ETV Bharat / bharat

ಆಕ್ಸಿಜನ್​ ಸಾಗಣೆ ವೇಳೆ ಸೋರಿಕೆ.. ವ್ಯರ್ಥವಾಯ್ತು ನೂರಾರು ಟನ್​ 'ಪ್ರಾಣವಾಯು'

ಕೋವಿಡ್​ ವಿರುದ್ಧ ಹೋರಾಟ ನಡೆಸಿರುವ ರೋಗಿಗಳಿಗೆ ಆಕ್ಸಿಜನ್​ ಅತಿ ಅವಶ್ಯವಾಗಿದ್ದು, ಅಧಿಕಾರಿಗಳು ಮಾಡುತ್ತಿರುವ ಸಣ್ಣ - ಪುಟ್ಟ ತಪ್ಪುಗಳಿಂದ ನೂರಾರು ಟನ್​ ಆಕ್ಸಿಜನ್​ ವ್ಯರ್ಥವಾಗುತ್ತಿದೆ.

oxygen was seen leaking
oxygen was seen leaking
author img

By

Published : May 6, 2021, 3:33 PM IST

ಪಾಲಿ(ರಾಜಸ್ಥಾನ): ದೇಶದಲ್ಲಿ ಎರಡನೇ ಹಂತದ ಕೋವಿಡ್ ಅಲೆ ಜೋರಾಗಿರುವ ಕಾರಣ ನಿತ್ಯ ಸಾವಿರಾರು ಸೋಂಕಿತರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಅವರಿಗೆ ನೀಡಲು ಆಕ್ಸಿಜನ್​ ಸಮಸ್ಯೆ ಉಂಟಾಗಿ ಹತ್ತಾರು ಜನರು ಸಾವನ್ನಪ್ಪುತ್ತಿರುವ ಘಟನೆ ನಡೆಯುತ್ತಿವೆ. ಇದರ ಮಧ್ಯೆ ಆಮ್ಲಜನಕ ಪೂರೈಕೆ ಮಾಡುವ ವೇಳೆ ನಿರ್ಲಕ್ಷ್ಯ ವಹಿಸುತ್ತಿರುವ ಘಟನೆಗಳು ಸಹ ಬೆಳಕಿಗೆ ಬರುತ್ತಿವೆ.

ಆಕ್ಸಿಜನ್​ ಸಾಗಣೆ ವೇಳೆ ಸೋರಿಕೆ

ಆಕ್ಸಿಜನ್​ ಸಿಲಿಂಡರ್​ಗಳನ್ನ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸಾಗಣೆ ಮಾಡುವಾಗ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿರುವ ಕಾರಣ ನೂರಾರು ಟನ್​ ಆಮ್ಲಜನಕ ವ್ಯರ್ಥವಾಗುತ್ತಿದೆ. ಇದೀಗ ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿ ರೈಲಿನಲ್ಲಿ ಸಾಗಣೆ ಮಾಡ್ತಿದ್ದ ಆಕ್ಸಿಜನ್​​ ಸೋರಿಕೆಯಾಗಿರುವ ಘಟನೆ ನಡೆದಿದೆ.

ಇದನ್ನೂ ಓದಿ: ಕೋವಿಡ್​ ಬಗ್ಗೆ 'RRR'​ ಚಿತ್ರ ತಂಡದಿಂದ ವಿಡಿಯೋ ರಿಲೀಸ್​; ಕನ್ನಡದಲ್ಲೇ ಮನವಿ ಮಾಡಿದ ಜೂ.ಎನ್​ಟಿಆರ್​

ಗೂಡ್ಸ್​​ ರೈಲಿನಲ್ಲಿ ತೆಗೆದುಕೊಂಡು ಹೋಗುತ್ತಿದ್ದ ವೇಳೆ ಆಮ್ಲಜನಕದ ಟ್ಯಾಂಕರ್​​ನ ಸಿಲಿಂಡರ್​ ಸೋರಿಕೆಯಾಗಿದ್ದು, ಪರಿಣಾಮ ನೂರಾರು ಟನ್ ಆಕ್ಸಿಜನ್​ ವ್ಯರ್ಥವಾಗಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಆಮ್ಲಜನಕ ಹೊತ್ತುಕೊಂಡ ಗೂಡ್ಸ್ ರೈಲು ಅಹಮದಾಬಾದ್​ಗೆ ತೆರಳುತ್ತಿತ್ತು. ರಾಜಸ್ಥಾನದ ಪಾಲಿ ರೈಲ್ವೆ ಜಂಕ್ಷನ್​ ದಾಟುತ್ತಿದ್ದ ವೇಳೆ ಆಕ್ಸಿಜನ್ ಸೋರಿಕೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಮುಖ್ಯ ಕಾರಣ ಎಂದು ವರದಿಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.