ಮಲಪ್ಪುರಂ(ಕೇರಳ): ಮಳೆರಾಯನ ಆರ್ಭಟ ದೇಶದ ಹಲವೆಡೆ ಹೆಚ್ಚಾಗುತ್ತಿದೆ. ಕೆಲವೆಡೆ ನೂರಾರು ಮಂದಿ ತಮ್ಮ ಪ್ರಾಣಗಳನ್ನು ಕಳೆದುಕೊಂಡಿದ್ದು, ಸಾವಿರಾರು ಮಂದಿ ತಮ್ಮ ಮನೆ ಮಠಗಳನ್ನು ಕಳೆದುಕೊಂಡಿದ್ದಾರೆ. ಈ ವೇಳೆ ಕೇರಳದಲ್ಲಿ ಸಾಹಸಮಯವಾದ ರಕ್ಷಣಾ ಕಾರ್ಯವೊಂದು ನಡೆದಿದೆ.
ಕೇರಳದ ಮಲಪ್ಪುರಂನ ಮುಂಡೇರಿ ಎಂಬ ಬಳಿ ಒಂಬತ್ತು ತಿಂಗಳ ಗರ್ಭಿಣಿಯಾಗಿದ್ದ ರಾಧಿಕಾ ಮತ್ತು ಪ್ಲಾಂಟೇಷನ್ನಲ್ಲಿ ಕೆಲಸ ಮಾಡುವ ಸಿಂಧು ಎಂಬುವರನ್ನು ನೀಲಂಬೂರು ಅಗ್ನಿಶಾಮಕ ದಳ ಮತ್ತು ನಾಗರಿಕ ರಕ್ಷಣಾ ಸ್ವಯಂಸೇವಕರ ನೇತೃತ್ವದ ತಂಡ ಅತ್ಯದ್ಭುತ ಕಾರ್ಯಾಚರಣೆ ನಡೆಸಿದೆ.
ನೀಲಂಬೂರು ಕಾಡುಗಳಲ್ಲಿ ಮಳೆ ತೀವ್ರಗೊಂಡಾಗ ಅಲ್ಲಿನ ಚಾಲಿಯಾರ್ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತದೆ. 2019ರ ಪ್ರವಾಹದಲ್ಲಿ ಬುಡಕಟ್ಟು ಕಾಲೋನಿ ಬಳಿಯ ಸೇತುವೆ ಕೊಚ್ಚಿ ಹೋಗಿತ್ತು. ನಂತರ ತಾತ್ಕಾಲಿಕವಾಗಿ ಸೇತುವೆಯನ್ನು ನಿರ್ಮಿಸಲಾಗಿತ್ತು. ಆದರೂ ಆ ಸೇತುವೆ ಪ್ರವಾಹದಲ್ಲಿ ಕೊಚ್ಚಿ ಹೋಗಿತ್ತು.
ಇದನ್ನೂ ಓದಿ: Cylinder Blast: ಮೂವರು ಮಕ್ಕಳು ಸೇರಿ ಒಂದೇ ಕುಟುಂಬದ ಏಳು ಮಂದಿ ಸಾವು
ಈಗ ಗರ್ಭಿಣಿ ರಾಧಿಕಾ ಅವರನ್ನು ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದ್ದು, ಸಿಂಧು ಅವರನ್ನು ಚಿಕಿತ್ಸೆಗಾಗಿ ನೀಲಂಬೂರು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಈಗಾಗಲೇ ಕೇರಳದಲ್ಲಿ 200ಕ್ಕೂ ಹೆಚ್ಚು ಮಂದಿ ನಿರ್ವಸಿತರಾಗಿದ್ದು, ಅವರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗುತ್ತಿದೆ.