ಜಲಂಧರ್(ಪಂಜಾಬ್): ದೇಶದ ಗಡಿ ರಾಜ್ಯಗಳಲ್ಲಿ ಅನುಮಾನಾಸ್ಪದ ಘಟನೆಗಳು ನಡೆಯುತ್ತಿವೆ ಎಂಬ ವಿಚಾರಕ್ಕೆ ಕೆಲವೊಂದು ಘಟನೆಗಳು ಪುಷ್ಟಿ ನೀಡುತ್ತಿವೆ. ಐ ಲವ್ ಪಾಕಿಸ್ತಾನ್ ಎಂಬ ಬರಹವಿರುವ ಬಲೂನ್ ಪಂಜಾಬ್ನ ಜಲಂಧರ್ ಆದಂಪುರದ ಸಮೀಪದಲ್ಲಿರುವ ಗದ್ದೆಯಲ್ಲಿ ಕಾಣಿಸಿಕೊಂಡಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಬಲೂನ್ ಅನ್ನು ವಶಕ್ಕೆ ಪಡೆದಿದ್ದಾರೆ. ಐ ಲವ್ ಪಾಕಿಸ್ತಾನ್ ಎಂಬ ವಾಕ್ಯದ ಜೊತೆಗೆ ಪಾಕಿಸ್ತಾನದ ಧ್ವಜವನ್ನೂ ಬಲೂನ್ ಮೇಲೆ ಮುದ್ರಿಸಲಾಗಿದೆ.
ಸ್ಥಳೀಯರು ನೀಡಿದ ಮಾಹಿತಿ ಆಧಾರದಲ್ಲಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಈ ಕುರಿತಂತೆ ಪ್ರತಿಕ್ರಿಯೆ ನೀಡಿದ್ದಾರೆ. ಬಲೂನ್ ಪಾಕಿಸ್ತಾನದಿಂದ ಅಷ್ಟು ದೂರದವರೆಗೆ ಹಾರುವುದು ಸಾಧ್ಯವಿಲ್ಲ ಎಂದಿರುವ ಆದಂಪುರ ಪೊಲೀಸ್ ಠಾಣೆಯ ಎಸ್‌ಎಚ್‌ಒ ಹರ್ಜಿಂದರ್ ಸಿಂಗ್, ಆದಂಪುರದಲ್ಲಿ ವಾಯುಪಡೆಯ ನೆಲೆ ಮತ್ತು ವಿಮಾನ ನಿಲ್ದಾಣವೂ ಇರುವ ಕಾರಣದಿಂದ ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಔದಾರ್ಯ ಮೆರೆದ ಭಾರತ.. ಮಹಿಳೆ ಸೇರಿ ಮೂವರು ಪಾಕ್ ಕೈದಿಗಳ ಬಿಡುಗಡೆ..