ಜಮ್ಮು ಮತ್ತು ಕಾಶ್ಮೀರ: ಕಣಿವೆಯಲ್ಲಿ ಉಗ್ರದಮನ ಕಾರ್ಯಾಚರಣೆ ಮುಂದುವರಿದಿದ್ದು, ಇಂದು ಬೆಳಗ್ಗೆ ನಡೆದ ಎನ್ಕೌಂಟರ್ನಲ್ಲಿ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ. ಅನಂತ್ನಾಗ್ನ ತಂಗ್ಪಾವ ಎಂಬಲ್ಲಿ ಉಗ್ರರು ಅಡಗಿರುವ ಬಗ್ಗೆ ಮಾಹಿತಿ ಪಡೆದ ಸೇನಾಪಡೆ ಸೋಮವಾರ ಬೆಳಗ್ಗೆಯೇ ಕಾರ್ಯಾಚರಣೆಗೆ ಇಳಿದಿತ್ತು.
ಈ ವೇಳೆ 6.30 ರ ಸುಮಾರಿನಲ್ಲಿ ಓರ್ವ ಉಗ್ರನಿಗೆ ಸೈನಿಕರು ಗುಂಡಿಕ್ಕಿದ್ದಾರೆ. ಬಳಿಕ ಕಾರ್ಯಾಚರಣೆ ಮುಂದುವರಿದು, ಇನ್ನೊಬ್ಬನನ್ನು 9 ಗಂಟೆ ಸುಮಾರನಲ್ಲಿ ಬೇಟೆಯಾಡಿದ್ದಾರೆ. ಒಬ್ಬ ಉಗ್ರ ಸಿಕ್ಕಿಬಿದ್ದಿದ್ದಾನೆ ಎಂದು ತಿಳಿದುಬಂದಿದೆ.