ETV Bharat / bharat

ವ್ಯಕ್ತಿಯಲ್ಲಿ ಪತ್ತೆಯಾಯ್ತು ಗರ್ಭಕೋಶ; ಇದು ವೈದ್ಯಕೀಯ ಲೋಕದ ಅಚ್ಚರಿಯಲ್ಲ, ಪ್ರಮಾದ

ತಪ್ಪು ಮಾಡುವುದು ಮನುಷ್ಯನ ಸಹಜ ಗುಣ. ಆದರೆ, ಈ ರೀತಿಯ ತಪ್ಪುಗಳು ಪೇಚಿಗೆ ಈಡು ಮಾಡುವಂತೆ ಮಾಡಿದ್ದು, ಅನೇಕ ಸಮಸ್ಯೆಗೆ ಕಾರಣವಾಗಿದೆ.

a-60-year-old-man-found-a-uterus-this-is-not-a-surprise-of-the-medical-world-but-a-mistake

author img

By

Published : Feb 27, 2023, 3:06 PM IST

ಛಾಪ್ರಾ: ವೈದ್ಯಕೀಯ ಲೋಕದಲ್ಲಿ ಕೆಲವು ವಿಸ್ಮಯಗಳು ವರದಿಯಾಗುತ್ತಲೇ ಇರುತ್ತವೆ. ಆದರೆ, ಇಲ್ಲಿ ನಡೆದಿರುವ ಘಟನೆ ಮಾತ್ರ ವಿಸ್ಮಯವಲ್ಲ. ಬದಲಾಗಿ ಮನುಷ್ಯನ ತಪ್ಪಿನಿಂದ ನಡೆದ ವಿಚಾರ ಎಂಬ ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿದ್ದು, ಇಡೀ ಆಸ್ಪತ್ರೆಯ ಸಿಬ್ಬಂದಿ ಇದೀಗ ಪೇಚಿಗೆ ಸಿಲುಕಿರುವ ಘಟನೆ ಬಿಹಾರದ ಛಾಪ್ರಾದಲ್ಲಿ ನಡೆದಿದೆ.

ಏನಿದು ಘಟನೆ: ಛಾಪ್ರಾದ ಸ್ಥಳೀಯ ವ್ಯಕ್ತಿಯಾದ 60 ವರ್ಷದ ಬಧೇ ಮಿಯಾನ್​ ಮೂತ್ರಪಿಂಡದ ಕಾಯಿಲೆಗೆ ಒಳಗಾಗಿದ್ದರು. ಇವರಿಗೆ ಅಲ್ಟ್ರಾ ಸೌಂಡ್​ ಪರೀಕ್ಷೆಗೆ ಒಳಗಾಗುವಂತೆ ವೈದ್ಯರು ತಿಳಿಸಿದ್ದರು. ಅದರಂತೆ ಅವರು ಪರೀಕ್ಷೆಗೆ ಒಳಗಾದಾಗ ಅವರಲ್ಲಿ ಗರ್ಭಕೋಶ ಪತ್ತೆಯಾಗಿದೆ. ಇದನ್ನು ಕೇಳಿದ ಅವರ ಕುಟುಂಬದವರು ಆಘಾತಕ್ಕೆ ಒಳಗಾಗಿದ್ದಾರೆ. ಇಷ್ಟು ವರ್ಷ ಇಲ್ಲದ ಈ ಸಮಸ್ಯೆ ಈ ಇಳಿವಯಸ್ಸಿನಲ್ಲಿ ಉಂಟಾಯಿತಾ ಎಂದು ಚಿಂತೆಗೆ ಕೂಡ ಕಾರಣವಾಗುತ್ತದೆ. ಇನ್ನು ಈ ಸುದ್ದಿ ತಿಳಿಯುತ್ತಿದ್ದಂತೆ ವೈದ್ಯರು ಕೂಡ ಗೊಂದಲಗೊಂಡಿದ್ದಾರೆ. ವೈದ್ಯಕೀಯ ಲೋಕದಲ್ಲಿ ಅಚ್ಚರಿಯಾಗುವಂತೆ ಈ ಘಟನೆ ನಡೆದಿದ್ಯಾ ಎಂಬ ಆತಂಕಕ್ಕೆ ವೈದ್ಯರು ಮತ್ತು ಕುಟುಂಬಸ್ಥರು ಒಳಗಾಗಿದ್ದಾರೆ. ಈ ಸಂಬಂಧ ವೈದ್ಯರೊಂದಿಗೆ ಕುಟುಂಬ ಮಾತುಕತೆ ನಡೆಸಿದ್ದು, ಎರಡನೇ ಪರೀಕ್ಷೆಗೆ ಒಳಗಾಗುವಂತೆ ಸೂಚಿಸಿದ್ದಾರೆ

ಮತ್ತೊಮ್ಮೆ ಪರೀಕ್ಷೆಗೆ ಒಳಗಾದಾಗ ಆ ವ್ಯಕ್ತಿಯ ದೇಹದಲ್ಲಿ ಯಾವುದೇ ಗರ್ಭ ಕೋಶ ಪತ್ತೆಯಾಗಿಲ್ಲ. ಇದು ಅಲ್ಟ್ರಾ ಸೌಂಡ್​ನಲ್ಲಿ ಪರೀಕ್ಷಕರು ಮಾಡಿದ ತಪ್ಪಿನಿಂದ ಈ ಘಟನೆ ನಡೆದಿದೆ. '60 ವರ್ಷದ ಬಧೇ ಮಿಯಾಮ್​ ಅವರಲ್ಲಿ ಗರ್ಭಕೋಶ ಪತ್ತೆಯಾಗಿಲ್ಲ ಇದು ಮಾನವ ತಪ್ಪು. ನಿರ್ಲಕ್ಷ್ಯದಿಂದ ಉಂಟಾಗಿದೆ' ಎಂದು ಆಸ್ಪತ್ರೆ ಆಡಳಿತ ಮಂಡಳಿ ಸ್ಪಷ್ಟಪಡಸಿದೆ.

ಇದೇ ವೇಳೆ ಹೇಳಿಕೆ ಬಿಡುಗಡೆ ಮಾಡಿರುವ ಮಂಡಳಿ, ಈ ರೀತಿ ವರದಿಯಿಂದಾಗಿ ರೋಗಿಯ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಈ ಹಿನ್ನಲೆ ಎಚ್ಚರವಹಿಸಬೇಕು. ಈ ಹಿನ್ನಲೆ ಘಟನೆ ಸಂಬಂಧ ಸ್ಪಷ್ಟನೆ ನೀಡುವಂತೆ ಸ್ಕ್ಯಾನಿಂಗ್​ ಸೆಂಟರ್​ಗೆ ಸೂಚಿಸಿದ್ದಾರೆ. ಜೊತೆಗೆ ಭವಿಷ್ಯದಲ್ಲಿ ಈ ರೀತಿಯ ಪ್ರಮಾದಗಳು ನಡೆಯದಂತೆ ಜಾಗೃತಿ ವಹಿಸಬೇಕು ಎಂದು ತಿಳಿಸಲಾಗಿದೆ ಎಂದು ಡಾ ಸಂತೋಷ್​ ಕುಮಾರ್​ ತಿಳಿಸಿದ್ದಾರೆ.

ಮೂತ್ರಪಿಂಡದ ಪರೀಕ್ಷೆಗೆ ಪುರುಷ ಮತ್ತು ಮಹಿಳೆ ಒಬ್ಬರ ನಂತರ ಒಬ್ಬರು ಒಳಗಾಗಿದ್ದಾರೆ. ಈ ವೇಳೆ ಗೊಂದಲದಿಂದ ಈ ಸಮಸ್ಯೆ ಉಂಟಾಗಿದೆ. 60 ವರ್ಷದ ಬಧೇ ಮಿಯಾನ್​ನಲ್ಲಿ ಯಾವುದೇ ಗರ್ಭಕೋಶ ಕಂಡು ಬಂದಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಇನ್ನು ಈ ವರದಿ ಸಂಬಂಧ ಸ್ಕ್ಯಾನಿಂಗ್​ ಸೆಂಟರ್​ ಮೇಲೆ ದೂರು ನೀಡುವುದರ ಕುರಿತು ಕುಟುಂಬಸ್ಥರು ಯೋಚಿಸಿಲ್ಲ. ಆದರೆ, ಈ ಸುದ್ದಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಈ ರೀತಿಯ ಮಹಾ ಪ್ರಮಾದ ನಡೆಸಿದ ಸ್ಕ್ಯಾನಿಂಗ್​ ಸೆಂಟರ್​ ವಿರುದ್ಧ ಆರೋಪಗಳು ಕೇಳಿ ಬಂದಿದೆ.

ಇನ್ನು ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿ, ನಾಲ್ಕು ಮಕ್ಕಳ ತಂದೆ ಆಗಿದ್ದಾರೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: ಡಿಜೆಯಲ್ಲಿ ಹಾಡು ಪ್ಲೇ ಮಾಡುವ ವಿಚಾರ.. ಅತಿಥಿ - ಹೊಟೇಲ್​ ಸಿಬ್ಬಂದಿ ಮಧ್ಯೆ ಮಾರಾಮಾರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.