ETV Bharat / bharat

ಹಿಂದೂ ಧರ್ಮಕ್ಕೆ ವಾಪಸ್​ ಆದ 80 ಮಂದಿ..! - ಹಿಂದೂ ಧರ್ಮಕ್ಕೆ ವಾಪಸ್​ ಆದ 80 ಮಂದಿ

ಮೂಲತಃ ಹಿಂದೂಗಳಾಗಿದ್ದ ಇವರೆಲ್ಲರಿಗೆ ಕೆಲ ವರ್ಷಗಳ ಹಿಂದೆ ನಾಯಕರೊಬ್ಬರು ಕಿರುಕುಳ ನೀಡಿದ್ದಲ್ಲದೇ, ಜಮೀನು ಮತ್ತು ಆಸ್ತಿ ಕಬಳಿಸಿ ಕಿರುಕುಳ ನೀಡಿದ್ದರು ಎಂದು ಆರೋಪಿಸಿದ್ದಾರೆ. ಇದರಿಂದ ಬೇಸತ್ತ ರಾಂಪುರದ ವಿವಿಧ ಕುಟುಂಬಗಳ 80 ಜನರು ಭಾನುವಾರ ಹಿಂದೂ ಧರ್ಮಕ್ಕೆ ಮತ್ತೆ ಮರಳುವುದಾಗಿ ಹೇಳಿದ್ದಾರೆ.

80 people return to hinduism in muzaffarnagar
ಹಿಂದು ಧರ್ಮಕ್ಕೆ ಮರಳಿದ ಒಂದೇ ಜಿಲ್ಲೆಯ 80 ಮಂದಿ
author img

By

Published : Dec 12, 2022, 1:52 PM IST

ಮುಜಾಫರ್‌ನಗರ (ಉತ್ತರಪ್ರದೇಶ): ಮುಜಾಫರ್‌ನಗರ ಜಿಲ್ಲೆಯಲ್ಲಿ ಸುಮಾರು 80 ಮಂದಿ ಇಸ್ಲಾಂ ಧರ್ಮ ತೊರೆದು ಹಿಂದೂ ಧರ್ಮಕ್ಕೆ ಮರಳಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ. ಮತಾಂತರವಾದ ಎಲ್ಲಾ ಜನರು ಧೋಬಿ ಸಮುದಾಯದವರಾಗಿದ್ದು ರಾಂಪುರ ಜಿಲ್ಲೆಗೆ ಸೇರಿದವರು ಎಂದು ತಿಳಿದು ಬಂದಿದೆ.

ಮೂಲತಃ ಹಿಂದೂಗಳಾಗಿದ್ದ ಇವರೆಲ್ಲರು ಕೆಲ ವರ್ಷಗಳ ಹಿಂದೆ ಸಮಾಜವಾದಿ ಪಕ್ಷದ ನಾಯಕ ಆಜಂ ಖಾನ್ ಕಿರುಕುಳದಿಂದ ನಾವು ಬೇಸತ್ತಿದ್ದೇವೆ ಎಂದು ಆರೋಪಿಸಿದ್ದಾರೆ. ಇದರಿಂದ ಬೇಸತ್ತ ರಾಂಪುರದ ವಿವಿಧ ಕುಟುಂಬಗಳ 80 ಜನರು ಭಾನುವಾರ ಹಿಂದೂ ಧರ್ಮವನ್ನು ಅಳವಡಿಸಿಕೊಳ್ಳುವುದಾಗಿ ಹೇಳಿದ್ದಾರೆ.

ಹಾಗಾಗಿ ಬಾಘ್ರಾ ಬ್ಲಾಕ್‌ನಲ್ಲಿರುವ ಯೋಗ ಸಾಧನಾ ಆಶ್ರಮದ ಮಹಾರಾಜ್ ಯಶ್ವೀರ್ ಅವರು ಗಂಗಾಜಲವನ್ನು ಶುದ್ಧೀಕರಿಸಿ ಆ 80 ಜನರ ಎಲ್ಲರ ಕೊರಳಿಗೆ ಪವಿತ್ರ ದಾರವನ್ನು ಧರಿಸಿ ಗಾಯತ್ರಿ ಮಂತ್ರ ಪಠಿಸುವುದರೊಂದಿಗೆ ಯಾಗವನ್ನು ಮಾಡಿ ,ಅವರನ್ನು ಇಸ್ಲಾಂ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರಿಸಿದರು.

ನಮ್ಮನ್ನು ಇಸ್ಲಾಂಗೆ ವರ್ಗಾಯಿಸಿ ಅವರು ನಮಗೆ ಒಳ್ಳೆಯದನ್ನು ಮಾಡಲಿಲ್ಲ. ಬದಲಿಗೆ ಇದರಿಂದ ನೋವು ತಿಂದದ್ದೆ ಹೆಚ್ಚು ಎಂದು ನೊಂದ ಮಹಿಳೆಯೊಬ್ಬರು ಹೇಳಿಕೊಂಡಿದ್ದಾರೆ. ಹರ್ಜಾನಾದಿಂದ ಈಗ ಸವಿತಾ ಆದ ಈಕೆ ಒತ್ತಡಕ್ಕೆ ಮಣಿದು ನಾನು ಮುಸಲ್ಮಾನಳಾದೆ. ಆಜಂ ಖಾನ್‌ನಿಂದಾಗಿ ನಮ್ಮಂತೆ ಲಕ್ಷಾಂತರ ಜನರು ತೊಂದರೆಗೀಡಾಗಿದ್ದಾರೆ ನಮ್ಮನ್ನು ಬಲವಂತವಾಗಿ ಮುಸ್ಲಿಮರನ್ನಾಗಿ ಮಾಡಲಾಗಿತ್ತು ಎಂದು ಆರೋಪಿಸಿದ್ದಾರೆ.

ಮುಖ್ಯವಾಗಿ ಇವರೆಲ್ಲರನ್ನೂ ಧರ್ಮಕ್ಕೆ ಮರಳಿ ತಂದವರು ಯಶ್ವೀರ್ ಮಹಾರಾಜ್. ಇವರು ರಾಂಪುರ ನಿವಾಸಿ ಧೋಬಿ ಸಮಾಜದ ಅನೇಕ ದಲಿತ ಕುಟುಂಬಗಳ 80 ಸದಸ್ಯರನ್ನು ಹಿಂದೂ ಧರ್ಮಕ್ಕೆ ಮರಳುವಂತೆ ಮಾಡಿದ್ದಾರೆ. ಮಹಾರಾಜ್ ಯಶ್ವೀರ್ ಅವರು ಇಲ್ಲಿಯವರೆಗೆ ಸುಮಾರು 530 ಜನರನ್ನು ಹಿಂದೂ ಧರ್ಮಕ್ಕೆ ಮರಳಿ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ; 3ನೇ ಹಂತದ ಮೆಟ್ರೋ ಸುರಂಗ ಪರೀಕ್ಷೆ ಯಶಸ್ವಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.