ಪ್ರಕಾಶಂ(ಆಂಧ್ರಪ್ರದೇಶ): ವ್ಯಕ್ತಿಯೋರ್ವ ತನಗೆ ಸೇರಿದ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ನಾಲ್ಕು ಎಕರೆ ಜಮೀನನ್ನು ಬಡವರಿಗೆ ಮನೆ ಕಟ್ಟಿಕೊಳ್ಳಲು ದಾನವಾಗಿ ನೀಡಿರುವ ಅತ್ಯಪರೂಪದ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಕುರುಚೇಡು ಎಂಬಲ್ಲಿ ನಡೆದಿದೆ.
ಪೊಟ್ಲಪಾಡು ಗ್ರಾಮಕ್ಕೆ ಸೇರಿದ ರಾಮ ಮನೋಹರ ರೆಡ್ಡಿ ತನ್ನ ಜಮೀನನ್ನು ದಾನ ಮಾಡಿದ ವ್ಯಕ್ತಿಯಾಗಿದ್ದು, ಮೂಲತಃ ಆಂಧ್ರದವರಾದರೂ, ಬೆಂಗಳೂರಿನಲ್ಲಿ ಬ್ಯುಸಿನೆಸ್ ಮಾಡುತ್ತಿದ್ದು, ಇಲ್ಲಿಯೇ ವಾಸವಾಗಿದ್ದಾರೆ.
ಸರ್ವೇ ನಂಬರ್ 375/2ರಲ್ಲಿರುವ ಪ್ಲಾಟ್ಗಳನ್ನಾಗಿ ಪರಿವರ್ತನೆ ಮಾಡಲಾಗಿದ್ದು, ಒಂದು ಪ್ಲಾಟ್ 107 ಸ್ಕ್ವೇರ್ ಯಾರ್ಡ್ನಷ್ಟಿದ್ದು (89 ಸ್ಕ್ವೇರ್ ಮೀಟರ್ ) ಅನ್ನು ಸುಮಾರು 150 ಮಂದಿಗೆ ಹಂಚಲಾಗಿದೆ. ಗ್ರಾಮದ ಹಿರಿಯರ ಸಮ್ಮುಖದಲ್ಲಿ ಬಡವರಿಗೆ ಭೂಮಿಯ ದಾಖಲೆ ಪತ್ರಗಳನ್ನು ನೀಡಲಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಮಮನೋಹರ ರೆಡ್ಡಿ ಅವರ ತಾಯಿ ಗೋವಿಂದಮ್ಮ, ನನ್ನ ಮಗ ಸ್ವಯಂ ಪ್ರೇರಿತವಾಗಿ ಬಡವರಿಗೆ ಭೂಮಿ ನೀಡಿದ್ದಾನೆ. ಬಡವರಿಗೆ ಸಹಾಯ ಮಾಡಬೇಕೆಂಬ ಉದ್ದೇಶವಿತ್ತು. ಭೂಮಿಯನ್ನು ದಾನ ಕೊಟ್ಟಿರುವುದರ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಇನ್‌ಸ್ಟಾ ಫೋಟೋ ವಿಚಾರಕ್ಕೆ 6 ವರ್ಷದ ಸೋದರಸಂಬಂಧಿ ಕೊಂದ ಕಾಲೇಜು ವಿದ್ಯಾರ್ಥಿ