ಇಂದೋರ್( ಮಧ್ಯಪ್ರದೇಶ): ಕಾಡು ನಾಶದಿಂದಗಾಗಿ ಕಾಡು ಪ್ರಾಣಿಗಳು ಈಗ ನಾಡಿನತ್ತ ದಾಂಗುಡಿ ಇಡುತ್ತಿವೆ. ಇದು ಕರ್ನಾಟಕವೊಂದರ ಸಮಸ್ಯೆಯೂ ಅಲ್ಲ, ದೇಶದ ಬಹುತೇಕ ರಾಜ್ಯಗಳಲ್ಲಿ ವನ್ಯಮೃಗಗಳು ನಾಡಿಗೆ ದಾಳಿ ಮಾಡಿ ಸಂಕಷ್ಟ ತರುತ್ತಿವೆ. ಇತ್ತೀಚೆಗೆ ಮಂಡ್ಯ- ಹಾಸನ ಸುತ್ತಮುತ್ತ ಚಿರತೆ ಹಾವಳಿ ಜಾಸ್ತಿಯಾಗಿದೆ.
ಯುವಕರು ಮರಿ ಚಿರತೆಗಳನ್ನು ಹಿಡಿದು ಅವುಗಳನ್ನ ಹೊಡೆದು ಹಾಕಿದ್ದಾರೆ. ಇನ್ನು ಮಧ್ಯಪ್ರದೇಶದಲ್ಲೂ ಇಂತಹದ್ದೆ ಘಟನೆಯೊಂದು ವರದಿಯಾಗಿದೆ. ಇಂದೋರ್ನ ಲಿಂಬೋಡಿ ಏರಿಯಾಕ್ಕೆ ನುಗ್ಗಿದ ಚಿರತೆ ಹಲವರನ್ನು ಗಾಯಗೊಳಿಸಿದೆ. ಚಿರತೆ ದಾಳಿಯಿಂದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಇದರಲ್ಲಿ ಇಬ್ಬರು ಮಕ್ಕಳು ಸಹ ಸೇರಿದ್ದಾರೆ.
ಓದಿ: ಮಮತಾ ಬ್ಯಾನರ್ಜಿ ಯೋಗಕ್ಷೇಮ ವಿಚಾರಿಸಲು ಬಿಸಿಸಿಐ ಅಧ್ಯಕ್ಷ ಗಂಗೂಲಿ ಹೋಗ್ತಾರಾ!?
ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಸಿಬ್ಬಂದಿ, ಚಿರತೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಹೀಗೆ ಸೆರೆ ಸಿಕ್ಕ ಲೆಪರ್ಡ್ ಅನ್ನು ಪ್ರಾಣಿ ಸಂಗ್ರಹಾಲಯಕ್ಕೆ ಬಿಡಲಾಗಿದೆ.