ಖಂಡ್ವಾ (ಮಧ್ಯ ಪ್ರದೇಶ): 10 ವರ್ಷದ ಬಾಲಕನಿಗೆ ಜೈ ಶ್ರೀರಾಮ್ ಘೋಷಣೆ ಹೇಳುವಂತೆ ಬಲವಂತ ಪಡಿಸಿ ಹಲ್ಲೆ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣ ಸಂಬಂಧ ಆರೋಪಿಗಳ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 295ಎ (ಧಾರ್ಮಿಕ ಭಾವನೆಗೆ ಧಕ್ಕೆ) ಮತ್ತು 323 (ಹಲ್ಲೆ ಯತ್ನ) ಪ್ರಕರಣಗಳನ್ನು ದಾಖಲಿಸಿರುವುದಾಗಿ ಪೊಲೀಸ್ ಉಪವರಿಷ್ಠಾಧಿಕಾರಿ ಅನಿಲ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.
-
Khandwa, Madhya Pradesh | A complaint was received at PS Pandhana that a student who was on his way to his school was beaten by another student and forced to raise 'Jai Shri Ram' slogans. A case has been registered in this matter: AS Chauhan, DSP Khandwa pic.twitter.com/348AB9Nqxo
— ANI MP/CG/Rajasthan (@ANI_MP_CG_RJ) December 29, 2022 " class="align-text-top noRightClick twitterSection" data="
">Khandwa, Madhya Pradesh | A complaint was received at PS Pandhana that a student who was on his way to his school was beaten by another student and forced to raise 'Jai Shri Ram' slogans. A case has been registered in this matter: AS Chauhan, DSP Khandwa pic.twitter.com/348AB9Nqxo
— ANI MP/CG/Rajasthan (@ANI_MP_CG_RJ) December 29, 2022Khandwa, Madhya Pradesh | A complaint was received at PS Pandhana that a student who was on his way to his school was beaten by another student and forced to raise 'Jai Shri Ram' slogans. A case has been registered in this matter: AS Chauhan, DSP Khandwa pic.twitter.com/348AB9Nqxo
— ANI MP/CG/Rajasthan (@ANI_MP_CG_RJ) December 29, 2022
ಬುಧವಾರ ಸಂಜೆ ಐದನೇ ತರಗತಿ ವಿದ್ಯಾರ್ಥಿ ಟ್ಯೂಷನ್ಗೆ ಹೋಗುವಾಗ ಈ ಘಟನೆ ನಡೆದಿದೆ. ಈ ಪ್ರಕರಣ ಸಂಬಂದ ಬಾಲಕನ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಆರೋಪಿಗಳನ್ನು ಬಂಧಿಸಲಾಗಿದೆ.
21 ವರ್ಷದ ಕಾರ್ಮಿಕ, ಕುಡಿದು ಈ ಕೃತ್ಯ ಎಸಗಿದ್ದಾನೆ. ಆರೋಪಿ ಯಾವುದೇ ಸಂಘಟನೆಗೆ ಸೇರಿಲ್ಲ ಎಂಬುದಾಗಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನದಲ್ಲಿ ಹಿಂದೂ ಮಹಿಳೆಯ ಶಿರಚ್ಛೇದಿಸಿ ಬರ್ಬರ ಹತ್ಯೆ: ಭುಗಿಲೆದ್ದ ಆಕ್ರೋಶ