯನ್ ಖಾನ್‌ಗೆ ಜಾಮೀನು ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರ್ಯನ್ ಖಾನ್ ಪರ ಮುಕುಲ್ ರೋಹಟಿಗಿ, ಅಮಿತ್ ದೇಸಾಯಿ ಹಾಗೂ ಸತೀಶ್ ಮನ್ಶಿಂದೆ ವಾದ ಮಂಡಿಸಿದ್ದರು. ಸತತ ಮೂರು ದಿನಗಳ ಕಾಲ ವಾದ, ಪ್ರತಿವಾದಗಳನ್ನು ಆಲಿಸಿದ ನಂತರ ಬಾಂಬೆ ಹೈಕೋರ್ಟ್ ಆರ್ಯನ್ ಖಾನ್, ಅರ್ಬಾಜ್ ಮರ್ಚೆಂಟ್, ಮುನ್ಮುನ್ ಧಮೇಚಾ ಅವರಿಗೆ ಜಾಮೀನು ಮಂಜೂರು ಮಾಡಿದೆ. ಇವರ ವಾದದಿಂದಾಗಿ ಜಾಮೀನು ಸಿಗುತ್ತಿದ್ದಂತೆ ತಕ್ಷಣವೇ ವಕೀಲರನ್ನ ಭೇಟಿ ಮಾಡಿ, ಧನ್ಯವಾದ ತಿಳಿಸಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹಟಗಿ, ಶಾರುಖ್ ಖಾನ್ ನನ್ನನ್ನು ಭೇಟಿಯಾದಾಗ ಅವರ ಕಣ್ಣಲ್ಲಿ ಸಂತೋಷದ ಕಣ್ಣೀರು ಇತ್ತು. ಇಂದು ಅವರು ನಿರಾಳರಾಗಿದ್ದರು. ಕಳೆದ ಕೆಲ ದಿನಗಳಿಂದ ನನ್ನೊಂದಿಗೆ ನಿರಂತರವಾಗಿ ಚರ್ಚೆ ಮಾಡ್ತಿದ್ದರು. ಇದೀಗ ಮಗನಿಗೆ ಜಾಮೀನು ಸಿಕ್ಕಿರುವ ಕಾರಣ ನಿರಾಳರಾಗಿದ್ದಾರೆ ಎಂದರು.
ಇದನ್ನೂ ಓದಿರಿ: ಕ್ರೂಸ್ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಪ್ರಕರಣ; ಶಾರುಖ್ ಖಾನ್ ಪುತ್ರ ಆರ್ಯನ್‌ಗೆ ಜಾಮೀನು ಮಂಜೂರು
ಆರ್ಯನ್ ಖಾನ್‌ಗೆ ಜಾಮೀನು ಸಿಕ್ಕಿರುವ ಕಾರಣ ಶನಿವಾರದೊಳಗೆ ಅವರು ರಿಲೀಸ್ ಆಗುವ ಸಾಧ್ಯತೆ ಇದೆ. ಹೀಗಾಗಿ ದೀಪಾವಳಿಯನ್ನ ಕುಟುಂಬದೊಂದಿಗೆ ಆಚರಣೆ ಮಾಡಲಿದ್ದಾರೆ.