ನಾಂದೇಡ್(ಮಹಾರಾಷ್ಟ್ರ): ಕಳೆದ ಕೆಲ ದಿನಗಳಿಂದ ಮಹಾರಾಷ್ಟ್ರದ ವಿವಿಧ ಪ್ರದೇಶಗಳಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ಇದರ ಮಧ್ಯೆ ತಗ್ಗು ಪ್ರದೇಶದ ಮನೆಗಳಿಗೆ ಮಳೆ ನೀರು ನುಗ್ಗಿರುವ ಪರಿಣಾಮ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮತ್ತೊಂದೆಡೆ ನಾಂದೇಡ್ದಲ್ಲಿ ಮಳೆಯ ಪ್ರವಾಹಕ್ಕೆ ಕಾರ್ವೊಂದು ಕೊಚ್ಚಿಕೊಂಡು ಹೋಗಿದೆ. ಮುಖೇದ್ ಎಂಬ ಪ್ರದೇಶದಲ್ಲಿ ಉಂಟಾಗಿರುವ ಪ್ರವಾಹದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಕಾರಿನಲ್ಲಿ ತಂದೆ-ಮಗ ಕೂಡ ಕೊಚ್ಚಿಕೊಂಡು ಹೋಗಿದ್ದು, ಈಗಾಗಲೇ ಅವರಿಬ್ಬರಿಗೋಸ್ಕರ ಶೋಧಕಾರ್ಯ ಮುಂದುವರೆದಿದೆ.
ಇದನ್ನೂ ಓದಿರಿ: ಹರಿಯಾಣದಲ್ಲಿ ರೈತರ ಮಹಾ ಪಂಚಾಯತ್ : ಅಧಿಕಾರಿಗಳ ನಡೆ ವಿರೋಧಿಸಿ, ಅನ್ನದಾತರ ಪಾದಯಾತ್ರೆ
ಕಾರಿನಲ್ಲಿ ಭಗವಾನ್ ರಾಥೋಡ್ ಹಾಗೂ ಸಂದೀಪ್ ರಾಥೋಡ್ ಇದ್ದರು ಎನ್ನಲಾಗಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.