ETV Bharat / bharat

ಕಾರಿನ ಜೊತೆ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಬಿಜೆಪಿ ಮುಖಂಡನ ಮೃತದೇಹ ಪತ್ತೆ

ತೆಲಂಗಾಣದ ಸ್ಥಳೀಯ ಬಿಜೆಪಿ ಮುಖಂಡ ಶ್ರೀನಿವಾಸ್ ದಿಗಾ ಅವರ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಕೃತ್ಯವನ್ನು ಯಾವುದೋ ದ್ವೇಷದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಎಸಗಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

Telangana
ಬಿಜೆಪಿ ಮುಖಂಡನ ದೇಹ ಪತ್ತೆ
author img

By

Published : Aug 11, 2021, 8:40 AM IST

ತೆಲಂಗಾಣ: ಬಿಜೆಪಿ ನಾಯಕರೊಬ್ಬರ ಮೃತದೇಹವು ಕಾರಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಘಟನೆ ರಾಜದಲ್ಲಿ ಸಂಚಲನ ಮೂಡಿಸಿದೆ. ಅನುಮಾನಾಸ್ಪದವಾಗಿ ಕಾರಿನಲ್ಲಿ ಮೃತದೇಹ ಕಂಡುಬಂದಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಮೇದಕ್ ಜಿಲ್ಲೆಯ ವೆಲ್ಡುರ್ತಿ ಮಂಡಲ ಮಂಗಳಪರ್ತಿ ಗ್ರಾಮ ಉಪನಗರದಲ್ಲಿ ಸೋಮವಾರ ರಾತ್ರಿ ರಸ್ತೆ ಬದಿಯಲ್ಲಿ ಕಾರು ಉರಿಯುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಸ್ಥಳೀಯ ಸರಪಂಚ್​ ರಾಮಕೃಷ್ಣ ರಾವ್ ಅವರಿಗೆ ಮಾಹಿತಿ ನೀಡಿದರು. ಆದರೆ ಆ ಸಂದರ್ಭದಲ್ಲಿ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ.

ಬೆಳಗ್ಗೆ ಮತ್ತೆ ಕಾರನ್ನು ಪರಿಶೀಲಿಸಿದ ಗ್ರಾಮಸ್ಥರಿಗೆ ಅದರಲ್ಲಿ ಮೃತದೇಹವಿರುವುದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ. ಪ್ರಕರಣದ ಮಾಹಿತಿ ಅರಿತ ಪೊಲೀಸರು ಸ್ಥಳಕ್ಕೆ ಆಗಮಿಸಿ ಕಾರಿನ ನೋಂದಣಿ ಸಂಖ್ಯೆಯ ಆಧಾರದಲ್ಲಿ ಮೇದಕ್ ಪಟ್ಟಣದ ಶ್ರೀನಿವಾಸ್ ದಿಗಾ ಅವರು ಎಂದು ಗುರುತಿಸಿದ್ದಾರೆ. ಶ್ರೀನಿವಾಸ್​ ಅವರು ಇಲ್ಲಿನ ಸ್ಥಳೀಯ ಬಿಜೆಪಿ ಮುಖಂಡರಾಗಿದ್ದಾರೆ. ಈ ಕೃತ್ಯವನ್ನು ಯಾವುದೋ ದ್ವೇಷದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಎಸಗಿರಬಹುದು ಎಂದು ಸದ್ಯ ಅನುಮಾನ ವ್ಯಕ್ತವಾಗಿದೆ.

ಬಿಜೆಪಿ ಮುಖಂಡನ ದೇಹ ಪತ್ತೆ

ಪ್ರಕರಣದ ತನಿಖೆಗೆ ನಾಲ್ಕು ತಂಡಗಳ ರಚನೆ: ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ವೈಜ್ಞಾನಿಕ ಸಾಕ್ಷ್ಯಾಧಾರಗಳೊಂದಿಗೆ ಕೊಲೆಗಾರರನ್ನು ಗುರುತಿಸಲು ಪ್ರಯತ್ನಿಸುತ್ತಿದ್ದಾರೆ. ತೂಪ್ರಾನ್ ಡಿಎಸ್​ಪಿ ಕಿರಣ್ ಕುಮಾರ್ ಅವರ ಮೇಲ್ವಿಚಾರಣೆಯಲ್ಲಿ ತನಿಖೆ ಆರಂಭವಾಗಿದ್ದು, ನಾಲ್ಕು ತಂಡಗಳನ್ನು ರಚನೆ ಮಾಡಲಾಗಿದೆ. ಪೊಲೀಸರು ಮೇದಕ್ ಪಟ್ಟಣದಲ್ಲಿರುವ ಮೃತ ಶ್ರೀನಿವಾಸ್ ಅವರ ಮನೆಗೆ ತೆರಳಿ ಅವರ ಪತ್ನಿ ಹೈಂದಾವತಿಯಿಂದ ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ಈ ವೇಳೆ, "ಶ್ರೀನಿವಾಸ್​ ಮಧ್ಯಾಹ್ನ ಮನೆಯಿಂದ ತೆರಳಿದ್ದು, ಸಂಜೆ 5 ಗಂಟೆ ಸುಮಾರಿಗೆ ಫೋನ್​ ಮಾಡಿದ್ದಾರೆ. ಆದರೆ ಮೇದಕ್​ನ ಶಿವನೂರು ದಾಟಿದ ಬಳಿಕ ಫೋನ್​ ಸಿಗ್ನಲ್​ ಸಂಪರ್ಕ ಕಳೆದುಕೊಂಡಿದೆ" ಎಂಬ ಅಂಶ ಬೆಳಕಿಗೆ ಬಂದಿದೆ.

ತನಿಖೆ ಚುರುಕು:

ಸೋಮವಾರ ರಾತ್ರಿ 10:45ರ ಸುಮಾರಿಗೆ ನಡೆದ ಘಟನೆಗಳ ಬಗ್ಗೆ ತಿಳಿಯಲು ಪೊಲೀಸರು ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಪತ್ತೆ ಮಾಡುತ್ತಿದ್ದಾರೆ. ಜೊತೆಗೆ, ಪ್ರಮುಖ ಹೆದ್ದಾರಿಗಳಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ಪೊಲೀಸರು ಪರಿಶೀಲಿಸಿದ್ದಾರೆ. ಈ ವೇಳೆ ಶ್ರೀನಿವಾಸ್​ ಜೊತೆಗೆ ಮತ್ತೋರ್ವ ವ್ಯಕ್ತಿ ಇರುವುದು ಪತ್ತೆಯಾಗಿದೆ. ಸಂಜೆ ಐದು ಗಂಟೆಯಿಂದ ರಾತ್ರಿ ಹತ್ತು ಗಂಟೆಯ ನಡುವೆ ಈ ಕೊಲೆ ನಡೆದಿದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಬೇರೆಡೆ ಕೊಲೆ ಮಾಡಿ ಬಳಿಕ ಕಾರಿನ ಡಿಕ್ಕಿಯಲ್ಲಿ ತಂದು ಈ ಸ್ಥಳದಲ್ಲಿ ಬೆಂಕಿ ಹಚ್ಚಿ ಸುಟ್ಟು ಹಾಕಲು ಪ್ರಯತ್ನಿಸಿದ್ದಾರೆ ಎಂದು ಪೊಲೀಸರು ಹೇಳುತ್ತಿದ್ದಾರೆ.

ಕಾರಿನಲ್ಲಿದ್ದ ದೇಹ ಸಂಪೂರ್ಣ ಸುಟ್ಟು ಹೋಗಿದ್ದರಿಂದ ಡಿಎನ್ಎ ಪರೀಕ್ಷೆ ನಡೆಸುವುದು ಸ್ವಲ್ಪ ಕಷ್ಟಕರವಾಗಿತ್ತು. ಆದರೂ ಸಹ ಶ್ರಮ ವಹಿಸಿ ಮೇದಕ್ ಜಿಲ್ಲಾ ಆಸ್ಪತ್ರೆಯ ವೈದ್ಯರ ಮೇಲ್ವಿಚಾರಣೆಯಲ್ಲಿ ಶವಪರೀಕ್ಷೆ ನಡೆಸಲಾಗಿದೆ. ಸದ್ಯ ವಿಧಿವಿಜ್ಞಾನ ತಜ್ಞರು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ.

ಕಾರಿನಲ್ಲಿ ಶ್ರೀನಿವಾಸ್ ಜೊತೆ ಇದ್ದವರು ಯಾರು ಎಂಬ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದಕ್ಕಾಗಿ ಸಿಸಿಟಿವಿ ಫೂಟೇಜ್, ಸೆಲ್ ಫೋನ್ ಸಿಗ್ನಲ್ ಮತ್ತು ಕರೆ ಡೇಟಾವನ್ನು ಪರಿಶೀಲಿಸಲಾಗುತ್ತಿದೆ. ಶ್ರೀನಿವಾಸ್ ಅವರ ರಿಯಲ್ ಎಸ್ಟೇಟ್ ವ್ಯವಹಾರ ಅಥವಾ ಬೇರೆ ಯಾವುದಾದರೂ ದ್ವೇಷದಿಂದ ಈ ಕೊಲೆಗೆ ನಡೆದಿರಬಹುದೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯ ಕೆಲ ಶಂಕಿತರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ತೂಪ್ರಾನ್ ಡಿಎಸ್​ಪಿ ಕಿರಣ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.