ETV Bharat / bharat

ಆಕಸ್ಮಿಕವಾಗಿ ಪಾಕಿಸ್ತಾನದೊಳಕ್ಕೆ ಬಿದ್ದ ಭಾರತದ ಕ್ಷಿಪಣಿ: ತನಿಖೆಗೆ ಕೇಂದ್ರ ಸೂಚನೆ

author img

By

Published : Mar 11, 2022, 8:36 PM IST

ತಾಂತ್ರಿಕ ದೋಷದಿಂದಾಗಿ ಕ್ಷಿಪಣಿಯೊಂದು ಪಾಕಿಸ್ತಾನದ ಗಡಿಯೊಳಕ್ಕೆ ನುಗ್ಗಿದ್ದ ಘಟನೆಗೆ ಸಂಬಂಧಿಸಿದಂತೆ ಭಾರತ ಸರ್ಕಾರ ಉನ್ನತ ಮಟ್ಟದ ತನಿಖೆಗೆ ಸೂಚಿಸಿದೆ. ಅಲ್ಲದೇ, ಈ ಬಗ್ಗೆ ಪಾಕಿಸ್ತಾನ ಕೂಡ ಇದು ಅಪ್ರಚೋದಿತ ದಾಳಿ ಎಂದು ಆರೋಪಿಸಿ ಭಾರತದ ರಾಯಭಾರಿ ಕಚೇರಿ ಅಧಿಕಾರಿಗಳನ್ನು ಕರೆಯಿಸಿ ಪ್ರತಿಭಟನೆ ಸಲ್ಲಿಸಿದೆ.

missile
ಕ್ಷಿಪಣಿ

ನವದೆಹಲಿ: ಕ್ಷಿಪಣಿಯ ನಿರ್ವಹಣೆಯ ವೇಳೆ ಆಕಸ್ಮಿಕವಾಗಿ ಅದು ಸಿಡಿದು ಪಾಕಿಸ್ತಾನದ ಭೂಪ್ರದೇಶಕ್ಕೆ ಅಪ್ಪಳಿಸಿದ ಘಟನೆಗೆ ಸಂಬಂಧಿಸಿದಂತೆ ಭಾರತ ಸರ್ಕಾರ ತನಿಖೆಗೆ ಸೂಚಿಸಿದೆ. ಅಲ್ಲದೇ, ಇದು ಗಂಭೀರವಾದ ವಿಚಾರವಾಗಿದೆ ಎಂದು ಹೇಳಿದೆ.

ಎರಡು ದಿನಗಳ ಹಿಂದೆ ಸೂರತ್​ಗಢದಲ್ಲಿ ಸೂಪರ್​ ಸಾನಿಕ್​ ಫ್ಲೈಯಿಂಗ್​ ಆಬ್ಜೆಕ್ಟ್​ ಕ್ಷಿಪಣಿ ತಾಂತ್ರಿಕ ದೋಷದಿಂದ ಆಕಸ್ಮಿಕವಾಗಿ ಸಿಡಿದು ಪಾಕಿಸ್ತಾನದ ಗಡಿಯೊಳಗೆ ನುಸುಳಿತ್ತು. ಆದರೆ, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಈ ಕುರಿತಾಗಿ ಪಾಕಿಸ್ತಾನ ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ ಭಾರತ ಉನ್ನತಮಟ್ಟದ ನ್ಯಾಯಾಂಗ ತನಿಖೆಗೆ ಸೂಚಿಸಿದೆ.

ಘಟನೆ ತೀವ್ರ ವಿಷಾದನೀಯವಾಗಿದ್ದರೂ, ಅವಘಡದಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂಬುದೇ ಸಮಾಧಾನದ ವಿಷಯವಾಗಿದೆ ಎಂದು ವಿದೇಶಾಂಗ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತದ ಕ್ಷಿಪಣಿ ತನ್ನ ಗಡಿಯೊಳಗೆ ಬಿದ್ದಿದ್ದನ್ನು ಪಾಕಿಸ್ತಾನ ವಿರೋಧಿಸಿದ್ದು, ಅಲ್ಲಿನ ಭಾರತದ ರಾಯಭಾರಿ ಕಚೇರಿ ಅಧಿಕಾರಿಗಳನ್ನು ಕರೆಯಿಸಿಕೊಂಡು ವಿಚಾರಣೆ ನಡೆಸಿದೆ. ತನ್ನ ವಾಯುಪ್ರದೇಶದಲ್ಲಿ ಅಪ್ರಚೋದಿತವಾಗಿ ಕ್ಷಿಪಣಿ ದಾಳಿಯಾಗಿದೆ. ಘಟನೆಯ ಬಗ್ಗೆ ಪಾರದರ್ಶಕ ತನಿಖೆ ನಡೆಸಿ ವರದಿ ನೀಡಬೇಕು ಎಂದು ಪ್ರತಿಭಟನೆ ವ್ಯಕ್ತಪಡಿಸಿದೆ.

ಇದಕ್ಕೆ ಸ್ಪಷ್ಟನೆ ನೀಡಿರುವ ಭಾರತೀಯ ದೂತವಾಸ ಅಧಿಕಾರಿಗಳು ಸೂಪರ್​ ಸಾನಿಕ್​ ಪ್ಲೈಯಿಂಗ್​ ಅಬ್ಜೆಕ್ಟ್​ ಕ್ಷಿಪಣಿ ತಾಂತ್ರಿಕ ದೋಷದ ಕಾರಣ ಪಾಕಿಸ್ತಾನ ವಾಯುಗಡಿ ನುಗ್ಗಿದೆ. ಇದು ಉದ್ದೇಶಪೂರ್ವಕವಾಗಿ ನಡೆಸಲಾದ ದಾಳಿಯಲ್ಲ ಎಂದಿದ್ದಾರೆ.

ಇದನ್ನೂ ಓದಿ: 'ದೇಶದಲ್ಲಿ ಕೊರೊನಾಗೆ 41 ಲಕ್ಷ ಜನ ಸತ್ತಿಲ್ಲ': ಲ್ಯಾನ್ಸೆಟ್​ ಜರ್ನಲ್​ ವರದಿ ಅಲ್ಲಗಳೆದ ಭಾರತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.