ETV Bharat / bharat

ಜಾತಿ - ಧರ್ಮ ಇಲ್ಲದ ಪ್ರಮಾಣಪತ್ರ ಕೋರಿ ಗುಜರಾತ್​ ಹೈಕೋರ್ಟ್​ಗೆ ಬ್ರಾಹ್ಮಣ ಯುವತಿ ಅರ್ಜಿ

ಗುಜರಾತ್ ಹೈಕೋರ್ಟ್‌ಗೆ ಅಪರೂಪದ ಅರ್ಜಿ ಬಂದಿದ್ದು, ಜಾತಿ ಮತ್ತು ಧರ್ಮ ಇಲ್ಲದ ಪ್ರಮಾಣ ಪತ್ರವನ್ನು ನೀಡುವಂತೆ ಸರ್ಕಾರಕ್ಕ ಆದೇಶಿಸುವಂತೆ ಅರ್ಜಿಯಲ್ಲಿ ಕೋರಿಕೊಳ್ಳಲಾಗಿದೆ..

Gujarat High Court
ಜಾತಿ - ಧರ್ಮ ಇಲ್ಲದ ಪ್ರಮಾಣಪ್ರತ ಕೋರಿ ಗುಜರಾತ್​ ಹೈಕೋರ್ಟ್​ಗೆ ಬ್ರಾಹ್ಮಣ ಯುವತಿ ಅರ್ಜಿ
author img

By

Published : Apr 2, 2022, 5:08 PM IST

Updated : Apr 2, 2022, 6:08 PM IST

ಅಹಮದಾಬಾದ್​(ಗುಜರಾತ್​) : ಗುಜರಾತ್ ಹೈಕೋರ್ಟ್‌ಗೆ ಅಪರೂಪದ ಮತ್ತು ವಿಶೇಷ ರೀತಿ ಅರ್ಜಿಯೊಂದು ಬಂದಿದೆ. ಸೂರತ್ ನಗರದ ಬ್ರಾಹ್ಮಣ ಯುವತಿಯೊಬ್ಬಳು ಗುಜರಾತ್ ಹೈಕೋರ್ಟ್‌ನ ಮೊರೆ ಹೋಗಿದ್ದು, ನನಗೆ ಯಾವುದೇ ಧರ್ಮ ಮತ್ತು ಜಾತಿ ಇಲ್ಲದ ಪ್ರಮಾಣಪತ್ರ ನೀಡಬೇಕು ಎಂದು ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಲಾಗಿದೆ.

ಸೂರತ್‌ನ ಕಾಜಲ್ ಮಂಜುಳಾ ಎಂಬ ಹುಡುಗಿ ಜಾತಿ ಪ್ರಮಾಣ ಪತ್ರದಿಂದ ಜಾತಿ ಮತ್ತು ಧರ್ಮವನ್ನು ತೆಗೆದು ಹಾಕಲು ಅರ್ಜಿ ಸಲ್ಲಿಸಿದ್ದಾಳೆ. ಬಾಲಕಿಯೊಬ್ಬಳು ಅರ್ಜಿ ಸಲ್ಲಿಸಿದ್ದು, ಪ್ರಮುಖವಾಗಿ ಪರಿಗಣಿಸಲಾದ ಜಾತಿ ಪ್ರಮಾಣಪತ್ರದಲ್ಲಿ ತನ್ನ ಜಾತಿಯನ್ನು ನಮೂದಿಸಬಾರದು ಎಂದು ಒತ್ತಾಯಿಸಿದ್ದಾರೆ.

ಬಹುಶಃ ರಾಜ್ಯದಲ್ಲಿ ಮೊದಲ ಬಾರಿಗೆ ಯುವತಿಯೊಬ್ಬಳು ಧರ್ಮ ಅಥವಾ ಜಾತಿಯ ಉಲ್ಲೇಖಕ್ಕೆ ಸಂಬಂಧಿಸಿದಂತೆ ಗುಜರಾತ್ ಹೈಕೋರ್ಟ್‌ನಲ್ಲಿ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದಾಳೆ. ಮದ್ರಾಸ್ ಹೈಕೋರ್ಟಿನ ಆದೇಶದ ಆಧಾರದ ಮೇಲೆ ಅರ್ಜಿದಾರರು ಈ ಬೇಡಿಕೆಯನ್ನು ಸಲ್ಲಿಸಿದ್ದಾರೆ. ಮದ್ರಾಸ್ ಹೈಕೋರ್ಟ್ ಸ್ನೇಹಾ ಪ್ರತಿಬರಾಜ್ ಎಂಬ ಹುಡುಗಿಗೆ ಜಾತಿ ಮತ್ತು ಧರ್ಮವಿಲ್ಲದೆ ಪ್ರಮಾಣಪತ್ರವನ್ನು ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು.

ವಕೀಲ ಧರ್ಮೇಶ್ ಗುರ್ಜರ್ ಮಾತನಾಡಿ, ಜಾತಿ ವ್ಯವಸ್ಥೆಯ ತಾರತಮ್ಯದಿಂದ ಅರ್ಜಿದಾರರು ತಮ್ಮ ಜೀವನದಲ್ಲಿ ಹಲವಾರು ತೊಂದರೆಗಳನ್ನು ಎದುರಿಸಿದ್ದಾರೆ. ಪ್ರಸ್ತುತ ಅರ್ಜಿದಾರರು ಮೂಲತಃ ರಾಜ್‌ಗೋರ್ ಬ್ರಾಹ್ಮಣ ಸಮುದಾಯದವರಾಗಿದ್ದರೂ, ತಾರತಮ್ಯದಿಂದಾಗಿ ಸಮಸ್ಯೆ ಅನುಭವಿಸಿದ್ದಾರೆ ಎಂದರು.

ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ- ನೇಪಾಳ ಪ್ರಧಾನಿ ಭೇಟಿ.. ಉಭಯ ರಾಷ್ಟ್ರಗಳ ಸಹಕಾರದ ಬಗ್ಗೆ ಚರ್ಚೆ

Last Updated : Apr 2, 2022, 6:08 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.