ETV Bharat / bharat

ಹೈದರಾಬಾದ್​​ನ​​ ಅಪಾರ್ಟ್​ಮೆಂಟ್​ನಲ್ಲಿ ಬೆಂಕಿ: ಬಾಗಿಲು ಒಡೆದು ಐವರನ್ನು ರಕ್ಷಿಸಿದ ಕಾನ್ಸ್​ಟೇಬಲ್ - ಕಾನ್ಸ್​ಟೇಬಲ್

ಹೈದರಾಬಾದ್​ನ ಅಪಾರ್ಟ್​ಮೆಂಟ್​ವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಮಹಡಿಯೊಂದರಲ್ಲಿ ಸಿಲುಕಿದ್ದ ಕುಟುಂಬವೊಂದನ್ನು ಟ್ರಾಫಿಕ್​ ಕಾನ್ಸ್​ಟೇಬಲ್​ ರಕ್ಷಿಸಿದ್ದಾರೆ.

a-fire-broke-out-in-a-hyderabad-apartment-
ಹೈದರಾಬಾದ್​​ ಅಪಾರ್ಟ್​ಮೆಂಟ್​​ವೊಂದರಲ್ಲಿ ಬೆಂಕಿ
author img

By ETV Bharat Karnataka Team

Published : Dec 22, 2023, 11:25 AM IST

Updated : Dec 22, 2023, 12:00 PM IST

ಮನೆ ಬಾಗಿಲು ಒಡೆದು ಐವರನ್ನು ಬೆಂಕಿಯಿಂದ ರಕ್ಷಿಸಿದ ಕಾನ್ಸ್​ಟೇಬಲ್

ಹೈದರಾಬಾದ್ (ತೆಲಂಗಾಣ) : ನಗರದ ಪಂಜಗುಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಅಪಾರ್ಟ್‌ಮೆಂಟ್‌ನಲ್ಲಿ ಇಂದು ಬೆಂಕಿ ಕಾಣಿಸಿಕೊಂಡಿದ್ದು ಮಹಡಿವೊಂದರಲ್ಲಿ ಸಿಲುಕಿದ್ದ ಕುಟುಂಬವೊಂದನ್ನು ಟ್ರಾಫಿಕ್​ ಕಾನ್ಸ್​ಟೇಬಲ್​ ರಕ್ಷಿಸಿದ್ದಾರೆ.

ಶಾರ್ಟ್ ಸರ್ಕ್ಯೂಟ್‌ನಿಂದ ಅಪಾರ್ಟ್‌ಮೆಂಟ್‌ನ ಐದು ಮತ್ತು ಆರನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿಯ ಜ್ವಾಲೆ ದೊಡ್ಡ ಮಟ್ಟದಲ್ಲಿ ಹರಡಿದ್ದು ಕಟ್ಟಡವಲ್ಲದೇ ಪ್ರದೇಶದ ತುಂಬೆಲ್ಲಾ ದಟ್ಟವಾದ ಹೊಗೆ ಆವರಿಸಿತ್ತು. ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಗಮಿಸಿದ ಅವರು ತಕ್ಷಣವೇ ಕಟ್ಟಡದಲ್ಲಿದ್ದ ಎಲ್ಲರನ್ನೂ ಹೊರತಂದರು. ಬೆಂಕಿ ಹಬ್ಬುತ್ತಿದಂತೆ 6 ನೇ ಮಹಡಿಯಲ್ಲಿ ಕುಟುಂಬವೊಂದು ಸಿಲುಕಿತ್ತು.

ಇದನ್ನು ಕಂಡ ಟ್ರಾಫಿಕ್​ ಕಾನ್ಸ್​ಟೇಬಲ್​ ಶ್ರವಣ್​ ಕುಮಾರ್​ ಆ ಮನೆಯ ಬಾಗಿಲು ಒಡೆದು ಕುಟುಂಬದ 5 ಜನರನ್ನೂ ರಕ್ಷಿಸಿದ್ದಾರೆ. ತನ್ನ ಜೀವದ ಹಂಗು ತೊರೆದು ಕುಟುಂಬವನ್ನು ರಕ್ಷಿಸಿದ ಕಾನ್ಸ್​ಟೇಬಲ್ ಶ್ರವಣ್ ಅವರನ್ನು ಸ್ಥಳೀಯರು ಅಭಿನಂದಿಸುತ್ತಿದ್ದಾರೆ. ಇನ್ನೊಂದೆಡೆ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುತ್ತಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಘಟನೆಗೆ ನಿಖರ ಕಾರಣ ಪತ್ತೆ ಹಚ್ಚಲು ತನಿಖೆ ಕೈಗೊಂಡಿದ್ದಾರೆ.

ಇನ್ನು ಘಟನೆ ಕುರಿತು ಹೈದರಾಬಾದ್ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಶ್ರೀನಿವಾಸ್ ರೆಡ್ಡಿ, ಬೆಂಕಿಯಲ್ಲಿ ಯಾವುದೇ ಸಾವು - ನೋವುಗಳು ಅಥವಾ ಗಾಯಗಳ ಬಗ್ಗೆ ತಕ್ಷಣದ ವರದಿಗಳಿಲ್ಲ. ಅಗ್ನಿಶಾಮಕ ದಳದವರು ಸ್ಥಳದಲ್ಲೇ ಇದ್ದು ಬೆಂಕಿ ನಂದಿಸುವಲ್ಲಿ ಶ್ರಮಿಸುತ್ತಿದ್ದಾರೆ. 6ನೇ ಮಹಡಿಯಲ್ಲಿದ್ದ ಕುಟುಂಬವನ್ನು ರಕ್ಷಿಸಲಾಗಿದೆ. ಸದ್ಯ ಬೆಂಕಿ ನಿಯಂತ್ರಣದಲ್ಲಿದೆ ಎಂದು ಹೇಳಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.

ಘಟನೆಯ ವಿಡಿಯೋ ಲಭ್ಯವಾಗಿದ್ದು ಬೆಂಕಿಯ ತೀವ್ರತೆಯನ್ನು ಗಮನಿಸಬಹುದು. ಒಟ್ಟಾರೆ ಸಮಯ ಪ್ರಜ್ಞೆಯಿಂದ ಐವರ ಪ್ರಾಣ ಉಳಿದಿದೆ.

ಪ್ರತ್ಯೇಕ ಪ್ರಕರಣ: ಗ್ಯಾಸ್​ ಸಿಲಿಂಡರ್​ ಸ್ಫೋಟಗೊಂಡು 15 ಗುಡಿಸಲು ಭಸ್ಮ: ಆಂಧ್ರಪ್ರದೇಶದ ಪೂರ್ವ ಗೋದಾವರಿಯಲ್ಲಿರುವ ನಲ್ಲಜೆರ್ಲ ಎಂಬಲ್ಲಿ ಗುರುವಾರ ರಾತ್ರಿ ಸಂಭವಿಸಿದೆ. ಒಂದು ಮನೆಯಲ್ಲಿ ಸಿಡಿದ ಗ್ಯಾಸ್​ ಸಿಲಿಂಡರ್​ನಿಂದ ಬೆಂಕಿ ಹೊತ್ತಿಕೊಂಡಿದ್ದು, ಬೆಂಕಿಯ ಜ್ವಾಲೆ ಸುತ್ತಮುತ್ತಲಿನ ಪ್ರದೇಶಗಳನ್ನು ಆವರಿಸಿ 15 ಗುಡಿಸಲುಗಳು ಸುಟ್ಟು ಕರಕಲಾಗಿವೆ. ಗುಡಿಸಲುಗಳಿಗೆ ಬೆಂಕಿ ಹೊತ್ತಿಕೊಂಡ ಬಳಿಕ ಮತ್ತೂ 3 ಗ್ಯಾಸ್ ಸಿಲಿಂಡರ್‌ಗಳು ಸ್ಫೋಟಗೊಂಡಿವೆ. ಹೀಗೆ ಒಟ್ಟು 15 ಗುಡಿಸಲು ಬೆಂಕಿಗೆ ಆಹುತಿಯಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ.

ಇದನ್ನೂ ಓದಿ: ಗ್ಯಾಸ್​ ಸಿಲಿಂಡರ್​ ಸ್ಫೋಟ.. ಆಂಧ್ರದಲ್ಲಿ 15 ಗುಡಿಸಲುಗಳು ಭಸ್ಮ; ಹೈದರಾಬಾದ್​​​​​​ನಲ್ಲಿ ಕುಟುಂಬವೊಂದನ್ನು ರಕ್ಷಿಸಿದ ಕಾನ್ಸ್​​ಟೇಬಲ್​

Last Updated : Dec 22, 2023, 12:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.