ETV Bharat / bharat

ಭಾರತಕ್ಕೆ ಪಾಕ್​ನ 150 ಯಾತ್ರಿಕರ ಆಗಮನ: ರೂರ್ಕಿಯಲ್ಲಿ ಅದ್ಧೂರಿ ಸ್ವಾಗತ - DARGAH SABIR PAK IN PIRAN KALIYAR

ಪಿರಾನ್ ಕಲಿಯಾರ್ ಉರುಸ್​ನಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಆಗಮಿಸಿದ ಪಾಕ್​ನ ಯಾತ್ರಾರ್ಥಿಗಳಿಗೆ ಭರ್ಜರಿ ಸ್ವಾಗತ ನೀಡಲಾಯಿತು.

GROUP OF PAKISTANI PILGRIMS REACHED ROORKEE
ರೂರ್ಕಿ ತಲುಪಿದ 150 ಪಾಕಿಸ್ತಾನಿ ಯಾತ್ರಿಕರ ಬ್ಯಾಚ್
author img

By

Published : Oct 7, 2022, 9:57 AM IST

ರೂರ್ಕಿ (ಉತ್ತರಾಖಂಡ): ಪಿರಾನ್ ಕಲಿಯಾರ್ ಅವರ 754ನೇ ವಾರ್ಷಿಕ ಉರುಸ್​ನಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನಿ ಯಾತ್ರಾರ್ಥಿಗಳ ತಂಡ ಭಾರತಕ್ಕೆ ಆಗಮಿಸಿದೆ. ಲಾಹೋರಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಉತ್ತರಾಖಂಡದ ರೂರ್ಕಿ ರೈಲು ನಿಲ್ದಾಣಕ್ಕೆ ಬಂದಿಳಿದ ಪಾಕ್​ನ 150 ಯತ್ರಾರ್ಥಿಗಳಿಗೆ ಹೂವಿನ ಹಾರ ಹಾಕಿ ಸಂಭ್ರಮದಿಂದ ಸ್ವಾಗತಿಸಲಾಯಿತು. ಭಾರೀ ಭದ್ರತೆಯ ನಡುವೆ ಪಾಕಿಸ್ತಾನಿ ಯಾತ್ರಾರ್ಥಿಗಳನ್ನು ಬೇರೆ ಬೇರೆ ಬಸ್‌ಗಳಲ್ಲಿ ಕೂರಿಸಿ ಪಿರಾನ್ ಕಲಿಯಾರ್‌ಗೆ ಕಳುಹಿಸಲಾಯಿತು.

ರೂರ್ಕಿಗೆ ಬಂದ ಪಾಕಿಸ್ತಾನಿ ಯಾತ್ರಾರ್ಥಿಗಳು ಪಿರಾನ್ ಕಲಿಯಾರ್‌ನಲ್ಲಿರುವ ಸಬ್ರಿ ಅತಿಥಿ ಗೃಹದಲ್ಲಿ ತಂಗಿದ್ದಾರೆ. ಈ ಬಾರಿ 150 ಪಾಕಿಸ್ತಾನಿ ಯಾತ್ರಾರ್ಥಿಗಳು ಉರುಸ್​ನಲ್ಲಿ ಪಾಲ್ಗೊಳ್ಳಲು ಬಂದಿದ್ದಾರೆ. ಪಾಕಿಸ್ತಾನಿ ಯಾತ್ರಾರ್ಥಿಗಳು ಉರುಸ್​ನಲ್ಲಿ ಸುಮಾರು ಒಂದು ವಾರ ತಂಗಲಿದ್ದಾರೆ. ಒಂದು ವಾರದ ನಂತರ ಲಾಹೋರಿ ಎಕ್ಸ್‌ಪ್ರೆಸ್ ರೈಲಿನಲ್ಲಿಯೇ ಪಾಕಿಸ್ತಾನಕ್ಕೆ ತೆರಳಲಿದ್ದಾರೆ.

ಉರುಸ್​ ಸಂಘಟನಾ ಸಮಿತಿಯ ಸಂಚಾಲಕ ಅಫ್ಜಲ್ ಮಂಗಳೂರು ಮಾತನಾಡಿ, ಈ ಬಾರಿ ಅಕ್ಟೋಬರ್ 10 ರಂದು ಪಿರಾನ್ ಕಲಿಯಾರ್‌ನಲ್ಲಿ ನಡೆದ ಕಾರ್ಯಕ್ರಮಕ್ಕೆ ಪಾಕ್​​ನ ಧರ್ಮ ಗುರು ಮತ್ತು ಯಾತ್ರಾರ್ಥಿಗಳನ್ನು ಆಹ್ವಾನಿಸಲಾಗಿದೆ. ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು166 ಪ್ರಯಾಣಿಕರಿಗೆ ಪಿರಾನ್ ಕಲಿಯಾರ್ ಉರುಸ್​ಗೆ ಪಾಲ್ಗೊಳ್ಳಲು ವೀಸಾ ನೀಡಿದೆ. ಈ ಪೈಕಿ 150 ಯಾತ್ರಿಕರು ಭಾರತವನ್ನು ತಲುಪಿದ್ದಾರೆ. ಐದು ವರ್ಷಗಳ ನಂತರ ಈ ಬಾರಿಯ ಉರುಸ್ ನಡೆಯುತ್ತಿದೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ: 75 ವರ್ಷಗಳ ನಂತರ ಪಾಕಿಸ್ತಾನಿ ಸಹೋದರನ ಭೇಟಿಯಾದ ಭಾರತೀಯ

ಪಿರಾನ್ ಕಲಿಯಾರ್ ದರ್ಗಾ ಭಾರತದ ಉತ್ತರಾಖಂಡ ರಾಜ್ಯದ ರೂರ್ಕಿಯಲ್ಲಿದೆ. ಉರುಸ್​ಅನ್ನು ಪಿರಾನ್ ಕಲಿಯಾರ್​ನಲ್ಲಿ ಆಯೋಜಿಸಲಾಗಿದೆ. ಹರಿದ್ವಾರ ಜಿಲ್ಲಾ ಕೇಂದ್ರದಿಂದ 25 ಕಿ.ಮೀ ದೂರದಲ್ಲಿರುವ ರೂರ್ಕಿ ಬಳಿಯ ಗಂಗಾನದಿಯ ಮೇಲ್ಭಾಗದ ಕಾಲುವೆಯ ದಂಡೆಯ ಮೇಲಿರುವ ಪಿರಾನ್ ಕಲಿಯಾರ್ ಗ್ರಾಮದಲ್ಲಿ ಈ ಜಾತ್ರೆ ನಡೆಯುತ್ತದೆ. ಈ ಸ್ಥಳದಲ್ಲಿ ಹಜರತ್ ಮಖ್ದೂಮ್ ಅಲ್ಲಾವುದ್ದೀನ್ ಅಹ್ಮದ್ ದರ್ಗಾ ಇದೆ. ಈ ಸ್ಥಳವು ಹಿಂದೂ ಮತ್ತು ಮುಸ್ಲಿಮರ ನಡುವಿನ ಐಕ್ಯತೆಗೆ ಸಾಕ್ಷಿಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.