ETV Bharat / bharat

ನಿಲ್ದಾಣದಲ್ಲಿ ಹಳಿ ತಪ್ಪಿದ ಗೂಡ್ಸ್ ರೈಲು.. 9 ರೈಲುಗಳ ಸಂಚಾರ ರದ್ದು - ಚೆನ್ನೈ ಹೌರಾ ಮುಖ್ಯ ಮಾರ್ಗ

ರಾಜಮಹೇಂದ್ರವರಂ ರೈಲು ನಿಲ್ದಾಣದ ಬಳಿ ಬುಧವಾರ ಬೆಳಗಿನಜಾವ 3 ಗಂಟೆಗೆ ಗೂಡ್ಸ್ ರೈಲು ಹಳಿತಪ್ಪಿದೆ. ವಿಜಯವಾಡದಿಂದ ರೈಲ್ವೆ ಅಧಿಕಾರಿಗಳ ತಂಡ ಆಗಮಿಸಿದ್ದು, ರೈಲು ಮಾರ್ಗದಲ್ಲಿ ತೀವ್ರ ದುರಸ್ತಿ ಕಾರ್ಯ ಕೈಗೊಂಡಿದೆ.

Goods train derailed near Rajamahendravaram station
ರಾಜಮಹೇಂದ್ರವರಂ ನಿಲ್ದಾಣದ ಬಳಿ ಹಳಿತಪ್ಪಿದ ಗೂಡ್ಸ್ ರೈಲು
author img

By

Published : Nov 9, 2022, 2:07 PM IST

Updated : Nov 9, 2022, 3:14 PM IST

ಅಮರಾವತಿ (ಆಂಧ್ರಪ್ರದೇಶದ) : ರಾಜಮಹೇಂದ್ರವರಂ ರೈಲು ನಿಲ್ದಾಣದ ಬಳಿಯ ಮುಖ್ಯಮಾರ್ಗದಲ್ಲಿ ಬುಧವಾರ ಬೆಳಗ್ಗೆ 3 ಗಂಟೆಗೆ ಗೂಡ್ಸ್ ರೈಲು ಹಳಿತಪ್ಪಿದೆ. ಹಳಿತಪ್ಪಿದ ಗೂಡ್ಸ್ ರೈಲಿನಿಂದಾಗಿ ಚೆನ್ನೈ ಹೌರಾ ಮುಖ್ಯ ಮಾರ್ಗದಲ್ಲಿ ಹೊರಡುವ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ.

ದುರಸ್ತಿ ಕಾರ್ಯ ತೀವ್ರ: ನೂರಾರು ರೈಲುಗಳು ಸಂಚರಿಸಬೇಕಿದ್ದ ಚೆನ್ನೈ-ಹೌರಾ ಮಾರ್ಗದಲ್ಲಿ ಕೇವಲ ಒಂದು ಮಾರ್ಗವನ್ನು ಮಾತ್ರ ತೆರೆಯಲಾಗಿದೆ. ಅಪಘಾತ ಯಾವ ಕಾರಣಕ್ಕೆ ಸಂಭವಿಸಿದೆ ಎಂಬುದು ಗೊತ್ತಾಗಿಲ್ಲ. ವಿಜಯವಾಡದಿಂದ ರೈಲ್ವೆ ಅಧಿಕಾರಿಗಳ ತಂಡ ಆಗಮಿಸಿದ್ದು, ರೈಲು ಅಪಘಾತದ ಮಾರ್ಗದಲ್ಲಿ ದುರಸ್ತಿ ಕಾರ್ಯ ಚುರುಕಿನಿಂದ ನಡೆದಿದೆ.

ಇದರಿಂದ ದಕ್ಷಿಣ ಮಧ್ಯೆ ರೈಲ್ವೆಯು ವಿಜಯವಾಡ-ವಿಶಾಖಪಟ್ಟಣಂ ವಿಭಾಗದಲ್ಲಿ ಒಂಭತ್ತು ಪ್ರಮುಖ ರೈಲುಗಳನ್ನು ಇಂದು ರದ್ದುಗೊಳಿಸಿದೆ. ಇನ್ನೂ 3 ರೈಲುಗಳನ್ನು ವಿವಿಧ ನಿಲ್ದಾಣಗಳ ನಡುವೆ ರದ್ದುಗೊಳಿಸಿದರೆ, ಇನ್ನೊಂದನ್ನು ಎರಡು ಗಂಟೆಗಳ ಕಾಲ ಮರುಹೊಂದಾಣಿಕೆ ಮಾಡಲಾಗಿದೆ ಎಂದು ಎಸ್‌ಸಿಆರ್ ವಿಜಯವಾಡ ವಿಭಾಗದ ಪಿಆರ್ ಒ ನುಸ್ರತ್ ಎಂ ಮಂಡ್ರುಪ್ಕರ್ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.

ಹಳಿ ತಪ್ಪಿದ ಗೂಡ್ಸ್ ರೈಲು

ಗೂಡ್ಸ್ ರೈಲು ಹಳಿ ತಪ್ಪಿದ್ದಕ್ಕೆ ಪ್ಯಾಸೆಂಜರ್​ ರೈಲು ಸಂಚಾರ ರದ್ದು.. 9 ಪ್ಯಾಸೆಂಜರ್ ರೈಲುಗಳನ್ನು ರದ್ದುಗೊಳಿಸಲಾಗಿದ್ದು, 2 ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ. ವಿಜಯವಾಡ-ಲಿಂಗಂಪಲ್ಲಿ ರೈಲು ಎರಡು ಗಂಟೆ ತಡವಾಗಿ ಸಂಚರಿಸುತ್ತಿದೆ. ವಿಜಯವಾಡ-ವಿಶಾಖ ಮತ್ತು ವಿಶಾಖ-ವಿಜಯವಾಡ ನಡುವಿನ ರೈಲುಗಳನ್ನು ರದ್ದುಗೊಳಿಸಲಾಗಿದೆ. ಅಲ್ಲದೆ, ಗುಂಟೂರು-ವಿಶಾಖ, ವಿಶಾಖ-ಗುಂಟೂರು ಮತ್ತು ವಿಜಯವಾಡ-ಗುಂಟೂರು ರೈಲುಗಳನ್ನು ರದ್ದುಗೊಳಿಸಲಾಗಿದೆ.

ಕಾಕಿನಾಡ ಬಂದರು-ವಿಜಯವಾಡ ರೈಲುಗಳನ್ನು ರದ್ದುಗೊಳಿಸಲಾಗಿದೆ. ವಿಜಯವಾಡ-ರಾಜಮಹೇಂದ್ರವರಂ ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ. ಹಳಿತಪ್ಪಿದ ಬೋಗಿಯನ್ನು ತೆರವುಗೊಳಿಸಿದ ನಂತರ ಮಧ್ಯಾಹ್ನದ ವೇಳೆಗೆ ಮಾರ್ಗದಲ್ಲಿ ರೈಲುಗಳ ಸಂಚಾರ ಪುನಾರಂಭವಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ:ನಿಂತಿದ್ದ ಲಾರಿಗೆ ಬೈಕ್​​ ಡಿಕ್ಕಿ: ದೇವರ ಹರಕೆ ತೀರಿಸಲು ಹೋಗಿದ್ದ ಮೂವರ ದುರ್ಮರಣ

Last Updated : Nov 9, 2022, 3:14 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.