ಖಮ್ಮಂ (ತೆಲಂಗಾಣ): ಡೆಡ್ಲಿ ವೈರಸ್ ಕೊರೊನಾದಿಂದ ಸಾವನ್ನಪ್ಪಿದರೆ ಸಾಕು ಮೃತದೇಹದ ಬಳಿ ಯಾರೂ ಕೂಡ ಸುಳಿಯುವುದಿಲ್ಲ. ಇದರ ಜತೆಗೆ ಅದರ ಹತ್ತಿರ ಹೋಗುವುದಕ್ಕೂ ಯಾರಿಗೂ ಕೂಡ ಆಸ್ಪಂದ ನೀಡಲ್ಲ. ಆದರೆ, ಇದಕ್ಕೆ ವಿರುದ್ಧವಾಗಿ ಸಮಾಜ ಸೇವಕನೊಬ್ಬ ನಡೆದುಕೊಂಡಿರುವ ಘಟನೆ ನಡೆದಿದೆ.
ಸಮಾಜ ಸೇವಕನೋರ್ವ ಕೋವಿಡ್ನಿಂದ ಸಾವನ್ನಪ್ಪಿರುವ ವ್ಯಕ್ತಿಯ ಮೃತದೇಹಕ್ಕೆ ಕಿಸ್ ಕೊಟ್ಟಿರುವ ಘಟನೆ ನಡೆದಿದೆ. ತೆಲಂಗಾಣದ ಖಮ್ಮಂನ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ.
ಕೋವಿಡ್ನಿಂದ ಸಾವನ್ನಪ್ಪಿರುವ ವ್ಯಕ್ತಿಯ ಮೃತದೇಹದಿಂದ ಇತರರಿಗೂ ಸೋಂಕು ಬರುವುದಿಲ್ಲ ಎಂಬುದನ್ನ ಸಾಬೀತು ಪಡಿಸಲು ಅವರು ಈ ರೀತಿಯಾಗಿ ನಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಹಿನ್ನಡೆಯ ನಂತರ ಈಗ ಸನೋಫಿ - ಜಿಎಸ್ಕೆ ವೈರಸ್ ಲಸಿಕೆಯಲ್ಲಿ ಯಶಸ್ಸು
ನಿನ್ನೆ ಖಮ್ಮಂನ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಮೃತದೇಹಗಳಿಂದ ವೈರಸ್ ಹರಡುವುದಿಲ್ಲ ಎಂಬ ಅರಿವು ಮೂಡಿಸುವ ಸಲುವಾಗಿ ಈ ರೀತಿ ನಡೆದುಕೊಂಡಿದ್ದಾರೆ. ವಿಶೇಷವೆಂದರೆ ದೇಶದಲ್ಲಿ ಎರಡನೇ ಹಂತದ ಕೋವಿಡ್ ಪ್ರಾರಂಭವಾದಾಗಿನಿಂದಲೂ ಅನ್ನಂ ಶ್ರೀನಿವಾಸರಾವ್ ನೂರಾರು ಮೃತದೇಹಗಳ ಅಂತ್ಯಕ್ರಿಯೆ ನಡೆಸಿದ್ದಾರೆ.