ಹರಿದ್ವಾರ: ಉತ್ತರಾಖಂಡ್ನಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಿರುವ ಬೆನ್ನಲ್ಲೇ ಇಲ್ಲಿನ ಬಾಬಾ ರಾಮ್ದೇವ್ ಯೋಗ ಪೀಠ ಹಾಗೂ ಆಚಾರ್ಯಕುಲಂನಲ್ಲಿ ಬರೋಬ್ಬರಿ 83 ಮಂದಿಗೆ ಕೊರೊನಾ ದೃಢವಾಗಿದೆ.
ಯೋಗ ಗ್ರಾಮದ ಯೋಗಪೀಠ ಮತ್ತು ಆಚಾರ್ಯಕುಲಂನಲ್ಲಿ 83 ಜನರಿಗೆ ಸೋಂಕು ದೃಢವಾದ ಬಳಿಕ ಆರೋಗ್ಯ ಇಲಾಖೆಯು ಈ ಸಂಸ್ಥೆಯ ಮೇಲೆ ನಿಗಾ ಇಟ್ಟಿದೆ.
ಉತ್ತರಾಖಂಡ್ ಸಚಿವಾಲಯದಲ್ಲೇ ಕೊರೊನಾ
ಉತ್ತರಾಖಂಡ್ ಸರ್ಕಾರದ ವಿವಿಧ ಸಚಿವಾಲಯದ ಸುಮಾರು 30ರಿಂದ 35 ಸಿಬ್ಬಂದಿಗೆ ಕೊರೊನಾ ದೃಢವಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ಅಲ್ಲದೆ ಕಳೆದ ತಿಂಗಳು ಉತ್ತರಾಖಂಡ್ ಸಿಎಂ ತಿರಥ್ ಸಿಂಗ್ ರಾವಥ್ಗೂ ಕೊರೊನಾ ವಕ್ಕರಿಸಿತ್ತು.