ETV Bharat / bharat

ಪೊಲೀಸ್ ಲಾಠಿಗೆ ಬಾಲಕಿ ಬಲಿ; ರೊಚ್ಚಿಗೆದ್ದ ಜನರಿಂದ ಪೊಲೀಸ್ ವಾಹನ ಜಖಂ, ಇಬ್ಬರಿಗೆ ಗಾಯ - accused of girl death due to beating of police

ಪೊಲೀಸರ ಲಾಠಿ ಪ್ರಹಾರಕ್ಕೆ ಬಾಲಕಿಯೊಬ್ಬಳು ಸಾವನ್ನಪ್ಪಿದ್ದು, ಮತ್ತೊಬ್ಬ ಬಾಲಕಿ ಗಾಯಗೊಂಡಿದ್ದಾಳೆ ಎಂಬ ಆರೋಪ ಕೇಳಿ ಬಂದಿದೆ. ಉತ್ತರ ಪ್ರದೇಶದ ಸೈದರಾಜ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿದೆ.

accused of girl death due to beating of police
ಪೊಲೀಸರಿಂದ ಲಾಠಿ ಪ್ರಹಾರ ಆರೋಪ: ಬಾಲಕಿ ಸಾವು
author img

By

Published : May 2, 2022, 1:18 PM IST

ಚಾಂದೌಲಿ (ಉತ್ತರ ಪ್ರದೇಶ): ರಾಜ್ಯದ ಸೈದರಾಜ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಪೊಲೀಸರ ಅಟ್ಟಹಾಸ ಬಯಲಾಗಿದೆ. ದಾಳಿಗೆ ಹೋದ ಪೊಲೀಸರ ಲಾಠಿ ಪ್ರಹಾರಕ್ಕೆ ಬಾಲಕಿಯೊಬ್ಬಳು ಸಾವನ್ನಪ್ಪಿದ್ದು, ಮತ್ತೊಬ್ಬ ಬಾಲಕಿ ಗಾಯಗೊಂಡಿದ್ದಾಳೆ. ಪೊಲೀಸರು ಶವ ಬಿಟ್ಟು ಪರಾರಿಯಾಗಿದ್ದಾರೆ. ಬಾಲಕಿ ಸಾವಿನಿಂದ ಆಕ್ರೋಶಗೊಂಡ ಗ್ರಾಮಸ್ಥರು ಸೈದರಾಜ-ಜಮಾನಿಯಾ ರಸ್ತೆ ತಡೆ ನಡೆಸಿ ಅನೇಕ ವಾಹನಗಳನ್ನು ಜಖಂಗೊಳಿಸಿದರು. ಈ ವೇಳೆ ಇಬ್ಬರು ಕಾನ್‌ಸ್ಟೆಬಲ್‌ಗಳು ಗಾಯಗೊಂಡಿದ್ದಾರೆ ಎನ್ನಲಾಗ್ತಿದೆ.

accused of girl death due to beating of police

ಘಟನೆಯ ವಿವರ: ಭಾನುವಾರ ಸಂಜೆ ಸೈದರಾಜ ಪೊಲೀಸರು ಪಾತಕಿ ಕನ್ಹಯ್ಯ ಯಾದವ್ ಎಂಬುವವನ್ನು ಬಂಧಿಸಲು ಗ್ರಾಮಕ್ಕೆ ಬಂದಿದ್ದರು. ಆದರೆ ಆತ ಆದರೆ ಮನೆಯಲ್ಲಿ ಪತ್ತೆಯಾಗಿರಲಿಲ್ಲ. ಆರೋಪಿ ಮನೆಯಲ್ಲಿ ಇಬ್ಬರು ಹೆಣ್ಣು ಮಕ್ಕಳಿದ್ದರು. ಪೊಲೀಸರು ಅವರನ್ನು ತೀವ್ರ ವಿಚಾರಣೆ ನಡೆಸಿದಾಗ ಅವರ ನಡುವೆ ವಾಗ್ವಾದ ನಡೆದಿದೆ. ಇದಾದ ಬಳಿಕ ಪೊಲೀಸರು ಬಾಲಕಿಯರನ್ನು ಥಳಿಸಿದ್ದಾರೆ. ಇದರಲ್ಲಿ ಓರ್ವ ಬಾಲಕಿ ಸಾವನ್ನಪ್ಪಿ, ಇನ್ನೊಬ್ಬಳು ಗಾಯಗೊಂಡಿದ್ದಾಳೆ. ಬಳಿಕ ಪೊಲೀಸರು ಅಲ್ಲಿಂದ ಪರಾರಿಯಾಗಿದ್ದಾರೆ ಎನ್ನಲಾಗ್ತಿದೆ.

ಬಳಿಕ ಡಿಎಂ ಮತ್ತು ಎಸ್​ಪಿ ಸ್ಥಳಕ್ಕೆ ಆಗಮಿಸಿ ಘಟನಾ ಸ್ಥಳದ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ವಿಚಾರಣೆಯ ನಂತರ ಜಿಲ್ಲಾ ಮ್ಯಾಜಿಸ್ಟ್ರೇಟ್, ಸೈದರಾಜ ಪೊಲೀಸ್ ಠಾಣೆಯ ಪ್ರಭಾರಿ ಉದಯ್ ಪ್ರತಾಪ್ ಸಿಂಗ್ ಅವರನ್ನು ಅಮಾನತುಗೊಳಿಸಿದ್ದಾರೆ. ಅಲ್ಲದೇ, ಪ್ರಕರಣ ದಾಖಲಿಸಿಕೊಂಡು ಉನ್ನತ ಮಟ್ಟದ ತನಿಖೆಗೆ ಸೂಚನೆ ನೀಡಲಾಗಿದೆ. ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಟ್ವೀಟ್ ಮಾಡಿ, ರಾಜ್ಯದಲ್ಲಿ ಯೋಗಿ ಸರ್ಕಾರ ಮತ್ತು ಪೊಲೀಸರ ಕಾರ್ಯವೈಖರಿಯ ಬಗ್ಗೆ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಕ್ರೌರ್ಯ! ಮರದ ರೆಂಬೆಗೆ ತಲೆಕೆಳಗಾಗಿ ನೇತುಹಾಕಿ ಯುವಕನಿಗೆ ಥಳಿತ- ವಿಡಿಯೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.