ಮುಂಬೈ (ಮಹಾರಾಷ್ಟ್ರ): ಇದು ಮುಂಬೈನ ಗ್ರೇಸ್ ಕುಟುಂಬ. ಈ ಕುಟುಂಬದಲ್ಲಿ ಓರ್ವ ಪುಟ್ಟ ಸದಸ್ಯನಿದ್ದಾನೆ. ಈತ ಅತಿಥಿಯಾಗಿ ಬಂದು ಈಗ ಸದಸ್ಯನಾದವನು. ಆತನ ಹೆಸರು ಕುಕೂ.. ಈತ ಈ ಮನೆಗೆ ಬಂದ ಹಿಂದಿನ ಕತೆ ಬಲುರೋಚಕವಾಗಿದೆ.
ಅಂದು ಗಾಯಗೊಂಡು ಬಾಲ್ಕನಿಗೆ ಬಂದಿದ್ದ ಅದೇ ಕಾಗೆ ಈಗ ಗ್ರೇಸ್ ಕುಟುಂಬದ ನೆಚ್ಚಿನ ಪುಟ್ಟ ಸದಸ್ಯನಾಗಿದ್ದಾನೆ. ಕಾಗೆ ಮತ್ತು ಈ ಕುಟುಂಬದ ನಡುವಿನ ಬಾಂಧವ್ಯ ಎಲ್ಲರ ಗಮನ ಸೆಳೆಯುತ್ತಿದೆ. ಗ್ರೇಸ್ ಕುಟುಂಬ ಸದಸ್ಯರು ಸಹ ಕಾಗೆಯನ್ನು ತುಂಬಾ ಹಚ್ಚಿಕೊಂಡಿದ್ದಾರೆ. ಈ ಕಾಗೆಗೆ ಕುಕೂ ಎಂದು ನಾಮಕರಣ ಸಹ ಮಾಡಿದ್ದಾರೆ. ಆತನನ್ನು ತಮ್ಮ ಮನೆಯವನಂತೆಯೇ ನೋಡಿಕೊಳ್ಳಿತ್ತಿದ್ದಾರೆ.
ಕುಕೂ ಈ ಕುಟುಂಬದ ಚಿಕ್ಕ ಮಗುವಿನಂತಾಗಿದ್ದಾನೆ. ಎಲ್ಲಾ ಗ್ರೇಸ್ ಕುಟುಂಬ ಸದಸ್ಯರು ಕುಕೂಗೆ ವಿಶೇಷ ಗಮನ ನೀಡುತ್ತಾರೆ. ಕುಕೂ ಆಗಮನದಿಂದ ಗ್ರೇಸ್ ಕುಟುಂಬದ ವಿಶೇಷ ಸದಸ್ಯನಾಗಿದ್ದಾನೆ. ಗ್ರೇಸ್ ಕುಟುಂಬವು ಕಾಗೆಗೆ ತೋರಿಸಿದ ಬಾಂಧವ್ಯ ಮತ್ತು ಪ್ರೀತಿ ಸಮಾಜಕ್ಕೆ ಉತ್ತಮ ಮಾನವೀಯ ಉದಾಹರಣೆಯಾಗಿದೆ.