ನವದೆಹಲಿ: 72ನೇ ಗಣರಾಜ್ಯೋತ್ಸವ ಅಂಗವಾಗಿ ದೇಶದ 946 ಪೊಲೀಸರಿಗೆ ರಾಷ್ಟ್ರಪತಿ ಪದಕ ನೀಡಿ ಗೌರವಿಸಲಾಗಿದ್ದು, ಇದರಲ್ಲಿ ರಾಜ್ಯದ 19 ಪೊಲೀಸ್ ಸಿಬ್ಬಂದಿ ಸೇರಿಕೊಂಡಿದ್ದಾರೆ.
ಗಣರಾಜ್ಯೋತ್ಸವ ಅಂಗವಾಗಿ ರಾಷ್ಟ್ರಪತಿ ಪದಕ ಘೋಷಣೆ ಮಾಡಲಾಗಿದ್ದು, ಪ್ರಮುಖವಾಗಿ ಕಳೆದ ವರ್ಷ ಫೆ. 14ರಂದು ನಡೆದಿದ್ದ ಪುಲ್ವಾಮಾ ದಾಳಿಯಲ್ಲಿ ಭಾಗಿಯಾಗಿದ್ದ ಸಿಆರ್ಪಿಎಫ್ನ ಸಹಾಯಕ ಸಬ್ ಇನ್ಸ್ಸ್ಪೆಕ್ಟರ್ ಮೊಹನ್ ಲಾಲ್, ಜಾರ್ಖಂಡ್ನ ಮಾವೋವಾದಿಗಳ ವಿರುದ್ಧ ನಡೆದಿದ್ದ ಗುಂಡಿನ ದಾಳಿಯಲ್ಲಿ ಹುತಾತ್ಮರಾಗಿದ್ದ ಬನುವಾ ಒರಾವೊನ್ ಅವರಿಗೆ ಮರಣೋತ್ತರವಾಗಿ ರಾಷ್ಟ್ರಪತಿಗಳ ಶೌರ್ಯ ಪ್ರಶಸ್ತಿ ನೀಡಲಾಗಿದೆ.
ಇದನ್ನೂ ಓದಿ: ಪದ್ಮ ಪುರಸ್ಕಾರ 2021: ವಿಜೇತರ ಸಂಪೂರ್ಣ ಪಟ್ಟಿ ಇಂತಿದೆ..
ಕೇಂದ್ರ ಗೃಹ ಸಚಿವಾಲಯ ಪ್ರಶಸ್ತಿ ಘೋಷಣೆ ಮಾಡಿದ್ದು, 207 ಪೊಲೀಸ್ ಪದಕ, 89 ರಾಷ್ಟ್ರಪತಿ ಪೊಲೀಸ್ ಪದಕ ಪದಕ ಸೇರಿಕೊಂಡಿವೆ. ಇದರ ಜತೆಗೆ 650 ಪೊಲೀಸ್ ಪದಕ ಇವೆ.