ETV Bharat / bharat

ಕೇವಲ 6 ಗಂಟೆಯಲ್ಲಿ ಮುರಿದು ಬಿತ್ತು ಪ್ರೇಮಿಗಳ​ ಮದುವೆ​; ಪತ್ನಿಯ ಹಣೆಗಿಟ್ಟ ಸಿಂಧೂರ ಅಳಿಸಿ ಹಾಕಿದ ಗಂಡ! - ಪತ್ನಿಯ ಹಣೆಗಿಟ್ಟ ಸಿಂಧೂರ

16 ವರ್ಷದ ಯುವಕ ಹಾಗೂ 19 ವರ್ಷದ ಹುಡುಗಿಗೂ ಮದುವೆ ಮಾಡಿಸಲಾಗಿತ್ತು. ಆದರೆ ಮದುವೆ ಕಾನೂನು ಬಾಹಿರವಾಗಿದ್ದ ಕಾರಣ ಕೇವಲ ಆರು ಗಂಟೆಯಲ್ಲಿ ಮದುವೆ ಮುರಿದು ಬಿದ್ದಿದೆ.

Marriage
Marriage
author img

By

Published : Aug 23, 2021, 5:42 PM IST

Updated : Aug 23, 2021, 6:33 PM IST

ಗರ್ಹ್ವಾ(ಜಾರ್ಖಂಡ್​): ಮದುವೆ ಮಾಡಿಕೊಂಡ ಸಂಭ್ರಮದಲ್ಲಿದ್ದ ಯುವಕನೊಬ್ಬ ಕೇವಲ ಆರು ಗಂಟೆಯಲ್ಲೇ ತಾಳಿ ಕಟ್ಟಿದ ಹೆಂಡತಿಯ ಸಿಂಧೂರ ಅಳಸಿ ಹಾಕಿರುವ ಘಟನೆ ಜಾರ್ಖಂಡ್​ನ ಗರ್ಹ್ವಾದಲ್ಲಿ ನಡೆದಿದೆ.

ಪತ್ನಿಯ ಹಣೆಗಿಟ್ಟ ಸಿಂಧೂರ ಅಳಸಿ ಹಾಕಿದ ಗಂಡ!

ಏನಿದು ಸಂಪೂರ್ಣ ಪ್ರಕರಣ?

ಜಾರ್ಖಂಡ್​ನ ಗರ್ಹ್ವಾದ ಬರ್ದಿಹಾ ಬ್ಲಾಕ್​​ನಲ್ಲಿ ಈ ಘಟನೆ ನಡೆದಿದ್ದು, ಶುಕ್ರವಾರ ತಡರಾತ್ರಿ ರಾಕೇಶ್​ ಎಂಬ ಯುವಕನೊಬ್ಬ ಮಾಗ್ವಾನ್​ ಗ್ರಾಮದ ಟೆಟ್ರಿ ಕುನ್ವಾರ್​ ಮನೆಗೆ ಕಳ್ಳನ ರೀತಿಯಲ್ಲಿ ನುಗ್ಗಿದ್ದಾನೆ. ಈ ವೇಳೆ, ಮನೆಯವರನ್ನ ನೋಡಿ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ, ಆತನನ್ನ ಗ್ರಾಮಸ್ಥರು ಹಿಡಿದು ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

ಕಳ್ಳತನ ಮಾಡುವ ಉದ್ದೇಶದಿಂದಲೇ ಆತ ಮನೆಯೊಳಗೆ ನುಗ್ಗಿದ್ದಾನೆಂದು ಎಲ್ಲರೂ ಅಂದುಕೊಂಡಿದ್ದರು. ಆದರೆ, ಈ ವೇಳೆ ತಾನು ಕಳ್ಳನಲ್ಲ. ಟೆಟ್ರಿ ಕುನ್ವಾರ್​​ನ ಮಗಳನ್ನ ಪ್ರೀತಿಸುತ್ತಿದ್ದು, ಭೇಟಿ ಮಾಡುವ ಉದ್ದೇಶದಿಂದ ಮನೆಯೊಳಗೆ ನುಗ್ಗಿರುವುದಾಗಿ ತಿಳಿಸಿದ್ದಾನೆ. ಈ ವೇಳೆ, ಯುವತಿಯ ಪ್ರಶ್ನೆ ಮಾಡಲಾಗಿದ್ದು, ಆಕೆ ಸಹ ಒಪ್ಪಿಕೊಂಡಿದ್ದಾಳೆ.

Marriage
ಆರು ಗಂಟೆಯಲ್ಲಿ ಮುರಿದು ಬಿದ್ದ ಮದುವೆ

ಶನಿವಾರ ಬೆಳಗ್ಗೆ ಯುವಕನ ತಂದೆ. ತಾಯಿ ಹಾಗೂ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದ್ದು, ಎರಡು ಕಡೆಯವರು ಇವರ ಮದುವೆಗೆ ಒಪ್ಪಿಕೊಂಡಿದ್ದಾರೆ. ಅದರಂತೆ ಮಾಗ್ವಾನ್​​ನಲ್ಲಿ ಮದುವೆ ನಡೆದಿದೆ.

ಆರು ಗಂಟೆಯಲ್ಲಿ ಮಾಯವಾದ ಸಂತೋಷ

ಇವರ ಮದುವೆ ಮಾಡಿಕೊಂಡಿರುವ ವಿಚಾರವನ್ನ ಕೆಲವರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಈ ವೇಳೆ, ಎರಡು ಕಡೆಯವರನ್ನ ಠಾಣೆಗೆ ಕರೆಯಿಸಿಕೊಂಡಿದ್ದಾರೆ. ಈ ವೇಳೆ ವಿಚಾರಣೆ ನಡೆಸಿದಾಗ ಯುವತಿ ವಯಸ್ಸು 19 ಹಾಗೂ ಯುವಕನ ವಯಸ್ಸು 16 ವರ್ಷ ಎಂದು ತಿಳಿದು ಬಂದಿದೆ. ಅಪ್ರಾಪ್ತ ಹುಡುಗನ ಜೊತೆ ಮದುವೆ ಮಾಡಿರುವುದು ಕಾನೂನು ಬಾಹಿರ ಎಂದು ಪೊಲೀಸರು ತಿಳಿಸಿದ್ದಾರೆ. ಹೀಗಾಗಿ ಯುವಕ ತಾನು ಮದುವೆ ಮಾಡಿಕೊಂಡಿದ್ದ ಯುವತಿಯ ಸಿಂಧೂರ ಅಳಸಿ ಹಾಕಿದ್ದಾನೆ.

ಇದನ್ನೂ ಓದಿರಿ: ಶವವಾಗಿ ಪತ್ತೆಯಾದ 24 ವರ್ಷದ ನಟಿ.. ಇದು ಆತ್ಮಹತ್ಯೆಯೋ? ಕೊಲೆಯೋ?

ಘಟನೆಗೆ ಸಂಬಂಧಿಸಿದಂತೆ ಎರಡು ಕಡೆಯಿಂದ ಯಾವುದೇ ರೀತಿಯ ಪ್ರಕರಣ ದಾಖಲಾಗದ ಕಾರಣ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿಲ್ಲ ಎಂದು ತಿಳಿದು ಬಂದಿದೆ.

Last Updated : Aug 23, 2021, 6:33 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.