ಮುಂಬೈ: ಕಾಲು ಜಾರಿ 20 ಅಡಿ ಆಳದ ಸಮುದ್ರಕ್ಕೆ ಬಿದ್ದಿದ್ದ ಮಹಿಳೆಯನ್ನು ರಕ್ಷಿಸಲು ಫೋಟೋಗ್ರಾಫರ್ವೋರ್ವ ಸಮುದ್ರಕ್ಕೆ ಹಾರಿರುವ ಘಟನೆ ಗೇಟ್ ವೇ ಆಫ್ ಇಂಡಿಯಾ ಬಳಿ ನಡೆದಿದೆ. ಸದ್ಯ ಈ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಹಿಳೆ ಸೇತುವೆ ಮೇಲೆ ನಿಂತು ಸಮುದ್ರದ ಅಲೆಗಳನ್ನು ನೋಡುತ್ತಿದ್ದಾಗ ಆಯತಪ್ಪಿ ಬಿದ್ದಿದ್ದು, ರಕ್ಷಣೆಗಾಗಿ ಕೂಗಿದ್ದಾಳೆ. ಕೂಡಲೇ ಸ್ಥಳದಲ್ಲಿದ್ದ ಪ್ರವಾಸಿ, ಫೋಟೋಗ್ರಾಫರ್ ಸಮುದ್ರಕ್ಕೆ ಹಾರಿದ್ದಾನೆ. ಸ್ಥಳದಲ್ಲಿದ್ದ ಜನರು ಮಹಿಳೆ ರಕ್ಷಣೆಗಾಗಿ ಹಗ್ಗ ಮತ್ತು ಇತರೆ ಸಾಮಗ್ರಿಗಳನ್ನು ಎಸೆದರು. ಸಮುದ್ರದ ನೀರಿನ ಹರಿವು ಹೆಚ್ಚಾಗಿದ್ದರಿಂದ ತುಂಬಾ ಹೊತ್ತು ಸೆಣಸಾಡಿದ ಬಳಿಕ ಫೋಟೋಗ್ರಾಫರ್ ಮಹಿಳೆಯನ್ನು ರಕ್ಷಿಸಿದ್ದಾನೆ.
ಫೋಟೋಗ್ರಾಫರ್ ಗುಲಾಬ್ಚಂದ್ ಇಲ್ಲದಿದ್ದರೆ ಭಾರಿ ದುರಂತವೊಂದು ಸಂಭವಿಸುತ್ತಿತ್ತು. ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ:ಓರ್ವ ಯುವತಿಗೋಸ್ಕರ ಇಬ್ಬರು ಆತ್ಮಹತ್ಯೆ, ಆಸ್ಪತ್ರೆ ಸೇರಿದ ಮತ್ತಿಬ್ಬರು... ಏನಿದು ಲವ್ ಕಹಾನಿ?