ETV Bharat / bharat

ರಾಜ್ಯಸಭೆಯಲ್ಲಿ ಆಪ್​ ಪಕ್ಷದ ನಾಯಕರಾಗಿ ರಾಘವ್​ ಚಡ್ಡಾ ನೇಮಕ

ರಾಜ್ಯಸಭೆಯಿಂದ ಅಮಾನತಾಗಿ, ಈಚೆಗಷ್ಟೇ ವಾಪಸ್​ ಆಗಿರುವ ಆಪ್​ ಸಂಸದ ರಾಘವ್​ ಚಡ್ಡಾ ಅವರನ್ನು ರಾಜ್ಯಸಭೆಯಲ್ಲಿ ಪಕ್ಷದ ನಾಯಕರಾಗಿ ನೇಮಕಗೊಂಡಿದ್ದಾರೆ.

ರಾಘವ್​ ಚಡ್ಡಾ
ರಾಘವ್​ ಚಡ್ಡಾ
author img

By ETV Bharat Karnataka Team

Published : Dec 16, 2023, 7:23 PM IST

ನವದೆಹಲಿ: ಆಮ್​ ಆದ್ಮಿ ಪಕ್ಷದ(ಆಪ್​) ರಾಜ್ಯಸಭಾ ಸಂಸದ ರಾಘವ್​ ಚಡ್ಡಾ ಅವರು ಈಗ ರಾಜ್ಯಸಭೆಯಲ್ಲಿ ಪಕ್ಷದ ನಾಯಕರಾಗಿ ನೇಮಕವಾಗಿದ್ದಾರೆ. ಈ ಹಿಂದಿನ ನಾಯಕರಾಗಿದ್ದ ಸಂಜಯ್​ ಸಿಂಗ್​ ಅವರು ಪ್ರಕರಣವೊಂದರಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಹಿನ್ನೆಲೆಯಲ್ಲಿ ಆ ಸ್ಥಾನಕ್ಕೆ ಚಡ್ಡಾರನ್ನು ಕೂರಿಸಲಾಗಿದೆ.

ರಾಜ್ಯಸಭಾ ಅಧ್ಯಕ್ಷರಿಗೆ ಪತ್ರ ಬರೆದಿರುವ ಎಎಪಿ ಪಕ್ಷದ ನಾಯಕತ್ವವು ಸಂಜಯ್ ಸಿಂಗ್ ಅವರ ಅನುಪಸ್ಥಿತಿಯಲ್ಲಿ ರಾಘವ್ ಚಡ್ಡಾ ಅವರು ಇನ್ನು ಮುಂದೆ ಮೇಲ್ಮನೆಯಲ್ಲಿ ನಮ್ಮ ಪಕ್ಷದ ನಾಯಕರಾಗಿರಲಿದ್ದಾರೆ ಎಂದು ತಿಳಿಸಿದೆ.

ಎಎಪಿ ಸಂಸದ ಸಂಜಯ್ ಸಿಂಗ್ ಅವರು ಸದ್ಯ ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಕಾರಣ, ಚಡ್ಡಾ ಅವರನ್ನು ಫ್ಲೋರ್ ಲೀಡರ್ ಆಗಿ ನೇಮಿಸುವ ಕುರಿತು ಎಎಪಿಯಿಂದ ಮನವಿ ಸ್ವೀಕರಿಸಲಾಗಿದೆ ಎಂದು ರಾಜ್ಯಸಭಾ ಸಚಿವಾಲಯದ ಮೂಲಗಳು ಖಚಿತಪಡಿಸಿವೆ. ಪತ್ರವು ಪರಿಶೀಲನೆಗಾಗಿ ರಾಜ್ಯಸಭಾ ಪ್ರಧಾನ ಕಾರ್ಯದರ್ಶಿ ಬಳಿ ಇದೆ.

ರಾಘವ್​ ಚಡ್ಡಾ ರಾಜ್ಯಸಭೆಯ ಕಿರಿಯ ಸದಸ್ಯರಲ್ಲಿ ಒಬ್ಬರು. ಪ್ರಸ್ತುತ ಮೇಲ್ಮನೆಯಲ್ಲಿ ಆಪ್​ ಒಟ್ಟು 10 ಸಂಸದರನ್ನು ಹೊಂದಿದೆ. ಬಿಜೆಪಿ, ಕಾಂಗ್ರೆಸ್ ಮತ್ತು ಟಿಎಂಸಿ ನಂತರ ರಾಜ್ಯಸಭೆಯಲ್ಲಿ ನಾಲ್ಕನೇ ದೊಡ್ಡ ಬಲ ಹೊಂದಿದೆ.

ರಾಜ್ಯಸಭೆಯಿಂದ ಅಮಾನತಾಗಿದ್ದ ಚಡ್ಡಾ: ನಿಯಮಗಳ ಉಲ್ಲಂಘನೆ, ದುರ್ನಡತೆ, ಆಕ್ಷೇಪಾರ್ಹ ನಡವಳಿಕೆ ಆರೋಪದ ಮೇಲೆ ರಾಘವ್​​ ಚಡ್ಡಾರನ್ನು ರಾಜ್ಯಸಭೆಯಿಂದ ಅಮಾನತು ಮಾಡಲಾಗಿತ್ತು. ಇದರ ವಿರುದ್ಧ ಆಪ್​ ಸಂಸದ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದರು. ವಿಚಾರಣೆಯ ಬಳಿಕ ಅವರ ಅಮಾನತು ತೆರವು ಮಾಡಲಾಗಿತ್ತು.

ಪಂಜಾಬ್‌ನ ರಾಜ್ಯಸಭಾ ಸಂಸದರಾಗಿರುವ ಚಡ್ಡಾ ಅವರನ್ನು 2023 ಆಗಸ್ಟ್ 11 ರಂದು ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ವಿಶೇಷ ಹಕ್ಕು ಉಲ್ಲಂಘನೆ ಆರೋಪದ ಮೇಲೆ ಅಮಾನತುಗೊಳಿಸಲಾಗಿತ್ತು. ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶದ ಸರ್ಕಾರದ (ತಿದ್ದುಪಡಿ) ಮಸೂದೆ 2023ರ ಮಂಡನೆ ವೇಳೆ ಐವರು ರಾಜ್ಯಸಭಾ ಸಂಸದರ ನಕಲಿ ಸಹಿ ಮಾಡಿದ ಆರೋಪದ ಮೇಲೆ ಚಡ್ಡಾ ಅವರನ್ನು ಅಮಾನತು ಮಾಡಲಾಗಿತ್ತು.

ರಾಜ್ಯಸಭಾ ಸಭಾಪತಿ ಹಾಗೂ ಉಪ ರಾಷ್ಟ್ರಪತಿ ಜಗದೀಪ್​ ಧನಕರ್​ ಅವರನ್ನು ಭೇಟಿಯಾಗಿ ತಾವು ಮಾಡಿದ ಪ್ರಮಾದಕ್ಕೆ ಸಂಬಂಧಿಸಿದಂತೆ ಬೇಷರತ್​ ಕ್ಷಮೆಯಾಚಿಸುವಂತೆ ಆಪ್​ ಸಂಸದನಿಗೆ ಸುಪ್ರೀಂಕೋರ್ಟ್​ ಸೂಚಿಸಿತ್ತು. ಅದರಂತೆ ಚಡ್ಡಾ ಸಭಾಪತಿಗಳ ಬಳಿಕ ಕ್ಷಮೆ ಕೋರಿದ್ದರು. ಚಳಿಗಾಲದ ಅಧಿವೇಶನದ ಆರಂಭದಲ್ಲಿ ಆಪ್​​ ಸಂಸದನ ಮೇಲಿನ ಅಮಾನತನ್ನು ತೆರವು ಮಾಡಲಾಗಿತ್ತು.

ಸುಪ್ರೀಂಕೋರ್ಟ್‌ ಮತ್ತು ರಾಜ್ಯ ಸಭಾಧ್ಯಕ್ಷರಿಗೆ ವಿಡಿಯೊ ಸಂದೇಶದ ಮೂಲಕ ರಾಘವ್‌ ಧನ್ಯವಾದ ಹೇಳಿದ್ದರು. ಅಮಾನತನ್ನು ರದ್ದುಗೊಳಿಸಬೇಕೆಂದು ಸುಪ್ರೀಂಕೋರ್ಟ್‌ ಬಳಿ ಮನವಿ ಮಾಡಿದ್ದೆ. ಬರೋಬ್ಬರಿ 115 ದಿನಗಳ ಬಳಿಕ ಅಮಾನತು ಕೊನೆಗೊಂಡಿದೆ. ಈ ಅವಧಿಯಲ್ಲಿ ಹಲವರು ಪ್ರೀತಿ ಮತ್ತು ಧೈರ್ಯ ತುಂಬಿದ್ದೀರಿ. ಎಲ್ಲರಿಗೂ ಧನ್ಯವಾದ ಎಂದಿದ್ದರು.

ಇದನ್ನೂ ಓದಿ: ಸಭಾಪತಿ ಜಗದೀಪ್​ ಧನಕರ್​ಗೆ ಬೇಷರತ್​ ಕ್ಷಮೆಯಾಚಿಸಿ: ರಾಘವ್​ ಚಡ್ಡಾಗೆ ಸುಪ್ರೀಂ ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.