ಅಹಮದಾಬಾದ್: ಗುಜರಾತ್‌ನಲ್ಲಿ ಬಿಜೆಪಿಗೆ ಟಕ್ಕರ್ ನೀಡಲಿದೆ ಎಂದೇ ಭಾವಿಸಲಾಗಿದ್ದ ಆಪ್ ಸದ್ದು ಮಾಡಲಿಲ್ಲ. ಸ್ವತಃ ಅದರ ಸಿಎಂ ಅಭ್ಯರ್ಥಿಯಾಗಿದ್ದ ಇಸುದನ್ ಗಧ್ವಿ ಅವರೇ ಬಿಜೆಪಿ ಅಭ್ಯರ್ಥಿ ಎದುರು ಸೋಲು ಅನುಭವಿಸಿದ್ದಾರೆ. ಇದು ಆಪ್ಗೆ ರಾಜಕೀಯವಾಗಿ ಭಾರೀ ಆಘಾತ ಉಂಟು ಮಾಡಿದೆ.
ಇಸುದನ್ ಗಧ್ವಿ ಅವರನ್ನು ಜನರಿಂದಲೇ ಸಿಎಂ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿತ್ತು. ಖಂಭಾಲಿಯಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಗಧ್ವಿ ಬಿಜೆಪಿಯ ವಿರುದ್ಧ ಹೋರಾಟದ ಅಸ್ತ್ರವಾಗಿ ಆಪ್ ಬಳಸಿಕೊಂಡಿತ್ತು. ರಾಜ್ಯದಲ್ಲಿ ಎಎಪಿ 100 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಸ್ವತಃ ಗಧ್ವಿ ಭವಿಷ್ಯ ನುಡಿದಿದ್ದರು.
ಬಿಜೆಪಿ ಅಭ್ಯರ್ಥಿಯಾದ ಆಯರ್ ಮುಲುಭಾಯ್ ಹರ್ದಾಸ್ಭಾಯ್ ಬೇರಾ ಅವರೆದುರು 15,000 ಕ್ಕೂ ಹೆಚ್ಚು ಮತಗಳಿಂದ ಎಎಪಿ ಸಿಎಂ ಅಭ್ಯರ್ಥಿ ಸೋಲು ಕಂಡಿದ್ದಾರೆ. ಅಲ್ಲದೇ ಈವರೆಗಿನ ಫಲಿತಾಂಶದಲ್ಲಿ ಮೂವರು ಆಪ್ ಅಭ್ಯರ್ಥಿಗಳು ಗೆಲುವು ಸಾಧಿಸಿ ಗುಜರಾತ್‌ನಲ್ಲಿ ಖಾತೆ ತೆರೆದಿದೆ. ಶೇ 12 ರಷ್ಟು ಮತಗಳನ್ನು ಪಡೆಯುವ ಮೂಲಕ ಎಎಪಿ ಮುಂಬರುವ ದಿನಗಳಲ್ಲಿ ಗುಜರಾತ್‌ನಲ್ಲಿ ನೆಲೆ ನಿಲ್ಲುವ ಮುನ್ಸೂಚನೆ ನೀಡಿದೆ.
ಓದಿ: ಕೋಮು ಸೂಕ್ಷ್ಮ ಗೋಧ್ರಾದಲ್ಲಿ ಬಿಜೆಪಿಗೆ ಮತದಾರರ ಜೈಕಾರ.. ಠುಸ್ ಆದ ಆಪ್, ಎಐಎಂಐಎಂ ಸವಾಲು