ETV Bharat / bharat

ನಮ್ಮ ಮನೆಗೆ ಭೇಟಿ ನೀಡಿ ವಿಚಾರಣೆ ನಡೆಸಬಹುದು: ಸಿಬಿಐ ಸಮನ್ಸ್​ಗೆ ಉತ್ತರಿಸಿದ ಮಮತಾ ಅಳಿಯ - ವೆಸ್ಟ್​ ಬೆಂಗಾಲ್​ ಎಲೆಕ್ಷನ್

ಕಲ್ಲಿದ್ದಲು ದರೋಡೆ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸಮನ್ಸ್​ಗೆ ಟಿಎಂಸಿ ಮುಖಂಡ ಅಭಿಷೇಕ್ ಬ್ಯಾನರ್ಜಿ ಅವರ ಪತ್ನಿ ರುಜೀರಾ ಪ್ರತಿಕ್ರಿಯಿಸಿದ್ದು, ಫೆಬ್ರವರಿ 23 ರಂದು ತಮ್ಮ ನಿವಾಸಕ್ಕೆ ಭೇಟಿ ನೀಡುವಂತೆ ತನಿಖಾ ಸಂಸ್ಥೆಗೆ ತಿಳಿಸಲಾಗಿದೆ.

ರುಜೀರಾ ಬ್ಯಾನರ್ಜಿ
Rujira Banerjee
author img

By

Published : Feb 22, 2021, 12:40 PM IST

ಕೋಲ್ಕತಾ (ಪಶ್ಚಿಮ ಬಂಗಾಳ):ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ನೀಡಿದ್ದ ಸಮನ್ಸ್​ಗೆ ಟಿಎಂಸಿ ಸಂಸದ ಅಭಿಷೇಕ್​ ಬ್ಯಾನರ್ಜಿ ಹಾಗೂ ಪತ್ನಿ ರುಜಿರಾ ಬ್ಯಾನರ್ಜಿ ಸ್ಪಂದಿಸಿದ್ದಾರೆ.

ಈ ಸಂಬಂಧ ವಿಚಾರಣೆಗೆ ತಾವು ಸಿದ್ದ ಇದ್ದು, ತಮ್ಮ ನಿವಾಸಕ್ಕೆ ಸಿಬಿಐ ತಂಡ ಕಳುಹಿಸಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಅಧಿಕಾರಿಗಳ ಮೂಲಗಳಿಂದ ಮಾಹಿತಿ ಸಿಕ್ಕಿದೆ. ತನಿಖೆಗೆ ಸಹಕರಿಸುವಂತೆ ಭಾನುವಾರ ಸಿಬಿಐ ಸಂಸದರಿಗೆ ಕೋರಿಕೊಂಡಿತ್ತು.

ಈ ಸಂಬಂಧ ಸಮನ್ಸ್ ನೀಡಲು ಸಿಬಿಐ ಅಧಿಕಾರಿಗಳ ತಂಡ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರ ನಿವಾಸಕ್ಕೆ ಭಾನುವಾರ ಭೇಟಿ ನೀಡಿತ್ತು. ಆದರೆ. ರುಜಿರಾ ಸಮನ್ಸ್​ಗೆ ಸಹಿ ಹಾಕಲು ನಿರಾಕರಿಸಿದ್ದರು. ಆದರೆ, ಇಂದು ಬೆಳಗ್ಗೆ ಸಮನ್ಸ್​ ಗೆ ಪ್ರತಿಕ್ರಿಯಿಸಿರುವ ರುಜಿರಾ, ಮಂಗಳವಾರ ಬೆಳಗ್ಗೆ 11 ರಿಂದ ಮಧ್ಯಾಹ್ನ 3 ರ ನಡುವೆ ಸಿಬಿಐ ತನ್ನ ನಿವಾಸಕ್ಕೆ ಭೇಟಿ ನೀಡಬಹುದು ಎಂದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರುಜಿರಾ, "ನನ್ನನ್ನು ಪ್ರಶ್ನಿಸುತ್ತಿರುವ ಕಾರಣ ತಮಗೆ ತಿಳಿದಿಲ್ಲ. ಆದರೂ ನಾಳೆ ಬೆಳಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಅನುಕೂಲಕ್ಕೆ ಅನುಗುಣವಾಗಿ ನೀವು ನನ್ನ ನಿವಾಸಕ್ಕೆ ಭೇಟಿ ನೀಡಬಹುದು ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.