ETV Bharat / bharat

ತೆಲಂಗಾಣ : ವಿಷಕಾರಿ ಹಾವನ್ನು ಕೊರಳಿಗೆ ಸುತ್ತಿಕೊಂಡು ಮುತ್ತಿಟ್ಟವನ ಸ್ಥಿತಿ ಗಂಭೀರ

ತಪಾಸಣೆ ವೇಳೆ ಆತನಿಗೆ ಹಾವು ಕಚ್ಚಿದೆ. ಆ ವ್ಯಕ್ತಿಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಹಾವು ಹಿಡಿದು ಸುಮ್ಮನಿರದೇ ಮುತ್ತಿಡಲು ಹೋದವ ಇದೀಗ ಸಾವು ಬದುಕಿನ ಮಧ್ಯೆ ಹೋರಾಡುವಂತಾಗಿದೆ..

snake
ವಿಷಕಾರಿ ಹಾವನ್ನು
author img

By

Published : Jan 25, 2022, 12:35 PM IST

Updated : Jan 25, 2022, 1:18 PM IST

ಹೈದ್ರಾಬಾದ್​ (ತೆಲಂಗಾಣ) : ಮನೆಗೆ ಹೊಕ್ಕಿದ್ದ ವಿಷಕಾರಿ ಹಾವನ್ನು ಹಿಡಿದು ಅದಕ್ಕೆ ಮುತ್ತಿಡುವಾಗ ಕಚ್ಚಿದ ಪರಿಣಾಮ ವ್ಯಕ್ತಿಯೊಬ್ಬ ಆಸ್ಪತ್ರೆ ಪಾಲಾದ ಘಟನೆ ತೆಲಂಗಾಣದ ಮೆಡ್ಚಲ್​ ಮಲ್ಕಾಜ್​ಗ್ರಿ ಜಿಲ್ಲೆಯಲ್ಲಿ ನಡೆದಿದೆ.

ಮಹಾರಾಷ್ಟ್ರ ಮೂಲದ ಆಕಾಶ್​(30) ಆರೋಗ್ಯ ಸ್ಥಿತಿ ಗಂಭೀರವಾಗಿ ಆಸ್ಪತ್ರೆ ಸೇರಿದವರು. ಭಾನುವಾರ ರಾತ್ರಿ ವೇಳೆ ಹಾವೊಂದು ಆಕಾಶ್​ ನೆಲೆಸಿದ್ದ ಕಾಲೋನಿಯಲ್ಲಿ ಕಾಣಿಸಿತ್ತು. ಈ ವೇಳೆ ಆಕಾಶ್​ ವಿಷಕಾರಿ ಹಾವನ್ನು ಹಿಡಿದು, ಕೊರಳಿಗೆ ಸುತ್ತಿಕೊಂಡಿದ್ದಲ್ಲದೇ, ಅದಕ್ಕೆ ಮುತ್ತಿಟ್ಟಿದ್ದಾನೆ.

ವಿಷಕಾರಿ ಹಾವನ್ನು ಕೊರಳಿಗೆ ಸುತ್ತಿಕೊಂಡು ಮುತ್ತಿಟ್ಟವನ ಸ್ಥಿತಿ ಗಂಭೀರ

ಅಲ್ಲಿದ್ದವರು ಇದನ್ನು ವಿಡಿಯೋ ಮಾಡಿದ್ದರು. ಹಾವಿಗೆ ಮುತ್ತಿಡುತ್ತಿರುವ ಫೋಟೊ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ. ಆದರೆ, ಕೆಲ ಸಮಯದ ಬಳಿಕ ಆ ವ್ಯಕ್ತಿ ಅಸ್ವಸ್ಥಗೊಂಡಿದ್ದಾನೆ.

ಕುಟುಂಬಸ್ಥರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ತಪಾಸಣೆ ವೇಳೆ ಆತನಿಗೆ ಹಾವು ಕಚ್ಚಿದೆ. ಆ ವ್ಯಕ್ತಿಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಹಾವು ಹಿಡಿದು ಸುಮ್ಮನಿರದೇ ಮುತ್ತಿಡಲು ಹೋದವ ಇದೀಗ ಸಾವು ಬದುಕಿನ ಮಧ್ಯೆ ಹೋರಾಡುವಂತಾಗಿದೆ.

ಇದನ್ನೂ ಓದಿ: ತೆಲಂಗಾಣ ಸರ್ಕಾರಕ್ಕೆ 20 ಟನ್​​​​​​ ರಕ್ತಚಂದನ ದಾನ ಮಾಡಿದ ಪದ್ಮಶ್ರೀ ಪುರಸ್ಕೃತ

Last Updated : Jan 25, 2022, 1:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.