ಬಾಲಸೋರ್(ಒಡಿಶಾ): ಒಡಿಶಾ ಕರಾವಳಿಯಲ್ಲಿ ಹೈಸ್ಪೀಡ್ ಎಕ್ಸ್‌ಪೆಂಡೆಬಲ್ ಏರಿಯಲ್ ಟಾರ್ಗೆಟ್ 'ಅಭ್ಯಾಸ್' ವಿಮಾನ ಪರೀಕ್ಷೆ ಯಶಸ್ವಿಯಾಗಿದೆ. ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ ಮಾನವರಹಿತ ವಾಹನವನ್ನು ವಿವಿಧ ಕ್ಷಿಪಣಿ ವ್ಯವಸ್ಥೆಗಳ ಮೌಲ್ಯಮಾಪನಕ್ಕಾಗಿ ವೈಮಾನಿಕ ಗುರಿಯಾಗಿ ಬಳಸಬಹುದು. ಬಾಲಸೋರ್‌ನಲ್ಲಿ ಪರೀಕ್ಷೆ ನಡೆಸಲಾಗಿದೆ.
ಉದ್ದೇಶಿತ ವಿಮಾನದ ಕಾರ್ಯಕ್ಷಮತೆಯನ್ನು ಟೆಲಿಮೆಟ್ರಿ ಮತ್ತು ರಾಡಾರ್‌ಗಳು ಹಾಗೂ ಎಲೆಕ್ಟ್ರೋ ಆಪ್ಟಿಕಲ್ ಟ್ರ್ಯಾಕಿಂಗ್ ಸಿಸ್ಟಮ್ (ಇಒಟಿಎಸ್) ಸೇರಿದಂತೆ ವಿವಿಧ ಸಂವೇದಕಗಳ ಮೂಲಕ ಮೇಲ್ವಿಚಾರಣೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಅಭ್ಯಾಸ್ ಪ್ರಯೋಗ ಪರೀಕ್ಷೆ ಯಶಸ್ವಿಯಾಗಿರುವುದಕ್ಕೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಭಿನಂದಿಸಿದ್ದಾರೆ.