ಕೊಯಿಮತ್ತೂರ್: ನಗರದ ಅಂಗಡಿಯೊಂದರಲ್ಲಿ ಇಟ್ಟಿದ್ದ 86 ಕೆಜಿ ತೂಕದ ಬೃಹತ್ ಮೀನು ನೋಡಲು ಜನ ಮುಗಿಬಿದ್ದರು.
ಮಂಗಳವಾರ ಬೆಳಿಗ್ಗೆ ಈ ಬೃಹತ್ ಗಾತ್ರದ ಮೀನನ್ನು ಮಂಗಳೂರಿನಿಂದ ರಾಮನಾಥಪುರಂ ಏರಿಯಾದ ಶಾಪ್ಗೆ ಸಾಗಿಸಲಾಗಿತ್ತು. ಟುನಾ ಹೆಸರಿನ ಈ ಮೀನನ್ನು ಐವರ ಸಹಾಯದಿಂದ ಕೆಳಗಿಳಿಸಲಾಗಿದೆ ಎಂದು ತಿಳಿದುಬಂದಿದೆ.
ಬೃಹತ್ ಗಾತ್ರದ ಮೀನಿನ ಸುದ್ದಿ ಹಬ್ಬುತ್ತಿದ್ದಂತೆ ಅಂಗಡಿತ್ತ ಜನ ಧಾವಿಸಿ, ಫೋಟೋ ಕ್ಲಿಕ್ಕಿಸಿಕೊಂಡರು. ಕ್ಲೀನ್ ಮಾಡಿದ ನಂತರ ಈ ಮೀನು 50-55 ಕೆಜಿಯಷ್ಟು ತೂಕವಿದ್ದು, ಪ್ರತಿ ಕೆಜಿಗೆ 250 ರೂ.ನಂತೆ ಮಾರಾಟ ಮಾಡಲಾಯಿತು.
ಇದೇ ಅಂಗಡಿಯಲ್ಲಿ ಕೆಲ ತಿಂಗಳ ಹಿಂದೆ 56 ಕೆಜಿ ಮೀನು ಕಂಡುಬಂದಿತ್ತು. ಇದು ಕಬೀರ್ ಎಂಬುವವರ ಅಂಗಡಿಯಾಗಿದೆ. ಬೃಹತ್ ಮೀನುಗಳನ್ನು ಹರಾಜಿನಲ್ಲಿ ಖರೀದಿಸಿ ಕಬೀರ್ ಅಂಗಡಿಗೆ ತರುತ್ತಾರೆ.
(ಇದನ್ನೂ ಓದಿ: ಸಿಡಿ ಕೇಸ್ : ವಿಶೇಷ ತನಿಖಾದಳದ ತನಿಖೆ ಅನುಮೋದಿಸಿದ ಎಸ್ಐಟಿ ಮುಖ್ಯಸ್ಥ)