ETV Bharat / bharat

ಸಂಗಾತಿ ಬೇಡ, ಆದರೆ ತಾಯ್ತನ ಬೇಕು: ಅವಳಿ ಮಕ್ಕಳ ತಾಯಿಯಾದ ಮಹಿಳೆ

author img

By

Published : Dec 17, 2022, 4:02 PM IST

Updated : Dec 17, 2022, 4:12 PM IST

ಸಂಗಾತಿ ಇಲ್ಲದೇ ಸೂರತ್​ನ 40 ವರ್ಷದ ಡಿಂಪಲ್​ ದೇಸಾಯಿ ಇದೀಗ ಎರಡು ಮಕ್ಕಳ ತಾಯಿಯಾಗಿರುವ ಮಹಿಳೆ.

ಸಂಗಾತಿ ಬೇಡ ತಾಯ್ತನ ಬೇಕು ಎಂದು ಐವಿಎಫ್​​ ಸಹಾಯದಿಂದ ಅವಳಿ ಮಕ್ಕಳ ತಾಯಿಯಾದ ಮಹಿಳೆ
a-woman-who-became-a-mother-of-twins-with-the-help-of-ivf

ಮಹಿಳೆ ಎಷ್ಟೇ ಕಠಿಣ ಮನಸ್ಥಿತಿಯನ್ನು ಹೊಂದಿದ್ದರೂ ಮಕ್ಕಳ ವಿಷಯ ಬಂದಾಗ ಆಕೆ ಶರಣಾಗುತ್ತಾಳೆ. ಅದೇ ರೀತಿ ಇಲ್ಲೊಬ್ಬಳು ಮಹಿಳೆ ಇದ್ದಾಳೆ. ಜೀವನ ಸಂಗಾತಿಯೇ ಬೇಡ ಎಂದು ನಿರ್ಧರಿಸಿದ್ದ ಇವರಿಗೆ ತಾಯ್ತನದ ಹಂಬಲ ಮಾತ್ರ ಸದಾ ತುಡಿಯುತ್ತಿತ್ತು. ಇದೇ ಕಾರಣಕ್ಕೆ ಇದೀಗ ಐವಿಎಫ್​ ಸಹಾಯದಿಂದ ಎರಡು ಮಗುವಿನ ತಾಯಿಯಾಗಿದ್ದಾರೆ ಇವರು.

ಯಾರಿವರು?: ಸೂರತ್​ನ 40 ವರ್ಷದ ಡಿಂಪಲ್​ ದೇಸಾಯಿ ಇದೀಗ ಎರಡು ಮಕ್ಕಳ ತಾಯಿಯಾಗಿರುವ ಮಹಿಳೆ. ಅಕ್ಕನ ವೈವಾಹಿಕ ಜೀವನವನ್ನು ನೋಡಿದ್ದ ಡಿಂಪಲ್​, ಸೂಕ್ತ ಸಂಗಾತಿ ಸಿಗದ ಹಿನ್ನಲೆ ಮದುವೆಯಾಗುವುದು ಬೇಡ ಎಂದು ನಿರ್ಧರಿಸಿದ್ದರು.

ತಾಯ್ತನದ ಹಂಬಲ: ಇಂಜಿನಿಯರಿಂಗ್​ ಪದವೀಧರೆಯಾಗಿರುವ ಡಿಂಪಲ್​ ಪೋಷಕರೊಂದಿಗೆ ಜೀವಿಸುತ್ತಿದ್ದಾರೆ. ತಾಯ್ತನದ ಹಂಬಲದಿಂದ ಆಕೆ ಮದುವೆಯಾಗದೇ ಮಗುವನ್ನು ಹೇರಲು ನಿರ್ಧರಿಸಿದ್ದರು. ಹೀಗಾಗಿ ಐವಿಎಫ್​ ಮೊರೆ ಹೋಗಲು ನಿರ್ಧರಿಸಿದ್ದರು. ಇದಕ್ಕಾಗಿ ನಾನವಾತ್​ನ ಸಾಯಿ ಪೂಜಾ ಆಸ್ಪತ್ರೆಗೆ ಸಂಪರ್ಕಿಸಿ ಡಾ ರಾಜೀವ್​ ಪ್ರಧಾನ್​ ಮತ್ತು ಡಾ ರಶ್ಮಿ ಪ್ರಧಾನ್​ ನೆರವು ಪಡೆದರು. ಮಹಿಳೆಯ ಕೋರಿಕೆಯಂತೆ ಎವಿಎಫ್​​​​ ತಂತ್ರಜ್ಞಾನದಿಂದ ಮಗು ಆಗಲು ನೆರವಾಗಿದ್ದಾರೆ.

ದೇವರ ದಯೆಯಿಂದ ನಮಗೆ ಒಂದರ ಬದಲಾಗಿ ಎರಡು ಮಗು ಆಗಿದೆ. ಎರಡನೇ ಋತು ಚಕ್ರದ ವೇಳೆ ಆಕೆ ಗರ್ಭವತಿ ಆದರು. ಅವರನ್ನು ಪರೀಕ್ಷಿಸಿದಾಗ ಒಂದರ ಬದಲು ಎರಡು ಟ್ಯೂಬ್​ಗಳಿದ್ದವು. ಆಗ ನಾವು ಒಂದಕ್ಕೆ ಕೇಳಿದೇವು. ದೇವರ ದಯೆ ಎರಡು ಮಕ್ಕಳಾಗಿವೆ ಎಂದಿದ್ದಾರೆ ಡಿಂಪಲ್​ ತಾಯಿ.

ಮಕ್ಕಳ ಪಡೆದ ತಾಯಿ ಹೇಳಿದ್ದೇನು?: ಐವಿಎಫ್ ಪ್ಲಾನ್ ಮೂಲಕ ಮಗು ಪಡೆಯುವ ಮೊದಲು ನಾವು ಕುಟುಂಬದ ಸ್ನೇಹಿತೆ ಡಾ. ರಶ್ಮಿ ಪ್ರಧಾನ್ ಅವರನ್ನು ಸಂಪರ್ಕಿಸಿದ್ದೆವು. ಅವರು ನಮಗೆ ಮದುವೆಗುವಂತೆ ಸಲಹೆ ನೀಡಿದ್ದರು. ಆದರೆ ನಾವು ಅದಕ್ಕೆ ಒಪ್ಪದೇ ಇದ್ದರಿಂದ IVF ನ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ, ಅದರ ಪ್ರಕ್ರಿಯೆಗಳ ಬಗ್ಗೆ ವಿವರಣೆ ನೀಡಿದ್ದರು. ನಂತರ ನಾವು ಈ ವರ್ಷ ಐವಿಎಫ್ ಚಿಕಿತ್ಸೆ ಪಡೆದಿದ್ದೆವು.

ಮದುವೆ ಆಗದೇ ಮಗು ಪಡೆಯಲು ನನ್ನ ಕುಟುಂಬದ ಒಪ್ಪಿಗೆ ಇತ್ತು. ಹಾಗಾಗಿ ನನಗೆ ಸಮಾಜದ ಭಯ ಇರಲಿಲ್ಲ. ಸಮಾಜದ ಏನು ಅನ್ನುತ್ತದೆ, ಜನರು ಏನು ಹೇಳುತ್ತಾರೆಂದು ನಾನು ಯೋಚಿಸಲಿಲ್ಲ ಎಂದು ಐವಿಎಫ್​ನಿಂದ ಮಗು ಪಡೆದ ಡಿಂಪಲ್​ ದೇಸಾಯಿ ವಿಶ್ವಾಸದಿಂದ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: 300 ರೂ ಸಾಲ ಪಡೆದು ವಾಪಸ್​ ನೀಡದ ಅಣ್ಣ.. ಸಹೋದರನನ್ನು ಕೊಂದೇಬಿಟ್ಟ ತಮ್ಮ

Last Updated : Dec 17, 2022, 4:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.