ETV Bharat / bharat

Vaccine Fear: ಲಸಿಕೆ ಭಯದಿಂದ ಮರವೇರಿ ಕುಳಿತ ಯುವಕ - ಪುದುಚೇರಿಯಲ್ಲಿ ಕೋವಿಡ್ ವ್ಯಾಕ್ಸಿನ್ ಭಯ

ಲಸಿಕೆ ಭಯದಿಂದ ವ್ಯಕ್ತಿಯೊಬ್ಬ ಮರವೇರಿ ಕುಳಿತ ಘಟನೆ ಪುದುಚೇರಿಯ ಕೊನೇರಿಕುಪ್ಪಂ ಗ್ರಾಮದಲ್ಲಿ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.

A youngster climb on the tree in the fear of Covid vaccine
Vaccine Fear: ಲಸಿಕೆ ಭಯದಿಂದ ಮರವೇರಿ ಕುಳಿತ ಯುವಕ
author img

By

Published : Dec 28, 2021, 11:11 PM IST

ಪುದುಚೇರಿ: ಕೊರೊನಾ ಭಯ ಎಲ್ಲರನ್ನೂ ಕಾಡುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ಸೇರಿದಂತೆ ಎಲ್ಲಾ ರಾಜ್ಯಗಳು ಕೋವಿಡ್ ವ್ಯಾಕ್ಸಿನೇಷನ್ ತೀವ್ರಗೊಳಿಸಿವೆ. ಆದರೆ ಕೆಲವೆಡೆ ಲಸಿಕೆ ಕೊಡಿಸಿಕೊಳ್ಳಲು ವ್ಯಕ್ತಿಗಳು ಹಿಂಜರಿಯುತ್ತಿದ್ದಾರೆ.

ಪುದುಚೇರಿಯಲ್ಲೂ ಕೂಡಾ ಇಂಥದ್ದೇ ಘಟನೆ ನಡೆದಿದೆ. ಪುದುಚೇರಿ ಸರ್ಕಾರದ ಶುಶ್ರೂಷಕಿಯರು, ಕೋವಿಡ್ ಲಸಿಕೆ ನೀಡಲು ಕೊನೇರಿಕುಪ್ಪಂ ಗ್ರಾಮಕ್ಕೆ ತೆರಳಿದಾಗ 39 ವರ್ಷದ ಮುತ್ತುವೇಲ್ ಎಂಬಾತ ಮರವೇರಿ ಕುಳಿತಿದ್ದಾನೆ.

ಮರವೇರಿ ಕುಳಿತ ಯುವಕ

ಮುತ್ತುವೇಲ್ ಮದ್ಯಪಾನಿಯಾಗಿದ್ದು, ಕೋವಿಡ್ ಲಸಿಕೆ ತೆಗೆದುಕೊಂಡರೆ ಮದ್ಯಪಾನ ಮಾಡಬಾರದು ಎಂಬ ಕಾರಣಕ್ಕೆ ಆತ ವ್ಯಾಕ್ಸಿನ್ ನೀಡುವವರು ಬಂದಾಗ ಮರ ಹತ್ತಿ ಕುಳಿತಿದ್ದಾನೆ. ಆತ ಮರ ಹತ್ತಿ ಕುಳಿತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: 7.4 ಕೋಟಿ 15-18 ವರ್ಷದ ಮಕ್ಕಳಿಗೆ ಜನವರಿ 3 ರಿಂದ COVAXIN ಲಸಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.