ಪುಣೆ (ಮಹಾರಾಷ್ಟ್ರ): 13 ವರ್ಷದ ಅಪ್ರಾಪ್ತೆಯನ್ನು ಅಪಹರಿಸಿ ಆಕೆ ಮೇಲೆ 13 ಮಂದಿ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಆಗಸ್ಟ್ 31ರ ರಾತ್ರಿ ಬಾಲಕಿಯು ತನ್ನ ಗ್ರಾಮಕ್ಕೆ ತೆರಳಲೆಂದು ಪುಣೆಯ ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದಳು.
ಈಕೆಯನ್ನು ಕಂಡ ಕಾಮುಕರು ಅವಳನ್ನು ಅಪಹರಿಸಿ, ರಿಕ್ಷಾದಲ್ಲಿ ತುಂಬಿಕೊಂಡು ಹೋಗಿದ್ದಾರೆ. ಬಳಿಕ ನಿರ್ಜನ ಪ್ರದೇಶಕ್ಕೆ ಹೊತ್ತೊಯ್ದು ಅತ್ಯಾಚಾರ ಮಾಡಿದ್ದಾರೆ. ಆರೋಪಿಗಳಲ್ಲಿ ಇಬ್ಬರು ರೈಲ್ವೆ ಉದ್ಯೋಗಿಗಳಾಗಿದ್ದು 8 ಮಂದಿ ಆಟೋ ಚಾಲಕರು ಎಂದು ತಿಳಿದುಬಂದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ವನವಾಡಿ ಪೊಲೀಸರು ರಿಕ್ಷಾ ಚಾಲಕ ಸೇರಿ 8 ಮಂದಿಯನ್ನು ಬಂಧಿಸಿದ್ದಾರೆ.
ಈ ಸುದ್ದಿಗಳನ್ನೂ ಓದಿ: 1. ದನದ ಕೊಟ್ಟಿಗೆಗೆ ಕರೆದೊಯ್ದು ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ
2. ತುಮಕೂರು : 12 ವರ್ಷದ ಬಾಲಕಿ ಮೇಲೆ 65 ವರ್ಷದ ಮುದುಕನಿಂದ ಅತ್ಯಾಚಾರ
ಮೊನ್ನೆಯಷ್ಟೇ ಕರ್ನಾಟಕದ ತುಮಕೂರಿನಲ್ಲಿ 12 ವರ್ಷದ ಬಾಲಕಿ ಮೇಲೆ 65 ವರ್ಷದ ವೃದ್ಧ ಅತ್ಯಾಚಾರ ಎಸಗಿರುವುದು ಹಾಗೂ ಆಂಧ್ರದ ಕೃಷ್ಣಾ ಜಿಲ್ಲೆಯಲ್ಲಿ ಅಪ್ರಾಪ್ತೆಯನ್ನು ದನದ ಕೊಟ್ಟಿಗೆಗೆ ಕರೆದೊಯ್ದು ಆಕೆಯ ಮೇಲೆ ಮೂವರು ವ್ಯಕ್ತಿಗಳು ಎಗರಿದ್ದ ಘಟನೆ ಬೆಳಕಿಗೆ ಬಂದಿತ್ತು.