ಕಾಸರಗೋಡು (ಕೇರಳ): ಪೋಕ್ಸೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯೊಬ್ಬನಿಗೆ 97 ವರ್ಷ ಕಠಿಣ ಕಾರಾಗೃಹ ಶಿಕ್ಷೆ ನೀಡಲಾಗಿದೆ. ಹೌದು, ಕಾಸರಗೋಡು ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯವು ಆರೋಪಿಗೆ ಈ ಶಿಕ್ಷೆಯನ್ನು ವಿಧಿಸಿದ್ದು, 8.5 ಲಕ್ಷ ರೂಪಾಯಿ ದಂಡವನ್ನೂ ಕೂಡಾ ವಿಧಿಸಲಾಗಿದೆ. ತನ್ನ ಸಂಬಂಧಿಯಾದ ಅಪ್ರಾಪ್ತ ಬಾಲಕಿಗೆ 8 ವರ್ಷಗಳಿಂದ ಕಿರುಕುಳ ನೀಡಿದ್ದಾನೆ. 2008ರಿಂದ 2017ರವರೆಗೆ ಬಾಲಕಿಯ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ.
ದಂಡ ಪಾವತಿಸದಿದ್ದಲ್ಲಿ ಎಂಟೂವರೆ ವರ್ಷ ಹೆಚ್ಚುವರಿ ಜೈಲು ಶಿಕ್ಷೆ: ಅಶ್ಲೀಲ ವಿಡಿಯೋಗಳನ್ನು ತೋರಿಸಿ, 1ರಿಂದ 8ನೇ ತರಗತಿವರೆಗೆ ಬಾಲಕಿಯ ಮೇಲೆ ಆರೋಪಿ ಅತ್ಯಾಚಾರವೆಸಗಿದ್ದಾನೆ. ಇದೊಂದು ಅಪರೂಪದ ಪ್ರಕರಣ ಎಂದು ನ್ಯಾಯಾಲಯ ಪರಿಗಣಿಸಿದೆ. ದಂಡ ಪಾವತಿಸದಿದ್ದಲ್ಲಿ ಎಂಟೂವರೆ ವರ್ಷ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಮಂಜೇಶ್ವರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ತನಿಖೆಯನ್ನು ಮೊದಲು ಇನಸ್ಪಕ್ಟರ್‌ಗಳಾದ ಎ.ವಿ.ದಿನೇಶ್ ಮತ್ತು ಪಿ.ರಾಜೇಶ್ ವಹಿಸಿದ್ದರು. ತನಿಖೆಯನ್ನು ಪೂರ್ಣಗೊಳಿಸಿದ ನಂತರ ಮಂಜೇಶ್ವರಂ ಇನಸ್ಪಕ್ಟರ್ ಇ.ಅನೂಪ್ ಕುಮಾರ್ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದರು. ಪ್ರಾಸಿಕ್ಯೂಷನ್ ಪರವಾಗಿ ವಿಶೇಷ ಅಭಿಯೋಜಕ ಪ್ರಕಾಶ್ ಅಮ್ಮಣ್ಣಾಯ ವಾದ ಮಂಡಿಸಿದ್ದರು.
ಇತ್ತೀಚಿನ ಪ್ರಕರಣ, ಮೊಬೈಲ್ ಹಾಗೂ ಆಹಾರ ನೀಡಿ ಬಾಲಕಿಗೆ ಚಿತ್ರಹಿಂಸೆ( ತೆಲಂಗಾಣ): ಆ.11ರಂದು ಏಳು ವರ್ಷದ ಬಾಲಕಿಗೆ ಮೊಬೈಲ್ ಹಾಗೂ ಆಹಾರ ಕೊಡಿಸಿ ಚಿತ್ರಹಿಂಸೆ ನೀಡಿದ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿತ್ತು. ಕರ್ನಾಟಕ ಮೂಲದ ಶಿವಕುಮಾರ್ (44) ಮತ್ತು ಅವರ ಆತನ ಪುತ್ರ ಶ್ಯಾಮಲ್ (19) ಬಂಧಿತ ಆರೋಪಿಗಳು. ತೆಲಂಗಾಣದ ಪೆಟ್ಬಶಿರಾಬಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಇಬ್ಬರು ಆರೋಪಿಗಳು ಪಕ್ಕದ ಮನೆಯವರಾಗಿದ್ದರಿಂದ ಬಾಲಕಿಯು ಆಗಾಗ ಆರೋಪಿಯ ಮನೆಗೆ ಹೋಗುತ್ತಿದ್ದಳು. ಘಟನೆ ನಡೆದ ದಿನ ಬಾಲಕಿಯ ಪೋಷಕರು ಬಹದ್ದೂರ್‌ಪಲ್ಲಿ ಕೆಲಸಕ್ಕೆ ಹೋಗಿದ್ದರು.
ಆರೋಪಿಗಳು ಮಗುವಿಗೆ ಆಟವಾಡಲು ಮೊಬೈಲ್ ಹಾಗೂ ತಿನ್ನಲು ಸಮೋಸ ನೀಡುವುದಾಗಿ ಹೇಳಿ ಮನೆಗೆ ಕರೆದುಕೊಂಡು ಹೋಗಿದ್ದರು. ಬಳಿಕ ಶಿವಕುಮಾರ್ ಮತ್ತು ಆತನ ಪುತ್ರ ಸೇರಿ ಮಗುವಿಗೆ ಚಿತ್ರಹಿಂಸೆ ನೀಡಿದ್ದರು. ಮಗು ರಕ್ತಸ್ರಾವದಿಂದ ಹಿಂತಿರುಗಿತು. ಕೆಲಸ ಮುಗಿಸಿ ಮನೆ ಬಂದ ಪೋಷಕರಿಗೆ ಕಿರುಕುಳ ನೀಡಿರುವ ಕುರಿತು ಬಾಲಕಿ ತಿಳಿಸಿದ್ದಳು. ಬಳಿಕ ಪೋಷಕರು ಮಗುವನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ ಬಳಿಕ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು.
ಇದನ್ನೂ ಓದಿ: ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಪೊಲೀಸ್ ಕಾನ್ಸ್‌ಟೇಬಲ್ : ದೂರು ದಾಖಲು