ETV Bharat / bharat

ಕ್ರಿಕೆಟಿಗ ರೋಹಿತ್ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲು.. ಕಾರಣ? - Tamaraikkannan

ಲೈಂಗಿಕ ದೌರ್ಜನ್ಯ ಆರೋಪ ವರದಿ ಮಾಡಲು ವಿಫಲರಾದ ಹಿನ್ನೆಲೆ ತಮಿಳು ನಿರ್ದೇಶಕ ಶಂಕರ್ ಅಳಿಯ, ಕ್ರಿಕೆಟಿಗ ರೋಹಿತ್ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಕ್ರಿಕೆಟಿಗ ರೋಹಿತ್
ಕ್ರಿಕೆಟಿಗ ರೋಹಿತ್
author img

By

Published : Oct 21, 2021, 4:07 PM IST

Updated : Oct 21, 2021, 4:54 PM IST

ಪುದುಚೇರಿ: ಲೈಂಗಿಕ ದೌರ್ಜನ್ಯದ ಆರೋಪ ವರದಿ ಮಾಡಲು ವಿಫಲರಾದ ಹಿನ್ನೆಲೆ ತಮಿಳು ನಿರ್ದೇಶಕ ಶಂಕರ್​​ ಅಳಿಯ, ಕ್ರಿಕೆಟಿಗ ರೋಹಿತ್​​​ ಸೇರಿದಂತೆ ನಾಲ್ವರ ವಿರುದ್ಧ ಮೆಟ್ಟುಪಾಳ್ಯಂ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕ್ರಿಕೆಟಿಗ ರೋಹಿತ್,​ ನಿರ್ದೇಶಕ ಶಂಕರ್ ಪುತ್ರಿ ಐಶ್ವರ್ಯ ಶಂಕರ್ ಅವರನ್ನು ವಿವಾಹವಾಗಿದ್ದಾರೆ.

ಕ್ರಿಕೆಟ್ ತರಬೇತುದಾರ ತಮರೈಕ್ಕಣ್ಣನ್ ತರಬೇತಿಯಲ್ಲಿದ್ದಾಗ 17 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಸಂತ್ರಸ್ತೆಯು ಪುದುಚೇರಿ ಕ್ರಿಕೆಟ್ ಮಂಡಳಿಯ ಅಧಿಕಾರಿಗಳಿಗೆ ದೂರು ನೀಡಿದ್ದಾಳೆ. ಆದರೆ, ಕ್ರಿಕೆಟ್ ಮಂಡಳಿಯ ಸದಸ್ಯರು ಕ್ರಮಕೈಗೊಳ್ಳುವ ಬದಲಾಗಿ ಕೋಚ್​ ಜತೆ ಸಹಕರಿಸುವಂತೆ ಸಲಹೆ ನೀಡಿದ್ದರು ಎನ್ನಲಾಗಿದೆ.

ಬಳಿಕ ಅಪ್ರಾಪ್ತೆ ಮಕ್ಕಳ ಕಲ್ಯಾಣ ಸಮಿತಿಗೆ ದೂರು ನೀಡಿದ್ದು, ಅವರು ಈ ದೂರನ್ನು ಮೆಟ್ಟುಪಾಳ್ಯಂ ಪೊಲೀಸರಿಗೆ ವರ್ಗಾಯಿಸಿದೆ. ದೂರಿನ ಆಧಾರದ ಮೇರೆಗೆ ಪೊಲೀಸರು ಕೋಚ್ ತಾಮರೈಕ್ಕಣ್ಣನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ: ಸ್ನೇಹಿತರಿಗೆ ವಿಡಿಯೋ ಮಾಡಿ ಕಳುಹಿಸಿ ಆತ್ಮಹತ್ಯೆಗೆ ಶರಣಾದ ಡೆಲಿವರಿ ಬಾಯ್​

ಇದರ ಜತೆಗೆ, ದೂರು ಬಂದರೂ ಕ್ರಮ ಕೈಗೊಳ್ಳದ ಆರೋಪದ ಮೇಲೆ ಶಂಕರ್ ಅವರ ಅಳಿಯ ರೋಹಿತ್, ಇನ್ನೊಬ್ಬ ಕೋಚ್ ಜಯಕುಮಾರ್, ಕ್ರಿಕೆಟ್ ಅಸೋಸಿಯೇಶನ್ ಅಧ್ಯಕ್ಷ ದಾಮೋದರನ್, ಕಾರ್ಯದರ್ಶಿ ವೆಂಕಟ್ ಮೇಲೆ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

Last Updated : Oct 21, 2021, 4:54 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.