ETV Bharat / bharat

ಹಸಿದವರ ಹೊಟ್ಟೆ ತುಂಬಿಸಲು ‘ಖಾನಾ ಚೌಕಿ’ ಆರಂಭಿಸಿದ ಖಾಕಿ.. ಎರಡು ಹೊತ್ತು ಹಸಿದವರಿಗೆ ನಿತ್ಯ ಅನ್ನದಾನ

author img

By

Published : May 30, 2021, 5:56 AM IST

ಖಾನಾ ಚೌಕಿಯಲ್ಲಿ ಕೋವಿಡ್ ಮುಂಜಾಗ್ರತೆ ತೆಗೆದುಕೊಂಡು ಆಹಾರ ತಯಾರಾಗುತ್ತದೆ. ಸ್ವಚ್ಛತೆಯ ಜೊತೆಗೆ ದೈಹಿಕ ಅಂತರ ಹಾಗೂ ಸಿಬ್ಬಂದಿ ಕೈಗಳಿಗೆ ಗ್ಲೌಸ್​ ಬಳಕೆ ಮಾಡಿ ಅಡುಗೆ ಕಾರ್ಯ ಮಾಡುತ್ತಾರೆ.

ಹಸಿದವರ ಹೊಟ್ಟೆ ತುಂಬಿಸಲು ‘ಖಾನಾ ಚೌಕಿ’ ಆರಂಭಿಸಿದ ಖಾಕಿ

ರಾಯ್ಪುರ್ (ಛತ್ತೀಸ್​ಗಢ): ಕೊರೊನಾ ಅಲೆಯಲ್ಲಿ ಜನ ಸಾಮಾನ್ಯರ ಜೀವನ ಅಕ್ಷರಶಃ ನರಕದಂತಾಗಿದೆ. ಹೀಗಿರುವಾಗ ಲಾಕ್​ಡೌನ್​​​ನಿಂದ ಇನ್ನಷ್ಟು ಸಂಕಷ್ಟದ ಸ್ಥಿತಿಗೆ ತಲುಪಿದ್ದಾರೆ. ಇನ್ನೊಂದೆಡೆ ಕೊರೊನಾ ತಡೆಗೆ ಎಂದು ಪೊಲೀಸರು ಹಗಲಿರುಳು ದುಡಿಯುತ್ತಿದ್ದಾರೆ. ಅಲ್ಲದೇ ಜನರ ಹಸಿವು ನೀಗಿಸುವ ಕಾರ್ಯಕ್ಕೂ ಈಗ ಪೊಲೀಸರು ಮುಂದಾಗಿದ್ದು, ಇದಕ್ಕಾಗಿ ರಾಯ್ಪುರದ ಗೋಕುಲ್​​ ನಗರದಲ್ಲಿ ‘ಖಾನಾ ಚೌಕಿ’ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ಲಾಕ್​ಡೌನ್​ನಿಂದ ಆಹಾರ ಸಿಗದ ಜನತೆಗೆ ಪೊಲೀಸರು ಆಹಾರ ತಯಾರಿಸಿ ಹಂಚುವ ಕಾರ್ಯ ಮಾಡುತ್ತಿದ್ದಾರೆ. ಬೆಳಗ್ಗೆ ಹಾಗೂ ಸಂಜೆ ಎರಡು ಹೊತ್ತು ಬಡವರ ಹೊಟ್ಟೆ ತುಂಬಿಸುತ್ತಿದ್ದಾರೆ. ಈ ಕಾರ್ಯದಲ್ಲಿ 10ಕ್ಕೂ ಹೆಚ್ಚು ಪೊಲೀಸರು ನಿತ್ಯ ತೊಡಗಿಕೊಂಡಿದ್ದು, ಆಹಾರದ ಅಗತ್ಯ ಇರುವರ ಬಳಿ ತೆರಳಿ ವಿತರಣೆ ಮಾಡುತ್ತಿದ್ದಾರೆ.

ಮೇ ಮೊದಲ ವಾರದಲ್ಲಿ ಪೊಲೀಸ್ ಕಾನ್ಸ್​ಸ್ಟೇಬಲ್ ಮಹೇಶ್ ನೇತಮ್ ಹಾಗೂ ಇತರ ಸಿಬ್ಬಂದಿ ಸೇರಿ ಮೊದಲ ಖಾನಾ ಚೌಕಿ ಆರಂಭಿಸಿದರು.

ಮೊದ ಮೊದಲು ತನ್ನ ಸ್ವಂತ ಖರ್ಚಿನಲ್ಲಿ ಸಣ್ಣ ಪ್ರಮಾಣದಲ್ಲಿ ಈ ಕಾರ್ಯಕ್ಕೆ ಪೊಲೀಸ್ ಸಿಬ್ಬಂದಿ ಕೈ ಹಾಕಿದ್ದರು. ಬಳಿಕ ಇತರ ಸಿಬ್ಬಂದಿಯೂ ಕೈಜೋಡಿಸಲು ಆರಂಭಿಸಿದರು. ಠಾಣೆಯ ಉನ್ನತ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿ ಈ ಕಾರ್ಯಕ್ಕೆ ಬೆನ್ನೆಲುಬಾಗಿ ನಿಂತರು.

ಈ ಖಾನಾ ಚೌಕಿಯಲ್ಲಿ ಕೋವಿಡ್ ಮುಂಜಾಗೃತೆ ತೆಗೆದುಕೊಂಡು ಆಹಾರ ತಯಾರಾಗುತ್ತದೆ. ಸ್ವಚ್ಛತೆಯ ಜೊತೆಗೆ ದೈಹಿಕ ಅಂತರ ಹಾಗೂ ಸಿಬ್ಬಂದಿ ಕೈಗಳಿಗೆ ಗ್ಲೌಸ್​ ಬಳಕೆ ಮಾಡಿ ಅಡುಗೆ ಕಾರ್ಯ ಮಾಡುತ್ತಾರೆ.

ಬೆಳಗ್ಗೆ 8ರಿಂದ 11 ಗಂಟೆಯ ವರೆಗೆ ಆಹಾರ ನೀಡಿದರೆ, ಸಂಜೆ 4ರಿಂದ 7ಗಂಟೆಯ ವರೆಗೆ ಆಹಾರ ನೀಡುತ್ತಾರೆ. ಆಹಾರ ಸಿದ್ದಗೊಂಡ ಬಳಿಕ ನಗರದಲ್ಲಿ ಸುತ್ತಾಡಿ ವಿತರಣೆ ಕಾರ್ಯವನ್ನೂ ಇವರೇ ಮಾಡುತ್ತಾರೆ. ಒಟ್ಟಾರೆ ಲಾಕ್​​​ಡೌನ್​​ನಲ್ಲಿ ಲಾಠಿ ಹಿಡಿದು ನಿಲ್ಲುತ್ತಿದ್ದ ಪೊಲೀಸರು ಹಸಿದವರ ಪಾಲಿಗೆ ಅನ್ನದಾತರಾಗಿದ್ದು, ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.