ಪತ್ತನಂತಿಟ್ಟ (ಕೇರಳ): ಶಬರಿಮಲೆ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ವೊಂದು ಪಲ್ಟಿಯಾಗಿ ಕಂದಕಕ್ಕೆ ಬಿದ್ದಿರುವ ಘಟನೆ ಮಂಗಳವಾರ ಮಧ್ಯಾಹ್ನ ಕೇರಳದ ನಿಲಕ್ಕಲ್ ಇಲವುಂಕಲ್ ಬಳಿ ಸಂಭವಿಸಿದೆ. ಬಸ್ಸಿನಲ್ಲಿದ್ದ 62 ಪ್ರಯಾಣಿಕರಿದ್ದು ಈ ಪೈಕಿ ಏಳು ಮಕ್ಕಳು ಸಹ ಸಂಚರಿಸುತ್ತಿದ್ದರು. ಈ ದುರ್ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಬಸ್ ಚಾಲಕನ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪತ್ತನಂತಿಟ್ಟ ಜಿಲ್ಲಾಡಳಿತವು ತಕ್ಷಣ ಕಾರ್ಯಾಚರಣೆ ನಡೆಸಿದ್ದು, ಗಾಯಾಳುಗಳನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾಗಿದೆ. ತೀವ್ರ ಗಾಯಗೊಂಡಿದ್ದ ಗಾಯಾಳುಗಳನ್ನು ಸಮೀಪದ ಕೊಟ್ಟಾಯಂ ವೈದ್ಯಕೀಯ ಕಾಲೇಜು ಮತ್ತು ಜಿಲ್ಲಾ ತಾಲೂಕು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಬಸ್ನೊಳಗಿದ್ದ ತಮಿಳುನಾಡಿನ ಯಾತ್ರಾರ್ಥಿಗಳು ಶಬರಿಮಲೆ ದರ್ಶನ ಪಡೆದು ವಾಪಸಾಗುತ್ತಿದ್ದರು ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆಟೊ ವ್ಯಾಗನಾರ್ ನಡುವೆ ಡಿಕ್ಕಿ:ಐವರು ಸಾವು ಹರ್ದೋಯಿ(ಉತ್ತರಪ್ರದೇಶ): ಹರ್ದೋಯ್-ಲಖನೌ ಹೆದ್ದಾರಿಯಲ್ಲಿ ಮಂಗಳವಾರ ವ್ಯಾಗನಾರ್ ಅಟೋ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಸ್ಥಳದಲ್ಲೇ ಐವರು ಮೃತಪಟ್ಟಿರುವ ಘಟನೆ ನಡೆದಿದೆ. ಸದ್ಯಕ್ಕೆ ಮೃತರು ಹಾಗೂ ಗಾಯಗೊಂಡವರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಹೆದ್ದಾರಿಯಲ್ಲಿ ಸಂಭವಿಸಿದ್ದ ಅಪಘಾತದ ವೇಳೆ ಸ್ಥಳದಲ್ಲಿ ನೂರಾರು ಜನ ಜಮಾಯಿಸಿದ್ದು, ಟ್ರಾಫಿಕ್ ಜಾಮ್ ಉಂಟಾಗಿತು. ಅಪಘಾತದ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಕೂಡಲೇ ರಕ್ಷಣಾ ಕಾರ್ಯ ಆರಂಭಿಸಿ, ಮೃತ ದೇಹಗಳನ್ನು ಹೊರತೆಗೆದು ಪರಿಶೀಲಿಸಿದ್ದು ಹಾಗೂ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.
ಹರ್ದೋಯಿ ಜಿಲ್ಲೆಯ ಕೊತ್ವಾಲಿ ದೇಹತ್‌ನ ನಯಾಗಾಂವ್ ಬಳಿ ವ್ಯಾಗನ್ಆರ್ ಕಾರು ಆಟೋ ನಡುವೆ ನಡೆದ ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವಿಗೀಡಾಗಿದ್ದರೆ, ಇನ್ನಿಬ್ಬರು ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಟೋ ಸವಾರರು ಹರ್ದೋಯಿಯಿಂದ ಮನೆಗೆ ಹೋಗುತ್ತಿದ್ದರು. ಕಾರು ಪ್ರಯಾಣಿಕರು ಲಕ್ನೋದಿಂದ ಹರ್ದೋಯ್ ಕಡೆಗೆ ಬರುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಎಸ್ಪಿ ರಾಜೇಶ್ ದ್ವಿವೇದಿ ಸ್ಥಳ ಪರಿಶೀಲನೆ ನಡೆಸಿ ಐವರ ಸಾವನ್ನು ಖಚಿತಪಡಿಸಿದ್ದಾರೆ. ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ, ಇನ್ನಿಬ್ಬರು ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಗಾಯಗೊಂಡ ಐವರನ್ನು ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ನಕ್ಸಲರಿಂದ ಐಇಡಿ ಸ್ಫೋಟ ಇಬ್ಬರು ಯೋಧರಿಗೆ ಗಾಯ- ಕಂಕೇರ್ (ಛತ್ತೀಸ್‌ಗಢ): ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಸ್ತಾರ್ ಪ್ರವಾಸದ ನಂತರ ನಕ್ಸಲರು ನಿರಂತರವಾಗಿ ಸೈನಿಕರ ಮೇಲೆ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ಜತೆಗೆ ತೀವ್ರ ದಾಳಿ ನಡೆಸುತ್ತಿದ್ದಾರೆ.
ಕಂಕೇರ್‌ನಲ್ಲಿ ಮತ್ತೊಂದು ಐಇಡಿ ಸ್ಫೋಟ ಸಂಭವಿಸಿದ್ದು, ಈ ಘಟನೆಯಲ್ಲಿ ಇಬ್ಬರು ಬಿಎಸ್‌ಎಫ್ (ಗಡಿ ಭದ್ರತಾ ಪಡೆ) ಯೋಧರು ಗಾಯಗೊಂಡಿದ್ದಾರೆ. ಅವರನ್ನು ಹೆಲಿಕಾಪ್ಟರ್ ಮೂಲಕ ರಾಯ್‌ಪುರ ಆಸ್ಪತ್ರೆಗೆ ಕರೆತರಲಾಯಿತು.
ಕಂಕೇರ್ ಎಸ್ಪಿ ಶಲಭ್ ಕುಮಾರ್ ಸಿನ್ಹಾ ಅವರು, ಇಂದು ನಡೆದ ಐಇಡಿ ಸ್ಫೋಟವನ್ನು ಖಚಿತಪಡಿಸಿದ್ದಾರೆ. ಪ್ರದೇಶದ ಗಸ್ತುಗಾಗಿ ಬಿಎಸ್ಎಫ್ ಯೋಧರು ತೆರಳಿದ್ದರು ಎಂದು ಅವರು ತಿಳಿಸಿದರು.
ದಾಳಿ ನಡೆದಿದ್ದು ಹೇಗೆ?: ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಸ್ತಾರ್‌ನಲ್ಲಿ ಪ್ರವಾಸ ಕೈಗೊಂಡ ನಂತರ, ನಕ್ಸಲರು ನಿರಂತರವಾಗಿ ದಾಳಿಗಳನ್ನು ನಡೆಸುತ್ತಿದ್ದಾರೆ. ಮಂಗಳವಾರವೂ ಇಲ್ಲಿನ ಕಂಕೇರ್‌ನಲ್ಲಿ ಮತ್ತೊಂದು ಐಇಡಿ ಸ್ಫೋಟ ಸಂಭವಿಸಿದ್ದು, ಇಬ್ಬರು ಬಿಎಸ್‌ಎಫ್ (ಗಡಿ ಭದ್ರತಾ ಪಡೆ) ಯೋಧರು ಗಾಯಗೊಂಡಿದ್ದಾರೆ. ಅವರನ್ನು ಹೆಲಿಕಾಪ್ಟರ್ ಮೂಲಕ ರಾಯ್‌ಪುರ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಇದನ್ನು ಓದಿ:ಗೇಟ್‌ವೇ ಆಫ್ ಇಂಡಿಯಾದಿಂದ ಎಲಿಫೆಂಟಾ..: ಸಮುದ್ರದ ಅಲೆಗಳ ವಿರುದ್ಧ 16 ಕಿಮೀ ಈಜಿದ IPS ಅಧಿಕಾರಿ