ಥಾಣೆ(ಮಹಾರಾಷ್ಟ್ರ) : ಇಬ್ಬರು ಯುವಕರು ಓರ್ವನನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಥಾಣೆ ಬಳಿಯ ಕಲ್ಯಾಣ್ ರೈಲ್ವೆ ನಿಲ್ದಾಣದ ಪ್ಲಾಟ್ಫಾರ್ಮ್ ನಂಬರ್ 1ರಲ್ಲಿ ನಡೆದಿದೆ. ರೈಲ್ವೆ ಪ್ಲಾಟ್ಫಾರ್ಮ್ ಬಳಿ ಮಲಗಿದ್ದ ವ್ಯಕ್ತಿಯನ್ನು ಎಬ್ಬಿಸಿ, ಆತನೊಂದಿಗೆ ಜಗಳವಾಡಿ, ಹಲ್ಲೆ ನಡೆಸಿದ ನಂತರ, ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಲಾಗಿದೆ. ಚಾಕುವಿನಿಂದ ಚುಚ್ಚಿರುವ ವಿಡಿಯೋ ರೈಲ್ವೆ ಪ್ಲಾಟ್ಫಾರ್ಮ್ನ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಚಾಕು ಇರಿತಕ್ಕೊಳಗಾದ ವ್ಯಕ್ತಿಯನ್ನು ನಾರಾಯಣ್ ಎಂದು ಗುರ್ತಿಸಲಾಗಿದ್ದು, ಸ್ಥಳದಲ್ಲೇ ಆತ ಸಾವನ್ನಪ್ಪಿದ್ದಾನೆ. ಕಲ್ಯಾಣ್ ಲೋಕಮಾರ್ಗ್ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ಸಂತೋಷ್ ರಾಥೋಡ್ ಎಂಬಾತನನ್ನು ಬಂಧಿಸಿದ್ದಾರೆ. ಮತ್ತೋರ್ವನಿಗೆ ಶೋಧ ಕಾರ್ಯ ಆರಂಭಿಸಿದ್ದಾರೆ. ಹತ್ಯೆಗೆ ಏನು ಕಾರಣ ಎಂಬುದು ತನಿಖೆಯ ನಂತರ ತಿಳಿದು ಬರಬೇಕಿದೆ.
ಇದನ್ನೂ ಓದಿ: ರಾಜಾರೋಷವಾಗಿ ನಡು ರಸ್ತೆಯಲ್ಲೇ ಸಿಂಹಗಳ ನೈಟ್ ಬೀಟ್!: ವೈರಲ್ ವಿಡಿಯೋ