ETV Bharat / bharat

ಹಲ್ದ್ವಾನಿ ರ‍್ಯಾಗಿಂಗ್ ಪ್ರಕರಣ: 44 ವಿದ್ಯಾರ್ಥಿಗಳ ವಿರುದ್ಧ ಕ್ರಮ

author img

By

Published : Dec 11, 2022, 6:49 PM IST

ಕಾಲೇಜು ಆಡಳಿತ ಮಂಡಳಿಯು ವಿದ್ಯಾರ್ಥಿಯೊಬ್ಬನಿಗೆ 50 ಸಾವಿರ ರೂಪಾಯಿ ದಂಡ ವಿಧಿಸಿ ಹಾಸ್ಟೆಲ್​ನಿಂದ ಹೊರಹಾಕಿದ್ದಾರೆ. ಅಲ್ಲದೇ ಉಳಿದ 43 ವಿದ್ಯಾಥಿರ್ಗಳಿಗೆ 25 ಸಾವಿರದಂತೆ ದಂಡ ಕಟ್ಟಲು ಹೇಳಿದ್ದಾರೆ.

action-on-44-students-in-case-of-ragging-in-haldwani-government-medical-college
ರ್ಯಾಗಿಂಗ್​ ಪ್ರಕರಣ: 44 ವಿದ್ಯಾರ್ಥಿಗಳ ವಿರುದ್ಧ ಕ್ರಮ

ಹಲ್ದ್ವಾನಿ(ಉತ್ತರಾಖಂಡ): ಹಲ್ದ್ವಾನಿ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಸೀನಿಯರ್ ವಿದ್ಯಾರ್ಥಿಗಳ ಆದೇಶದಂತೆ ಜ್ಯೂನಿಯರ್ ವಿದ್ಯಾರ್ಥಿಗಳು ತಲೆ ಬೋಳಿಸಿಕೊಂಡು ಓಡಾಡುತ್ತಿದ್ದ ಘಟನೆಯೊಂದು ಮುನ್ನಲೆಗೆ ಬಂದಿತ್ತು. ಇದೀಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

ಜ್ಯೂನಿಯರ್​ ವಿದ್ಯಾರ್ಥಿಗಳಿಗೆ ರ‍್ಯಾಗಿಂಗ್ ಮಾಡಿದ ವಿಷಯಕ್ಕೆ ಸಂಬಂಧಿಸಿದಂತೆ 44 ಸೀನಿಯರ್ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಎಂಬಿಬಿಎಸ್​ ದ್ವಿತೀಯ ವರ್ಷದ ವಿದ್ಯಾರ್ಥಿಗಳು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಅಡುಗೆ ಮಾಡಲು ವಿಡಿಯೋ ಕಾಲ್​ ಮೂಲಕ ಹೇಳಿದ್ದಾರೆ. ಅಲ್ಲದೇ ಕೆಲವೊಂದು ವಿದ್ಯಾರ್ಥಿಗಳನ್ನು ತಮ್ಮ ರೂಮಿಗೆ ಕರೆದು ಬಿಳಿ ಕೋಟ್ ಸಮಾರಂಭ(White Coat Ceremony)ದ ಬಗ್ಗೆ ಮಾಹಿತಿ ನೀಡುವಂತೆಯೂ ಹೇಳಿದ್ದಾರೆ. ಈ ಬಗ್ಗೆ ಜೂನಿಯರ್​ ವಿದ್ಯಾರ್ಥಿಯೊಬ್ಬರು ಪ್ರಾಂಶುಪಾಲರಿಗೆ ದೂರು ನೀಡಿದ್ದು, ಬಳಿಕ ಪ್ರಾಂಶುಪಾಲರು ಮತ್ತು ವಾರ್ಡನ್​ ಹಾಸ್ಟೆಲ್​ಗೆ ಆಗಮಿಸಿದ್ದಾರೆ.

ಘಟನೆಗೆ ಸಂಬಂಧಿಸಿ ಕಾಲೇಜು ಆಡಳಿತ ಮಂಡಳಿಯು ಮೊಬೈಲ್ ಬಳಸಿದ ವಿದ್ಯಾರ್ಥಿಯೊಬ್ಬನಿಗೆ 50 ಸಾವಿರ ರೂಪಾಯಿ ದಂಡ ವಿಧಿಸಿ ಹಾಸ್ಟೆಲ್​ನಿಂದ ಹೊರಹಾಕಿದ್ದಾರೆ. ಅಲ್ಲದೇ ಉಳಿದ 43 ವಿದ್ಯಾಥಿರ್ಗಳಿಗೆ 25 ಸಾವಿರದಂತೆ ದಂಡ ಕಟ್ಟಲು ಹೇಳಿದ್ದಾರೆ. ಕಾಲೇಜಿನಲ್ಲಿ ಮುಂದೆ ಈ ರೀತಿಯ ಅಹಿತಕರ ಘಟನೆಗಳು ನಡೆದಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ಎಚ್ಚರಿಸಿದ್ದಾರೆ.

ಇದನ್ನೂ ಓದಿ:ಗುಜರಾತ್​ನ ನೂತನ 40 ಶಾಸಕರ ವಿರುದ್ಧ ಕ್ರಿಮಿನಲ್ ಕೇಸ್​: ಇದರಲ್ಲಿ ಯಾವ ಪಕ್ಷದವರು, ಎಷ್ಟು ಜನ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.