ಟೋಕಿಯೊ: ಮಾರಣಾಂತಿಕ ಕೊರೊನಾ ವೈರಸ್ ಪ್ರತಿಷ್ಟಿತ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸಂಚಲನ ಮೂಡಿಸುತ್ತಿದೆ. ಈಗಾಗಲೇ ವಿವಿಧ ದೇಶಗಳ ಕ್ರೀಡಾಪಟುಗಳು ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿದ್ದಾರೆ. ಈ ಬೆನ್ನಲ್ಲೇ ಕೊರೊನಾ ವೈರಸ್ ಹರಡುವುದನ್ನು ತಡೆಯಲು ಜಪಾನ್ ಸರ್ಕಾರ ಸೂಕ್ತ ಕ್ರಮ ಕೈಗೊಂಡಿದೆ.
ಟೋಕಿಯೊ ಒಲಿಂಪಿಕ್ಸ್-2020 ರಲ್ಲಿ ಎಲ್ಲರ ಆರೋಗ್ಯದ ದೃಷ್ಟಿಯಿಂದ ಕೋವಿಡ್ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ. ಭಾಗವಹಿಸುವ ಎಲ್ಲರೂ ಕೂಡ ಆರೋಗ್ಯದ ಜೊತೆಗೆ ಒಲಿಂಪಿಕ್ಸ್ ನಿಯಮಾವಳಿಗಳನ್ನು ಕಾಪಾಡಿಕೊಳ್ಳಬೇಕು ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಮನವಿ ಮಾಡಿದೆ. ಇನ್ನು ಜುಲೈ 1 ರಿಂದ 31 ರವರೆಗೆ ಒಟ್ಟು 448,815 ಮಂದಿಯನ್ನು ಸ್ಕ್ರೀನಿಂಗ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಇದರಲ್ಲಿ 90 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದೆ ಎಂದು ಒಲಿಂಪಿಕ್ ಸಮಿತಿ ಮಾಹಿತಿ ನೀಡಿದೆ.
-
COVID-19 testing stats from 1 to 31 July under the authority of @Tokyo2020:
— IOC MEDIA (@iocmedia) August 2, 2021 " class="align-text-top noRightClick twitterSection" data="
448,815 screening tests
90 confirmed positives
0.02% positivity rate
41,458+ airport tests for Games participants
35 confirmed positives
<0.08% positivity ratehttps://t.co/mYTo04Dw5i
">COVID-19 testing stats from 1 to 31 July under the authority of @Tokyo2020:
— IOC MEDIA (@iocmedia) August 2, 2021
448,815 screening tests
90 confirmed positives
0.02% positivity rate
41,458+ airport tests for Games participants
35 confirmed positives
<0.08% positivity ratehttps://t.co/mYTo04Dw5iCOVID-19 testing stats from 1 to 31 July under the authority of @Tokyo2020:
— IOC MEDIA (@iocmedia) August 2, 2021
448,815 screening tests
90 confirmed positives
0.02% positivity rate
41,458+ airport tests for Games participants
35 confirmed positives
<0.08% positivity ratehttps://t.co/mYTo04Dw5i
ಇನ್ನು 41,458 ಕ್ಕೂ ಹೆಚ್ಚು ಮಂದಿ ಕ್ರೀಡಾಪಟುಗಳನ್ನು ಟೆಸ್ಟ್ ಮಾಡಲಾಗಿದ್ದು, ಇದರಲ್ಲಿ 35 ಜನರಿಗೆ ಸೋಂಕು ತಗಲಿದೆ. ಪಾಸಿಟಿವಿಟಿ ದರ ಶೇ 0.08 ಎಂದು ಒಲಿಂಪಿಕ್ಸ್ ಆಯೋಜಕರು ತಿಳಿಸಿದ್ದಾರೆ.
ಭಾರತದಲ್ಲಿ ಹೊಸದಾಗಿ ಇಂದು 40,134 ಜನರಿಗೆ ಕೋವಿಡ್ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 3,16,95,958 ಕ್ಕೆ ಏರಿದೆ. 36,946 ಮಂದಿ ಸೋಂಕಿತನಿಂದ ಚೇತರಿಸಿಕೊಂಡಿದ್ದು, ಆ ಮೂಲಕ ನಿನ್ನೆವರೆಗೆ 3,08,57,467 ಮಂದಿ ಗುಣಮುಖರಾಗಿದ್ದಾರೆ.