ETV Bharat / bharat

ದೇಶದ ಅತಿ ದುಬಾರಿ ಕಾರು ಖರೀದಿಸಿ​ದ ಯುವ ಉದ್ಯಮಿ.. ಬೆರಗಾಗಿಸುತ್ತೆ ಇದರ ಬೆಲೆ - Indias Most Expensive Supercar

ದೇಶದಲ್ಲಿಯೇ ಅತಿ ದುಬಾರಿಯಾದ ಬ್ರಿಟನ್​ ಮೂಲದ ಐಷಾರಾಮಿ ಮೆಕ್ಲರೆನ್​ 765 ಎಲ್​ಟಿ ಸ್ಪೈಡರ್​ ಕಾರನ್ನು ಹೈದರಾಬಾದ್ ಮೂಲದ ಯುವ ಉದ್ಯಮಿಯೊಬ್ಬರು ಖರೀದಿಸಿದ್ದಾರೆ.

indias-most-expensive-supercar
ಅತಿದುಬಾರಿ ಕಾರು ಖರೀದಿಸಿ ಹೈದರಾಬಾದ್​ ಯುವ ಉದ್ಯಮಿ
author img

By

Published : Dec 15, 2022, 12:26 PM IST

ಹೈದರಾಬಾದ್: ಬ್ರಿಟನ್​ ಮೂಲದ ಐಷಾರಾಮಿ ಮೆಕ್ಲರೆನ್​ 765 ಎಲ್​ಟಿ ಸ್ಪೈಡರ್​ ಕಾರನ್ನು ಹೈದರಾಬಾದ್​ನ ಉದ್ಯಮಿಯೊಬ್ಬರು ಖರೀದಿಸಿದ್ದು, ಇದು ದೇಶದಲ್ಲಿಯೇ ಅತಿ ದುಬಾರಿ ಕಾರಾಗಿದೆ. ಇದರ ಬೆಲೆ ಸುಮಾರು 12 ಕೋಟಿ ರೂಪಾಯಿಯಾಗಿದೆ.

ಉದ್ಯಮ ಮತ್ತು ವಾಹನ ಸಂಗ್ರಹದಲ್ಲಿ ಆಸಕ್ತಿ ಹೊಂದಿರುವ ನಾಸೀರ್​ ಖಾನ್​ ಮೆಕ್ಲರೆನ್​ ಕಾರು ಖರೀದಿಸಿದವರು. ಇತ್ತೀಚೆಗೆ ಕಾರನ್ನು ಆಮದು ಮಾಡಿಕೊಂಡಿದ್ದು, ನಗರದ ರಾಜ್​ ಫಲಕ್​ನಾಮಾ ಅರಮನೆಯ ಮುಂದೆ ಸ್ವೀಕರಿಸಿದ್ದಾರೆ. ಬಳಿಕ ಕಾರಿನ ಜೊತೆಗಿನ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇಂಗ್ಲೆಂಡ್​ನ ಐಷಾರಾಮಿ ಸೂಪರ್ ಕಾರ್ ತಯಾರಕ ಮೆಕ್ಲರೆನ್ ಆಟೋಮೋಟಿವ್ ಕಳೆದ ವರ್ಷ ನವೆಂಬರ್​ನಲ್ಲಿ ಈ ಕಾರನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿತ್ತು. 3.72 ಕೋಟಿ ರೂಪಾಯಿಗಳಿಂದ ಪ್ರಾರಂಭವಾಗುವ ಆರು ಸೂಪರ್‌ಕಾರ್‌ಗಳ ಶ್ರೇಣಿಯನ್ನು ಇದು ಹೊಂದಿದೆ. ಅದರಲ್ಲಿ 765 LT ಸ್ಪೈಡರ್ ಸುಮಾರು 12 ಕೋಟಿ ರೂಪಾಯಿಗಳಾಗಿದ್ದು, ಅತ್ಯಂತ ದುಬಾರಿಯಾಗಿದೆ. ನಾಸೀರ್​ ಖಾನ್​ ದೇಶದಲ್ಲಿಯೇ 765 LT ಸ್ಪೈಡರ್‌ನ ಮೊದಲ ಗ್ರಾಹಕರು ಎಂದು ಹೇಳಲಾಗ್ತಿದೆ.

ನಗರದ ಅರಮನೆಯ ಮುಂದೆ ಕಾರಿನ ಜೊತೆ ಪೋಸ್​ ನೀಡಿರುವ ನಾಸೀರ್​ ಖಾನ್​ "ವೆಲ್‌ಕಮ್ ಹೋಮ್ MCLAREN 765LT SPIDER. ಎಂತಹ ಅದ್ಭುತ ಸ್ಥಳದಲ್ಲಿ ಅದ್ಭುತವಾದ ಕಾರು ಪಡೆಯುತ್ತಿದ್ದೇನೆ" ಎಂದು ಬರೆದುಕೊಂಡಿದ್ದಾರೆ. ಕೆಂಪು ಬಣ್ಣದ ಸೂಪರ್‌ಕಾರ್‌ ಇದಾಗಿದೆ.

ವರದಿಯ ಪ್ರಕಾರ, 765 LT ಸ್ಪೈಡರ್ ಮೆಕ್‌ಲಾರೆನ್ ಇದುವರೆಗೆ ಉತ್ಪಾದಿಸಿದ ವೇಗದ ಕನ್ವರ್ಟಬಲ್‌ಗಳಲ್ಲಿ ಇದೂ ಒಂದಾಗಿದೆ. ಇದು ಕೂಪ್ ಕಾರಿನ ಆವೃತ್ತಿಯಂತೆ ಅತ್ಯಂತ ವೈಜ್ಞಾನಿಕ ವಿನ್ಯಾಸವನ್ನು ಹೊಂದಿದೆ. ನಾಸೀರ್ ಖಾನ್ ಅವರು ಐಷಾರಾಮಿ ಕಾರುಗಳ ಸಂಗ್ರಹಕ್ಕೆ ಹೆಸರುವಾಸಿಯಾಗಿದ್ದಾರೆ. ಅವರ ಇನ್​ಸ್ಟಾಗ್ರಾಮ್​ನಲ್ಲಿ ತರಹೇವಾರಿ ಕಾರುಗಳ ಚಿತ್ರಗಳಿವೆ.

ಓದಿ: ವಿಶ್ವಸಂಸ್ಥೆ ಭದ್ರತಾ ಮಂಡಳಿ ಖಾಯಂ ಸ್ಥಾನಕ್ಕೆ ಭಾರತ ಸನ್ನಿಹಿತ.. ಐದರಲ್ಲಿ ಮೂರು ರಾಷ್ಟ್ರಗಳಿಂದ ಬೆಂಬಲ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.