ETV Bharat / bharat

ಗೆಳತಿಗಾಗಿ ಸ್ನೇಹಿತನ ಕೊಂದು ಮನೆಯಲ್ಲಿ ಹೂತಿಟ್ಟ..ಕೊನೆಗೂ ಬಯಲಾಯ್ತು 7 ತಿಂಗಳ ರಹಸ್ಯ! - ಮಧ್ಯಪ್ರದೇಶದಲ್ಲಿ ಸ್ನೇಹಿತನ ಮೇಲೆ ಅನುಮಾನ ಗೆಳಯನ ಕೊಲೆ

ಹಬೀಬ್‌ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಜಗಳದ ವೇಳೆ ಆರೋಪಿ ಯುವಕ, ಶಿವನನ್ನು ಕೊಂದು ಹೂತಿಟ್ಟ ರೀತಿಯಲ್ಲಿಯೇ ನಿನ್ನನ್ನು ಕೊಂದು ನೆಲದಲ್ಲಿ ಹೂತು ಹಾಕುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಯುವಕ ಹೀಗೆ ಆವಾಜ್​​ ಹಾಕುತ್ತಿರುವ ವಿಷಯವನ್ನ ಸ್ಥಳೀಯ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

A sensational case of murder has come to light in the capital MP Bhopal

author img

By

Published : May 24, 2022, 9:47 PM IST

ಭೋಪಾಲ್ (ಮಧ್ಯಪ್ರದೇಶ): ರಾಜಧಾನಿ ಭೋಪಾಲ್​​ನಲ್ಲಿ ಸಂಚಲನ ಮೂಡಿಸಿರುವ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸ್ನೇಹಿತನೊಬ್ಬ ಇನ್ನೊಬ್ಬ ಸ್ನೇಹಿತನನ್ನು ಕೊಂದು ಶವವನ್ನು 7 ತಿಂಗಳ ಕಾಲ ತನ್ನದೇ ಕೋಣೆಯಲ್ಲಿಟ್ಟಿದ್ದ ಪ್ರಕರಣ ಈಗ ಭೋಪಾಲ್​ನಲ್ಲಿ ಸಂಚಲನ ಸೃಷ್ಟಿಸಿದೆ. ಗೆಳೆಯ ಮತ್ತು ಗೆಳತಿ ನಿಜವಾದ ಲಿವಿಂಗ್ ರಿಲೇಶನ್ ಶಿಪ್​​​ನಲ್ಲಿದ್ದರು. ತನ್ನ ಗೆಳತಿಯ ಮೇಲೆ ಸ್ನೇಹಿತ ಕಣ್ಣಿಟ್ಟಿದ್ದಾನೆ ಎಂಬ ಅನುಮಾನದ ಮೇಲೆ ಗೆಳೆಯನನ್ನು ಕೊಲೆ ಮಾಡಿದ ಪ್ರಕರಣ ಇದಾಗಿದೆ.

ಕಳೆದ 7 ತಿಂಗಳ ನಂತರ ನಿನ್ನೆ ರಾತ್ರಿ ಅಂದರೆ ಸೋಮವಾರ ರಾತ್ರಿ ಕುಡಿದ ಅಮಲಿನಲ್ಲಿ ಗೆಳೆಯ ಮತ್ತು ಗೆಳತಿ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಇಬ್ಬರ ಜಗಳ ಬೀದಿಗೂ ಬಂದಿದೆ. ಈ ವೇಳೆಯೇ ಕೊಲೆಯ ರಹಸ್ಯವನ್ನು ಆರೋಪಿ ಹೊರಹಾಕಿದ್ದಾನೆ. ಈ ವಿಷಯ ಪೊಲೀಸರಿಗೂ ಮುಟ್ಟಿದೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಶವ ಹೊರತೆಗೆದಿದ್ದಾರೆ. ಬಳಿಕ ಪ್ರೇಮಿ ಮತ್ತು ಗೆಳತಿ ಇಬ್ಬರನ್ನೂ ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?: ಹಬೀಬ್‌ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಜಗಳದ ವೇಳೆ ಆರೋಪಿ ಯುವಕ, ಶಿವನನ್ನು ಕೊಂದು ಹೂತಿಟ್ಟ ರೀತಿಯಲ್ಲಿಯೇ ನಿನ್ನನ್ನು ಕೊಂದು ನೆಲದಲ್ಲಿ ಹೂತು ಹಾಕುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಯುವಕ ಹೀಗೆ ಆವಾಜ್​​ ಹಾಕುತ್ತಿರುವ ವಿಷಯವನ್ನ ಸ್ಥಳೀಯ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಜಗಳದ ಹಿನ್ನೆಲೆಯಲ್ಲಿ ದೂರು ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ, ಗೆಳೆಯ ಮತ್ತು ಗೆಳತಿ ಇದ್ದ ಕೊಠಡಿಯಲ್ಲಿ ಪರಿಶೀಲನೆ ನಡೆಸಿದ್ದಾರೆ. ಯುವಕ ಕುಡಿದ ಅಮಲಿನಲ್ಲಿ ಸತ್ಯ ಹೇಳಿದ್ದ. ಅವನ ಹೇಳಿಕೆ ಪ್ರಕಾರವೇ ಹೂತಿಟ್ಟ ಜಾಗವನ್ನು ಪೊಲೀಸರು ಅಗೆದಿದ್ದಾರೆ. ಈ ವೇಳೆ ಶವ ಪತ್ತೆಯಾಗಿದೆ. ನಂತರ ಪೊಲೀಸರು ಆರೋಪಿಯನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಆರೋಪಿ ಸ್ನೇಹಿತನನ್ನು ಕೊಂದಿರುವುದಾಗಿಯೂ ಒಪ್ಪಿಕೊಂಡಿದ್ದಾನೆ.

ಅನುಮಾನದಿಂದಲೇ ಸ್ನೇಹಿತನ ಕೊಲೆ: ಮೃತ ಯುವಕ ಭೋಪಾಲ್‌ನ ಟಿಟಿ ನಗರ ನಿವಾಸಿಯಾಗಿದ್ದಾನೆ. ಕೊಲೆಯಾದ ಯುವಕನನ್ನು ಶಿವ ಎಂದು ಗುರುತಿಸಲಾಗಿದೆ. ಆರೋಪಿ ಶಂಶೇರ್ ಹಾಗೂ ಮೃತ ಶಿವನ ನಡುವೆ ಉತ್ತಮ ಸ್ನೇಹವಿತ್ತು. ತನ್ನ ಗೆಳತಿಯೊಂದಿಗೆ ಶಿವ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಶಂಶೇರ್​ ಅನುಮಾನ ಪಟ್ಟಿದ್ದಾನೆ. ಇದೇ ಅನುಮಾನದಿಂದ ಸ್ನೇಹಿತನ ಕತ್ತು ಕೊಯ್ದು ಕೊಲೆ ಮಾಡಿ ಶವವನ್ನು ಆತನ ಕೋಣೆಯಲ್ಲಿ ಹೂತು ಹಾಕಿದ್ದ. ಪೊಲೀಸರ ತನಿಖೆ ಹಾಗೂ ತಪಾಸಣೆ ಬಳಿಕ ಸತ್ಯ ಹೊರ ಬಂದಿದೆ. ಸದ್ಯ ಪೊಲೀಸರು ಪ್ರಿಯಕರ ಮತ್ತು ಪ್ರಿಯತಮೆಯನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.

ಪೊಲೀಸರು ಈ ಬಗ್ಗೆ ಹೇಳೋದೇನು?: 2021ರ ಅಕ್ಟೋಬರ್‌ನಲ್ಲಿ ಶಂಶೇರ್​ ಸ್ನೇಹಿತ ಶಿವನನ್ನು ಕೊಲೆ ಮಾಡಿದ್ದಾನೆ. ಹೀಗೆ ಕೊಲೆ ಮಾಡಿದ ಶಂಶೇರ್​ ಹೊರಗೆ ಎಸೆದರೆ ಗೊತ್ತಾಗುತ್ತದೆ ಎಂಬ ಕಾರಣದಿಂದ ಶವವನ್ನು ಅವನ ಮನೆಯಲ್ಲೇ ಹೂತು ಹಾಕಿದ್ದಾನೆ. ಅದಾದ ಮೇಲೆ ಏನೂ ಆಗಿಲ್ಲ ಎಂಬಂತೆ ಆರೋಪಿ ಹಾಗೂ ಆತನ ಗೆಳತಿ ಇಬ್ಬರೂ ಒಂದೇ ಮನೆಯಲ್ಲಿ ವಾಸವಾಗಿದ್ದರು. ನಿನ್ನೆ ರಾತ್ರಿ ಆರೋಪಿ ಶಂಶೇರ್ ಹಾಗೂ ಆತನ ಗೆಳತಿ ನಡುವೆ ಜಗಳವಾಗಿತ್ತು. ಈ ವೇಳೆ ಆರೋಪಿ ತಾಳ್ಮೆ ಕಳೆದುಕೊಂಡು ಶಿವನನ್ನು ಹೇಗೆ ಕೊಂದಿದ್ದೇನೋ ಅದೇ ರೀತಿ ನಿನ್ನನ್ನೂ ಕೊಂದು ನಿಗ್ರಹಿಸುತ್ತೇನೆ ಎಂದು ಜೋರಾಗಿ ಕೂಗಾಡಿದ್ದಾನೆ.

ಇಬ್ಬರ ಜಗಳವನ್ನು ನೋಡುತ್ತಿದ್ದ ಅಲ್ಲಿನ ನಿವಾಸಿಗಳು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದು, ಮೃತ ಶಿವನ ಮೃತದೇಹ ಪತ್ತೆಯಾಗಿದೆ. ಸದ್ಯ ಆರೋಪಿಗಳಿಬ್ಬರನ್ನೂ ಬಂಧಿಸಿ ವಿಚಾರಣೆ ಆರಂಭಿಸಿದ್ದೇವೆ ಎಂದು ನಗರ ಉಪ ಪೊಲೀಸ್ ಆಯುಕ್ತ ಸಾಯಿ ಕೃಷ್ಣ ತೋಟ ಮಾಹಿತಿ ನೀಡಿದ್ದಾರೆ.

ಇದನ್ನು ಓದಿ:ವಿಡಿಯೋ: ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ.. ಕಂಬಕ್ಕೆ ಕಟ್ಟಿ ಯುವಕನಿಗೆ ಥಳಿಸಿದ ಗ್ರಾಮಸ್ಥರು

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.