ಗುವಾಹಟಿ(ಅಸ್ಸೋಂ): ರಾಜ್ಯದಲ್ಲಿ ಕೋವಿಡ್-19 ಹರಡುವಿಕೆ ತಡೆಯಲು ರಾತ್ರಿ ಕರ್ಫ್ಯೂ ವಿಧಿಸಿದ ಕಾರಣ ಇಲ್ಲಿನ ರಂಗಪರಾ ಪ್ರದೇಶವು ಒಂದು ವಿಶಿಷ್ಟವಾದ ವಿವಾಹಕ್ಕೆ ಸಾಕ್ಷಿಯಾಯಿತು.
ಮದುಮಗಳು, ಆಕೆಯ ಕುಟುಂಬದ ಸದಸ್ಯರು ಮತ್ತು ಸಂಬಂಧಿಕರು ಸೇರಿದ್ದರೂ ಕೂಡಾ ವರನಿಗೆ ಮದುವೆಗೆ ಬರಲು ಸಾಧ್ಯವಾಗಿರಲಿಲ್ಲ. ವರನ ಕಡೆಯಿಂದ ಕೆಲ ಸಂಬಂಧಿಕರು ಹಿಂದಿನ ದಿನವೇ ಆಗಮಿಸಿದ್ದರು. ಹೀಗಾಗಿ ವಿಶಿಷ್ಟ ಆಚರಣೆಯ ಮೂಲಕ ವಿವಾಹ ನೆರವೇರಿಸಿ, ವರನ ಕುಟುಂಬದ ಸದಸ್ಯರ ವಧುವನ್ನು ವರನ ಮನೆಗೆ ಕರೆದುಕೊಂಡು ಹೋದರು.
ವಧು ಬಬಿತಾ ದಾಸ್ ರಂಗಪರ ಮೂಲದವಳಾಗಿದ್ದು, ವರ ಮಿಂಟು ತಲುಕ್ದೇರ್ ಕೆಳ ಅಸ್ಸೋಂನ ನಲ್ಬಾರಿ ಜಿಲ್ಲೆಯವನಾಗಿದ್ದಾನೆ. ವಧುವಿನ ಕುಟುಂಬ ಸದಸ್ಯರು ವರನ ಕುಟುಂಬದ ಸದಸ್ಯರಿಗೆ ಸ್ಯಾನಿಟೈಜರ್ ಮತ್ತು ಮಾಸ್ಕ್ ಅನ್ನು ಉಡುಗೊರೆಯಾಗಿ ನೀಡಿದರು.