ಕಡಪ: ಸ್ವಂತ ಮಗನೇ ಹೆತ್ತ ತಾಯಿ ಸೇರಿದಂತೆ ರಕ್ತ ಹಂಚಿಕೊಂಡು ಹುಟ್ಟಿದ್ದ ಸಹೋದರ ಮತ್ತು ಗರ್ಭಿಣಿಯಾಗಿದ್ದ ಸಹೋದರಿಯನ್ನು ಬರ್ಬರವಾಗಿ ಕೊಚ್ಚಿ ಕೊಲೆಗೈದ ಭಯಾನಕ ಘಟನೆ ಜಿಲ್ಲೆಯ ಪ್ರಾದ್ದುಟೂರಿನಲ್ಲಿ ನಡೆದಿದೆ.
ಏನಿದು ಘಟನೆ?
ಹಿರಿಯ ಮಗ ಕರೀಮುಲ್ಲಾ ಪತ್ನಿಯೊಂದಿಗೆ ಜಗಳವಾಡುತ್ತಿದ್ದು, ವೈಯಕ್ತಿಕ ಕಾರಣಗಳಿಗಾಗಿ ಅವರಿಬ್ಬರ ನಡುವೆ ಮನಸ್ತಾಪವಿತ್ತಂತೆ. ಈ ಬಗ್ಗೆ ತನ್ನನ್ನು ಬೆಂಬಲಿಸುವಂತೆ ತಾಯಿ, ತಂಗಿ ಮತ್ತು ತಮ್ಮನಿಗೆ ಕೇಳಿದ್ದಾನೆ. ಆದರೆ ಸಹ ಹಿರಿಯ ಮಗನ ವಿವಾದ ಬಗೆಹರಿಸಲು ಯಾರೂ ಮುಂದೆ ಬಂದಿಲ್ಲ. ಈ ವಿಷಯದ ಬಗ್ಗೆ ಕೆಲ ದಿನಗಳಿಂದ ಕುಟುಂಬದಲ್ಲಿ ವಿರಂತರವಾಗಿ ಒಳ ಜಗಳಗಳು ನಡೆಯುತ್ತಿದ್ದವು. ಹೀಗಾಗಿ ಕರೀಮುಲ್ಲಾ ಕುಟುಂಬಸ್ಥರ ಮೇಲೆ ಮನಸ್ತಾಪ ಹೆಚ್ಚಿಸಿಕೊಂಡಿದ್ದಾನೆ.
ನಿನ್ನೆ ಬೆಳ್ಳಂಬೆಳಗ್ಗೆ ನಿದ್ರಿಸುತ್ತಿದ್ದ ತಾಯಿ ಗುಲ್ಜಾರ್ ಬೇಗಂ, ತಮ್ಮ ಮಹಮ್ಮದ್ ರಫಿ, ಸಹೋದರಿ ಕರೀಮುನ್ನಿಸಾ ಸೇರಿದಂತೆ ಮೂವರನ್ನು ಕೊಡಲಿಯಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದಾನೆ. ಬಳಿಕ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.
ಈ ಘಟನೆ ಕುರಿತು ಪ್ರೊದ್ದುಟೂರು ಒನ್ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.