ಸೂರತ್ (ಗುಜರಾತ್): ನಗರದಲ್ಲಿ ಮಧ್ಯವಯಸ್ಕ ವ್ಯಕ್ತಿಯೊಬ್ಬ ಹನಿಟ್ರ್ಯಾಪ್ಗೆ ಸಿಲುಕಿ ನಲುಗಿರುವ ಘಟನೆ ಬೆಳಕಿಗೆ ಬಂದಿದೆ. ಮಧ್ಯವಯಸ್ಕನೊಬ್ಬನಿಂದ ಸುಮಾರು 16.5 ಲಕ್ಷ ರೂಪಾಯಿ ಸುಲಿಗೆ ಮಾಡಿದ ಆರೋಪದ ಮೇಲೆ ನಾಲ್ವರು ಮಹಿಳೆಯರು ಸೇರಿದಂತೆ ಆರು ಮಂದಿಯನ್ನು ಪೊಲೀಸರು ಅರೆಸ್ಟ್ ಮಾಡಿರುವ ಘಟನೆ ಸೂರತ್‌ನಲ್ಲಿ ನಡೆದಿದೆ. ತಮ್ಮ ಮೇಲೆ ಅತ್ಯಾಚಾರ ಆಗಿದೆ ಎಂದು ಆರೋಪಿ ಹೇಳಿದ್ದು, ಮೋಸ ಹೋದ ವ್ಯಕ್ತಿಗೆ ಹಣದ ಬೇಡಿಕೆ ಇಟ್ಟಿದ್ದು, ಕೊಡದಿದ್ದರೆ ದೂರು ನೀಡುವ ಬೆದರಿಕೆ ಹಾಕಿದ್ದರು. ಈ ಸಂಬಂಧದ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಂದ 5.74 ಲಕ್ಷ ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿಸಿದ್ದಾರೆ.
ಏನಿದು ಪ್ರಕರಣ?: ಸಹಾಯಕ ಪೊಲೀಸ್ ಆಯುಕ್ತರು ಟಿ.ಕೆ ಪಟೇಲ್ ಮಾತನಾಡಿ, ’’ಮಹಿಳಾ ಆರೋಪಿ ಕಳೆದ ವರ್ಷ ಡಿಸೆಂಬರ್ 7 ರಂದು ವರಚ್ಚ ನಿವಾಸಿ ಮಧ್ಯವಯಸ್ಕನೊಂದಿಗೆ ಸಾಮಾಜಿಕ ಮಾಧ್ಯಮದ ಮೂಲಕ ಸ್ನೇಹ ಬೆಳೆಸಿದ್ದಾರೆ. ಕೆಲವು ದಿನಗಳ ಚಾಟ್ ಮಾಡಿದ ನಂತರ ಆರೋಪಿ ಮಹಿಳೆ ಫ್ಲಾಟ್‌ಗೆ ಬರಲು ಪುರುಷನಿಗೆ ಕೇಳಿಕೊಂಡಿದ್ದಾಳೆ. ಬಳಿಕ ಆಕೆ ಆ ಪುರಷನನ್ನು ಹರಿಧಾಮ್ ಸೊಸೈಟಿಯ ಫ್ಲಾಟ್‌ಗೆ ಕರೆದೊಯ್ದಿದ್ದಾಳೆ. ಅಲ್ಲಿ ಮಹಿಳೆ ಆರೋಪಿ ಆತನೊಂದಿಗೆ ದೈಹಿಕ ಸಂಬಂಧಕ್ಕೆ ಆಮಿಷವೊಡ್ಡಿದ್ದರು’’ ಎಂದು ಸಹಾಯಕ ಪೊಲೀಸ್ ಆಯುಕ್ತರು ಪ್ರಕರಣದ ಡಿಟೇಲ್ಸ್ ನೀಡುವಾಗ ತಿಳಿಸಿದ್ದಾರೆ.
’’ಇಬ್ಬರು ಏಕಾಂತವಾಗಿ ಕಾಲ ಕಳೆಯುತ್ತಿದ್ದ ಸಂದರ್ಭದಲ್ಲಿ ಫ್ಲಾಟ್‌ಗೆ ಮಹಿಳೆಯ ಕಡೆಯ ತಂಡವೊಂದು ನುಗ್ಗಿ ಅಲ್ಲಿದ್ದ ವ್ಯಕ್ತಿಗೆ ಥಳಿಸಿದ್ದಾರೆ. ಬಳಿಕ ಮಹಿಳಾ ಆರೋಪಿ ಪೊಲೀಸರಿಗೆ ಕರೆ ಮಾಡಿ ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿಸುವುದಾಗಿ ತಾನೇ ಕರೆದ ವ್ಯಕ್ತಿಗೆ ಬೆದರಿಕೆ ಹಾಕಿದ್ದಾಳೆ. ಆರೋಪಿ ಮೊದಲು ಸಂತ್ರಸ್ತನಿಂದ 75 ಲಕ್ಷ ರೂಪಾಯಿ ಬೇಡಿಕೆಯಿಟ್ಟಿದ್ದಾಳೆ. ಸಂತ್ರಸ್ತ ಇದಕ್ಕಾಗಿ ತನ್ನ ಪತ್ನಿಯ ಚಿನ್ನಾಭರಣಗಳನ್ನು ಮಾರಾಟ ಮಾಡಿದ್ದಾನೆ. ಅಷ್ಟೇ ಅಲ್ಲ ಅವನ ಸಂಬಂಧಿಕರಿಂದ ಸ್ವಲ್ಪ ಸಾಲ ಪಡೆದು ಹಣದ ವ್ಯವಸ್ಥೆ ಮಾಡಿದ್ದ ಎಂದು ತನ್ನ ಹೇಳಿಕೆಯಲ್ಲಿ ಮೋಸಕ್ಕೆ ಒಳಗಾದ ವ್ಯಕ್ತಿ ತಿಳಿಸಿದ್ದಾನೆ’’ ಎಂದು ಸಹಾಯಕ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ನಕಲಿ ಪೊಲೀಸರ ಹೆಸರಲ್ಲಿ ವಂಚನೆ: ಡಿಸೆಂಬರ್ 19 ರಂದು ಸಂತ್ರಸ್ತ ವ್ಯಕ್ತಿ ಕೆಲಸಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಇಬ್ಬರು ಆರೋಪಿಗಳು ತಮ್ಮನ್ನು ಪುಣೆ ಪೊಲೀಸ್ ಅಧಿಕಾರಿಗಳು ಎಂದು ಪರಿಚಯಿಸಿಕೊಂಡಿದ್ದರು. ಬಳಿಕ ಆತನ ಬಳಿ ಮಹಿಳೆಯೊಬ್ಬರು ನಿನ್ನ ವಿರುದ್ಧ ದೂರು ದಾಖಲಿಸಿದ್ದಾರೆ.. ನೀನು ಪ್ರಕರಣದಿಂದ ಹೊರಬರಲು ಬಯಸಿದರೆ ಸ್ವಲ್ಪ ಹಣ ಖರ್ಚಾಗುತ್ತದೆ ಎಂದು ನಕಲಿ ಪೊಲೀಸ್ ಅಧಿಕಾರಿಗಳು ಸಂತ್ರಸ್ತನಿಗೆ ತಿಳಿಸಿದ್ದಾರೆ. ಆಗ ಸಂತ್ರಸ್ತ ನಾನು ಏನು ಮಾಡಬೇಕು ಎಂದು ನಕಲಿ ಪೊಲೀಸ್ ಅಧಿಕಾರಿಗಳಿಗೆ ಕೇಳಿದ್ದಾನೆ.
ಈ ವೇಳೆ, ಅವರು ಸುಮಾರು 10 ಲಕ್ಷ ರೂಪಾಯಿ ಖರ್ಚಾಗುತ್ತದೆ ಎಂದು ತಿಳಿಸಿದ್ದಾರೆ. ಆದರೆ ಆರೋಪಿಗಳಿಗೆ ಸಂತ್ರಸ್ತ ಸುಮಾರು 9 ಲಕ್ಷ ರೂಪಾಯಿಗಳನ್ನು ನೀಡಿದ್ದ. ಆದರೂ ಸಹ ಅವರ ಕಾಟ ಮುಂದುವರಿದಿತ್ತು. ಇದರಿಂದ ಬೇಸತ್ತಿದ್ದ ಸಂತ್ರಸ್ತ ವರಾಚ್ಚ ಪೊಲೀಸ್ ಠಾಣೆಗೆ ತಲುಪಿ ತಮ್ಮ ನೋವನ್ನು ವಿವರಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಪಟೇಲ್ ಹೇಳಿದ್ದಾರೆ.
ದೂರು ದಾಖಲಾದ ತಕ್ಷಣ ಪ್ರಕರಣದ ತನಿಖೆ ಆರಂಭಿಸಲಾಗಿತ್ತು. ಪೊಲೀಸರು ಬುಧವಾರ ನಾಲ್ವರು ಮಹಿಳೆಯರು ಸೇರಿದಂತೆ ಆರು ಮಂದಿಯನ್ನು ಬಂಧಿಸಿದ್ದಾರೆ. ಆರೋಪಿಯಿಂದ 5.74 ಲಕ್ಷ ರೂಪಾಯಿ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ದಂಧೆಗೆ ಸಂಬಂಧಿಸಿದ ಇತರ ಆರೋಪಿಗಳ ಪತ್ತೆಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿ ಪಟೇಲ್ ಘಟನೆಯ ಸಂಪೂರ್ಣ ಮಾಹಿತಿ ನೀಡಿದ್ದಾರೆ.
ಓದಿ: ಟಿಕ್ಟಾಕ್ ಹನಿಟ್ರ್ಯಾಪ್: ಮದುವೆ ಹೆಸರಲ್ಲಿ ಲಕ್ಷಾಂತರ ಹಣ ವಸೂಲಿ, ಆರೋಪಿ ಬಂಧನ