ಅಹ್ಮದ್ನಗರ(ಮಹಾರಾಷ್ಟ್ರ): ಮಹಾರಾಷ್ಟ್ರದ ಅಹ್ಮದ್ ನಗರ ಜಿಲ್ಲೆಯಲ್ಲಿರುವ ಪ್ರಸಿದ್ಧ ಶಿರಡಿ ಸಾಯಿಬಾಬಾಗೆ ದೆಹಲಿ ಮೂಲದ ಭಕ್ತರೊಬ್ಬರು ಚಿನ್ನದ ಕೊಳಲು ಅರ್ಪಿಸಿ ತಮ್ಮ ಭಕ್ತಿಯನ್ನು ಮರೆದಿದ್ದಾರೆ. ಅಂದಾಜು 100 ಗ್ರಾಂ ತೂಕದ ಈ ಬಂಗಾರದ ಕೊಳಲು 4.85 ಲಕ್ಷ ರೂ. ಬೆಲೆ ಬಾಳುತ್ತದೆ.
ದೆಹಲಿಯ ರಿಷಬ್ ಲೋಹಿಯಾ ಎಂಬುವವರೇ ಶಿರಡಿ ಸಾಯಿಬಾಬಾಗೆ ಚಿನ್ನದ ಕೊಳಲು ಅರ್ಪಿಸಿರುವ ಭಕ್ತರು. ತಮ್ಮ ಕುಟುಂಬದ ಸಮೇತ ಶಿರಡಿಗೆ ಬಂದು ಇದನ್ನು ದೇವರಿಗೆ ಸಮರ್ಪಿಸಿದ್ದಾರೆ. ಸಾಯಿ ಬಾಬಾ ನಮಗೆ ಶ್ರೀಕೃಷ್ಣನ ಅವತಾರದಂತೆ ಕಾಣಿಸುತ್ತಾರೆ. ಶ್ರೀಕೃಷ್ಣನಿಗೆ ಕೊಳಲು ಪ್ರಿಯವಾದ ವಸ್ತು. ಹೀಗಾಗಿಯೇ ಸಾಯಿಬಾಬಾಗೆ ಚಿನ್ನದ ಕೊಳಲು ಸಮರ್ಪಿಸಿದ್ದೇವೆ ಎಂದು ಭಕ್ತ ರಿಷಬ್ ತಿಳಿಸಿದ್ದಾರೆ.
ಕೃಷ್ಣ ಜನ್ಮಾಷ್ಟಮಿಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ಸಾಯಿ ಬಾಬಾಗೆ ಈ ಚಿನ್ನದ ಕೊಳಲನ್ನು ಅರ್ಪಿಸಲಾಗಿದೆ ಎಂಬುದು ಗಮರ್ನಾರ್ಹ. ಕಳೆದ ತಿಂಗಳಷ್ಟೇ ಹೈದರಾಬಾದ್ನ ಭಕ್ತರೊಬ್ಬರು ಶಿರಡಿಯ ಸಾಯಿಬಾಬಾಗೆ ಚಿನ್ನದ ಕಿರೀಟವನ್ನು ಸಮರ್ಪಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಇದನ್ನೂ ಓದಿ: ದೇವರಿಗೆ ಕೈ ಮುಗಿದು 3 ಹಣದ ಹುಂಡಿ, 2 ಘಂಟೆ ಕದ್ದೊಯ್ದ ಕಳ್ಳ: ವಿಡಿಯೋ