ETV Bharat / bharat

ನೊಬೆಲ್ ಪ್ರಶಸ್ತಿ ಪುರಸ್ಕೃತ ಅಭಿಜಿತ್ ತಾಯಿ ಸ್ಥಿತಿ ಗಂಭೀರ; ಆಸ್ಪತ್ರೆಗೆ ಮಮತಾ ಬ್ಯಾನರ್ಜಿ ಭೇಟಿ

ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಭಿಜಿತ್ ವಿನಾಯಕ್ ಬ್ಯಾನರ್ಜಿ ತಾಯಿ ಪ್ರೊಫೆಸರ್ ನಿರ್ಮಲಾ ಬ್ಯಾನರ್ಜಿ ಅವರ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಗೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.

Mamata pays visit to critically ill Nirmala Banerjee, mother of Nobel laureate Abhijit Banerjee
ನೊಬೆಲ್ ಪ್ರಶಸ್ತಿ ಪುರಸ್ಕೃತ ಅಭಿಜಿತ್ ತಾಯಿ ಸ್ಥಿತಿ ಗಂಭೀರ; ಆಸ್ಪತ್ರೆಗೆ ಮಮತಾ ಬ್ಯಾನರ್ಜಿ ಭೇಟಿ
author img

By ETV Bharat Karnataka Team

Published : Nov 2, 2023, 11:02 PM IST

ಕೋಲ್ಕತ್ತಾ (ಪಶ್ಚಿಮ ಬಂಗಾಳ): ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಭಿಜಿತ್ ವಿನಾಯಕ್ ಬ್ಯಾನರ್ಜಿ ಅವರ ತಾಯಿ ಪ್ರೊಫೆಸರ್ ನಿರ್ಮಲಾ ಬ್ಯಾನರ್ಜಿ ಅವರ ಸ್ಥಿತಿ ಚಿಂತಾಜನಕವಾಗಿದೆ. 87 ವಯಸ್ಸಿನ ಅವರು ಕೆಲವು ದಿನಗಳಿಂದ ಕೋಲ್ಕತ್ತಾದ ಇಎಂ ಬೈಪಾಸ್​ನ ಆರ್​ ಎನ್​ ಟ್ಯಾಗೂರ್​​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಆಸ್ಪತ್ರೆಗೆ ಭೇಟಿ ನೀಡಿ ನಿರ್ಮಲಾ ಬ್ಯಾನರ್ಜಿ ಅವರ ಆರೋಗ್ಯವನ್ನು ವಿಚಾರಿಸಿದರು.

ಈ ವೇಳೆ ಮಾತನಾಡಿದ ಸಿಎಂ, ಶುಕ್ರವಾರ (ನಾಳೆ) ಅಭಿಜಿತ್​ ವಿನಾಯಕ್​ ಅವರು ಕೋಲ್ಕತ್ತಾಗೆ ಆಗಮಿಸಲಿದ್ದಾರೆ ಎಂದು ತಿಳಿಸಿದರು. ನರರೋಗ ತಜ್ಞ (Neurologist) ಅನಿಮೇಶ್​ ಕರ್​ ಮತ್ತು ಶ್ವಾಸಕೋಶ ತಜ್ಞ (Pulmonologist) ಸೌರಭ್ ಮಾಝಿ ಅವರು ನಿರ್ಮಲಾ ಬ್ಯಾನರ್ಜಿ ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಆಸ್ಪತ್ರೆ ಮೂಲಗಳ ಪ್ರಕಾರ, ನಿರ್ಮಲಾ ಬ್ಯಾನರ್ಜಿ ಅವರ ಸ್ಥಿತಿ ತುಂಬಾ ಚಿಂತಾಜನಕವಾಗಿದೆ. ಮಮತಾ ಬ್ಯಾನರ್ಜಿ ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯವನ್ನು ವಿಚಾರಿಸಿದರು. ಈ ವೇಳೆ, ಅವರೊಂದಿಗೆ ಸಚಿವ ಅರೂಪ್​ ಬಿಸ್ವಾಸ್​ ಇದ್ದರು. ಆಸ್ಪತ್ರೆಯಿಂದ ರಾಜಭವನಕ್ಕೆ ತೆರಳಿದ ಸಿಎಂ ರಾಜ್ಯಪಾಲ ಸಿ.ವಿ ಆನಂದ ಬೋಸ್​ ಅವರನ್ನು ಭೇಟಿ ಆದರು.

ಇದನ್ನೂ ಓದಿ: ಸ್ಪೇನ್​ನಲ್ಲಿ ಸಿಎಂ ಮಮತಾ ಬ್ಯಾನರ್ಜಿ ಜಾಗಿಂಗ್! ವೀಡಿಯೊ ನೋಡಿ

ಬಳಿಕ ರಾಜಭವನದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಮಮತಾ ಬ್ಯಾನರ್ಜಿ, "ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಭಿಜಿತ್ ವಿನಾಯಕ್ ಬ್ಯಾನರ್ಜಿ ಅವರ ತಾಯಿ ಪ್ರೊಫೆಸರ್ ನಿರ್ಮಲಾ ಬ್ಯಾನರ್ಜಿ ಅವರನ್ನು ನೋಡಲು ಆರ್​ ಎನ್​ ಟ್ಯಾಗೂರ್​ ಆಸ್ಪತ್ರೆಗೆ ಹೋಗಿದ್ದೆ. ನನಗೆ ಮೊದಲೇ ಅವರ ಪರಿಚಯವಿತ್ತು. ಅವರು ಬಿದ್ದು ತಲೆಗೆ ಪೆಟ್ಟಾಗಿದೆ. ಸ್ಥಿತಿ ತುಂಬಾ ಗಂಭೀರವಾಗಿದೆ. ಹೀಗಾಗಿ ನಾನು ನೋಡಲು ಹೋಗಿದ್ದೆ. ಅಭಿಜಿತ್​ ವಿನಾಯಕ್​ ಬ್ಯಾನರ್ಜಿ ನಾಳೆ ಕೋಲ್ಕತ್ತಾಗೆ ಬರಲಿದ್ದಾರೆ" ಎಂದು ತಿಳಿಸಿದರು.

ಇದಕ್ಕೂ ಮುನ್ನ ಸಿಎಂ, ನಿರ್ಮಲಾ ಬ್ಯಾನರ್ಜಿ ಅವರ ಆರೋಗ್ಯದ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದರು. "ಪ್ರಸಿದ್ಧ ಅರ್ಥಶಾಸ್ತ್ರಜ್ಞ ಮತ್ತು ನೊಬೆಲ್​ ಪ್ರಶಸ್ತಿ ವಿಜೇತ ಪ್ರೊ. ಅಭಿಜಿತ್​ ಬ್ಯಾನರ್ಜಿ ಅವರ ತಾಯಿ ಪ್ರೊ. ನಿರ್ಮಲಾ ಬ್ಯಾನರ್ಜಿ ಅವರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ತಿಳಿದು ತೀವ್ರ ದುಃಖವಾಗಿದೆ. ನಾನು ಈಗ ಅವರನ್ನು ನೋಡಲು ಆಸ್ಪತ್ರೆಗೆ ಹೋಗುತ್ತಿದ್ದೇನೆ. ನಾವು ಅವರಿಗಾಗಿ ಪ್ರಾರ್ಥಿಸೋಣ" ಎಂದು ಹೇಳಿದ್ದರು. ಅಭಿಜಿತ್ ಬ್ಯಾನರ್ಜಿ ರಾಜ್ಯ ಆರೋಗ್ಯ ಸಲಹಾ ಸಮಿತಿಯ ಸದಸ್ಯರೂ ಆಗಿದ್ದಾರೆ. ಅಭಿಜಿತ್ ವಿನಾಯಕ್ ಬ್ಯಾನರ್ಜಿ ಅವರು 2019 ರಲ್ಲಿ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದರು.

ಇದನ್ನೂ ಓದಿ: ಅಮಿತಾಭ್​ ಬಚ್ಚನ್ ನಿವಾಸಕ್ಕೆ ಮಮತಾ ಬ್ಯಾನರ್ಜಿ ಭೇಟಿ​; ​'ಬಿಗ್​ ಬಿ ಭಾರತ ರತ್ನ'ವೆಂದ ಸಿಎಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.